ಸರ್ಕಾರ ಖಾಸಗಿ ಆಸ್ಪತ್ರೆಗಳ ₹550 ಕೋಟಿ ಬಾಕಿಯುಳಿಸಿಕೊಂಡಿದೆ ಎಂದ PHANA

ಸರ್ಕಾರ ಖಾಸಗಿ ಆಸ್ಪತ್ರೆಗಳ ₹550 ಕೋಟಿ ಬಾಕಿಯುಳಿಸಿಕೊಂಡಿದೆ ಎಂದ PHANA

ಬೆಂಗಳೂರು: ಕೋವಿಡ್​ ಮೂರನೇ ಅಲೆ ಆತಂಕದಲ್ಲಿರುವ ಜನಸಾಮಾನ್ಯರಿಗೆ ಖಾಸಗಿ ಆಸ್ಪತ್ರೆಗಳು ಸರ್ಕಾರ ಹಾಗೂ ಬಿಬಿಎಂಪಿ ಕೋಟಾದಡಿಯಲ್ಲಿ ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಸಿಗುವುದು ಡೌಟ್​ ಎನ್ನಲಾಗ್ತಿದೆ.

ಒದನೇ ಹಾಗೂ ಎರಡನೇ ಅಲೆಯಲ್ಲಿ‌ ಸರ್ಕಾರ ಹಾಗು ಬಿಬಿಎಂಪಿ ಕೋಟಾದವರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆಗಳ ಬಿಲ್​ ಇನ್ನು ಪಾವತಿಯಾಗದ ಕಾರಣ ಮೂರನೇ ಅಲೆಯಲ್ಲಿ ಚಿಕಿತ್ಸೆ ನೀಡುವುದು ಹೇಗೆ..? ಎಂದು ಫನಾ (Private Hospitals and Nursing Homes Association) ಪ್ರಶ್ನೆ ಮಾಡಿದೆ.

ಒಂದನೇ ಅಲೆಯಲ್ಲಿ ಸುಮಾರು 150 ಕೋಟಿ ರೂಪಾಯಿ, ಎರಡನೇ ಅಲೆಯಲ್ಲಿ ಸುಮಾರು 400 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವ ಸರ್ಕಾರ ಬರೋಬ್ಬರಿ ₹550 ಕೋಟಿ ಹಣ ಬಾಕಿ ಉಳಿಸಿಕೊಂಡಿದೆ. ಹೀಗಿರುವಾಗ ಮತ್ತೆ ಮುಂದಿನ ಅಲೆಗೆ ಸಿದ್ಧರಾಗುವಂತೆ ಸೂಚನೆ ನೀಡಿದೆ. ಪರಿಸ್ಥಿತಿ ಹೀಗಿರುವಾಗ ಮೂರನೇ ಅಲೆಗೆ ಸಿದ್ಧತೆ ಮಾಡಿಕೊಳ್ಳುವುದು ಹೇಗೆ ಅಂತ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದೆ.

ಇನ್ನು ನ್ಯೂಸ್​ಫಸ್ಟ್​ನ ಜೊತೆ ಮಾತಾಡಿದ ಫನಾ ಅಧ್ಯಕ್ಷ ಡಾ. ಪ್ರಸನ್ನ ಸರ್ಕಾರ ಇಷ್ಟು ಮೊತ್ತದ ಬಿಲ್​ ಬಾಕಿ ಉಳಿಸಿಕೊಂಡರೆ ಆಸ್ಪತ್ರೆ ನಡೆಸುವದು ಹೇಗೆ..? ಮತ್ತು ಸಿಬ್ಬಂದಿಗಳಿಗೆ ಸಂಬಳ ಕೊಡುವುದು ಹೇಗೆ ಅಂತ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಬಾಕಿ ಹಣವನ್ನು ಪಾವತಿ ಮಾಡುವಂತೆ ಕೇಳಿದರೆ ಸಾಫ್ಟ್​ವೇರ್​ ಸಮಸ್ಯೆ ಎಂದು ಹೇಳಿ ದಿನ ದೂಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಸೋಂಕು ಅಂತ ಹೇಳಲಾಗ್ತಿದೆ ಇಂತಹ ಸಮಯದಲ್ಲಿ ಹೆಚ್ಚುವರಿ ಬೆಡ್, ವೆಂಟಿಲೇಟರ್, ಐಸಿಯು ಅವಶ್ಯಕತೆ ಇದೆ. ಹೀಗೆ ಆದರೆ ಎರಡನೇ ಅಲೆಯಲ್ಲಾದ ಸಮಸ್ಯೆ ಮತ್ತೆ ಮರುಕಳಿಸುತ್ತದೆ ಎಂದು ಎಚ್ಚರಿಸಿದ್ದಾರೆ.

The post ಸರ್ಕಾರ ಖಾಸಗಿ ಆಸ್ಪತ್ರೆಗಳ ₹550 ಕೋಟಿ ಬಾಕಿಯುಳಿಸಿಕೊಂಡಿದೆ ಎಂದ PHANA appeared first on News First Kannada.

Source: newsfirstlive.com

Source link