ಬೆಂಗಳೂರು: ದೆಹಲಿ-ಬೆಂಗಳೂರು, ಬೆಂಗಳೂರು- ದೆಹಲಿ ಮೇಲಿಂದ ಮೇಲೆ ಪ್ರಯಾಣ ಮಾಡಿ, ರಾಜ್ಯ ನಾಯಕರ ಪಾಲಿಗೆ ಪ್ರವಾಸೋದ್ಯಮ ಸಚಿವ, ಸೈನಿಕ, ಸಿ.ಪಿ‌. ಯೋಗೇಶ್ವರ್ ಖಳನಾಯಕರಾದ್ರಾ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.

ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಕೆಡವಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದ ಯೋಗೇಶ್ವರ್.. ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕು ಎಂದು ದೆಹಲಿ-ಬೆಂಗಳೂರಿಗೆ ಓಡಾಡುತ್ತಿದ್ದಾರಂತೆ.. ಯೋಗೇಶ್ವರ್‌ಗೆ ಹೈಕಮಾಂಡ್ ನಾಯಕರಿಂದಲೂ ಕೆಲವೊಂದಿಷ್ಟು ಸಲಹೆ, ಸೂಚನೆ ಬಂದಿದ್ದು.. ರಾಜ್ಯದಲ್ಲಿ ಪರಿಸ್ಥಿತಿ ಸರಿಯಿಲ್ಲ. ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗಿ ಎಂದು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ನಾಯಕರ ಮಾತಿಗೆ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆಗಿರುವ ಯೋಗೇಶ್ವರ್ ಅವರ ನಡೆಗೆ ಬಿಜೆಪಿಯಲ್ಲಿ ಹಲವು ಸಚಿವರುಗಳು ಸೇರಿದಂತೆ ಮುಖಂಡರು ಅಸಮಾಧಾನ ಹೊರಹಾಕಿದ್ದಾರಂತೆ.

ಈಗಿರುವ ಪರಿಸ್ಥಿತಿಯಲ್ಲಿ ಕೋವಿಡ್-19 ಸೋಂಕನ್ನು ತೊಲಗಿಸುವುದು ಆದ್ಯ ಕರ್ತವ್ಯ. ಅದನ್ನು ಬಿಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂಬಂತೆ ನಾಯಕರುಗಳು ನಿಗಾವಹಿಸಿದ್ದಾಂತೆ. ಈ ನಿಟ್ಟಿನಲ್ಲಿ ಕೆಲವೊಬ್ಬರು ನೇರವಾಗಿ ಯೋಗೇಶ್ವರ್ ವಿರುದ್ಧವೇ ತಿರುಗಿಬಿದ್ದಿದ್ದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ ಹಲವರು ಈಗಾಗಲೇ ಅಸಮಾಧಾನ ಹೊರಹಾಕುತ್ತಿದ್ದಾರೆ. ಅಂದು ಸರ್ಕಾರ ತರಲು ಹೀರೋ ಆಗಿದ್ದ ಸಿ.ಪಿ.ಯೋಗೇಶ್ವರ್‌.. ಇಂದು ನಾಯಕತ್ವ ಬದಲಾವಣೆ ಪ್ರಕ್ರಿಯೆಯಲ್ಲಿ ಸಿಲುಕಿ ವಿಲನ್ ಆಗಿದ್ದಾರೆ ಎನ್ನಲಾಗ್ತಿದೆ.

The post ಸರ್ಕಾರ ತರುವಲ್ಲಿ ಹೀರೋ ಆಗಿದ್ದ ಸೈನಿಕ ದೆಹಲಿ-ಬೆಂಗಳೂರು ಸುತ್ತಿ ವಿಲನ್ ಆಗಿಬಿಟ್ರಾ..? appeared first on News First Kannada.

Source: newsfirstlive.com

Source link