ಸರ್ಕಾರ ಅನುಮತಿ ಕೊಟ್ರು ಇನ್ನು 2 ವಾರ ಥಿಯೇಟರ್​​​ ಓಪನ್​​​​ ಇಲ್ಲ -ಕಾರಣವೇನು?

ಸರ್ಕಾರ ಅನುಮತಿ ಕೊಟ್ರು ಇನ್ನು 2 ವಾರ ಥಿಯೇಟರ್​​​ ಓಪನ್​​​​ ಇಲ್ಲ -ಕಾರಣವೇನು?

ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ನಾಲ್ಕನೇ ಹಂತದ ಅನ್​ಲಾಕ್ ಜಾರಿಯಾಗಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲಾಗಿದೆ. ಅದರನ್ವಯ ಸಿನಿಮಾ ಥಿಯೇಟರ್ಸ್​ ಮತ್ತು ರಂಗ ಮಂದಿರಗಳ ಆರಂಭಕ್ಕೂ ಸರ್ಕಾರ ಹಸಿರು ನಿಶಾನೆ ತೋರಿದೆ. ಆದರೆ ಸರ್ಕಾರ ಅವಕಾಶ ನೀಡಿದ್ರು ಇನ್ನು ಎರಡು ವಾರ ಥಿಯೇಟರ್ಸ್ ಓಪನ್ ಆಗಲ್ಲ ಎಂದು ಪ್ರರ್ದಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ನ್ಯೂಸ್ ಫಸ್ಟ್ ಗೆ ತಿಳಿಸಿದ್ದಾರೆ.

ಸರ್ಕಾರ ಥಿಯೇಟರ್ಸ್ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವುದು ಉದ್ಯಮಕ್ಕೆ ಆಶಾದಯಕ ಬೆಳವಣಿಗೆಯಾಗಿದೆ. ಆದರೆ ಸರ್ಕಾರ ಕೇವಲ ಶೇ.50 ಭರ್ತಿಗೆ ಅವಕಾಶ ನೀಡಿರುವ ಕಾರಣ ನಿರಾಶೆ ಎದುರಾಗಿದೆ.

ಈ ಕುರಿತಂತೆ ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಪ್ರರ್ದಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಕಳೆದ ಮೂರು ತಿಂಗಳಿಂದ ಥಿಯೇಟರ್​​​ಗಳು ಬಂದ್ ಆಗಿದ್ದು, ಏಕಾಏಕಿ ಚಿತ್ರಮಂದಿರಗಳ ತೆರೆಯಲು ಸಾಧ್ಯವಾಗುವುದಿಲ್ಲ. ಚಿತ್ರಮಂದಿರಗಳ ಕ್ಲೀನಿಂಗ್ ಸ್ಯಾನಿಟೈಸೇಷನ್ ಮತ್ತು ಟೆಕ್ನಿಕಲ್ ಆಗಿ ಎಲ್ಲಾ ತಯಾರಿ ಮಾಡಬೇಕು. ಈ ಎಲ್ಲಾ ತಯಾರಿಗೆ ಕನಿಷ್ಠ ಒಂದು ವಾರ ಆದರೂ ಬೇಕು ಎಂದಿದ್ದಾರೆ.

ಈ ನಡುವೆ ಚಿತ್ರ ಮಂದಿಗಳು ಮುಂದಿನ ವಾರವು ಎಂದಿನಂತೆ ಕಾರ್ಯ ನಿರ್ವಹಿಸುವು ಕಷ್ಟಸಾಧ್ಯವಾಗಿದೆ. ಏಕೆಂದರೆ ಇದುವರೆಗೂ ಯಾವುದೇ ಹೊಸ  ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿಲ್ಲ. ಸಿನಿಮಾ ನಿರ್ಮಾಪಕರಿಗೂ ಕೆಲಸವು ಸಮಸ್ಯೆಗಳಿವೆ. ಸಿನಿಮಾ ರಿಲೀಸ್ ಮಾಡಬೇಕಾದ್ರೆ ಅವರು ಕೂಡ ಒಂದಷ್ಟು ತಯಾರಿ ಮಾಡಿಕೊಳ್ಳಬೇಕು. ಅಲ್ಲದೇ ಸದ್ಯ ಸರ್ಕಾರ ಶೇ.50 ಪ್ರೇಕ್ಷಕರ ಭರ್ತಿಗೆ ಮಾತ್ರ ಅನುಮತಿ ಕೊಟ್ಟಿರೋ ಕಾರಣ, ಬಿಗ್​​ಸ್ಟಾರ್​​ಗಳ ಹೈಬಜೆಟ್​​ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಈ ಎಲ್ಲಾ ಕಾರಣದಿಂದ ಕನಿಷ್ಠ ಇನ್ನು ಎರಡು ವಾರ ಸಿನಿಮಾ ಮಂದಿರಗಳು ವೀಕ್ಷಕರಿಗೆ ಲಭ್ಯವಾಗುವುದು ಕಷ್ಟಸಾಧ್ಯವಾಗಿದೆ.

ಒಟ್ಟಿನಲ್ಲಿ ಸರ್ಕಾರ ಅನುಮತಿ ನೀಡಿದರೂ ಗಾಂಧಿನಗರದಲ್ಲಿ ಬಣ್ಣದ ವಾತಾವರಣ ನಿರ್ಮಾಣವಾಗೋಕೆ ಇನ್ನು ಒಂದು ತಿಂಗಳು ಬೇಕಾಗಬಹುದು. ಅಲ್ಲದೆ ಇಂದು ವಾಣಿಜ್ಯ ಮಂಡಳಿಯ ನಿಯೋಗ ಸಿಎಂ ಬಿಎಸ್​​ ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ. ಈಗ ಕೊಟ್ಟಿರುವ ಶೇ.50 ಸೀಟು ಭರ್ತಿ ಅನುಮತಿ ಬದಲಿಗೆ ಶೇ.100ಕ್ಕೆ ಅವಕಾಶ ಕೊಡುವಂತೆ ಮನವಿ ಮಾಡಲಿದ್ದೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಗುಬ್ಬಿ ಜೈರಾಜ್ ತಿಳಿಸಿದ್ದಾರೆ.

The post ಸರ್ಕಾರ ಅನುಮತಿ ಕೊಟ್ರು ಇನ್ನು 2 ವಾರ ಥಿಯೇಟರ್​​​ ಓಪನ್​​​​ ಇಲ್ಲ -ಕಾರಣವೇನು? appeared first on News First Kannada.

Source: newsfirstlive.com

Source link