ಸರ್ಕಾರ ನಿಯಮಗಳಿಗೆ ಡೋಂಟ್ ಕೇರ್! ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವಿಲ್ಲ | People of Karnataka have neglected not wearing a mask and maintaining a social Distance


ಸರ್ಕಾರ ನಿಯಮಗಳಿಗೆ ಡೋಂಟ್ ಕೇರ್! ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರವಿಲ್ಲ

ಮಾಸ್ಕ್ ಧರಿಸದೆ ತಕರಾರಿ ಖರೀದಿಸುತ್ತಿದ್ದಾರೆ

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಮೂರನೇ ಅಲೆ ಬಗ್ಗೆ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ ರೂಪಾಂತರಿ ಒಮಿಕ್ರಾನ್ ಕೂಡಾ ಕಾಣಿಸಿಕೊಂಡಿದೆ. ಈ ನಡುವೆ ಜನರು ಹೆಚ್ಚು ನಿಗಾ ವಹಿಸಬೇಕು. ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಕೆಲ ನಿಯಮಗಳನ್ನು ಜಾರಿಗೊಳಿಸಿದೆ. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಅಂತ ತಿಳಿಸಿದೆ. ಹೀಗಿದ್ದರೂ ಜನ ಮಾತ್ರ ನಿರ್ಲಕ್ಷ್ಯ ತೋರಿದ್ದಾರೆ.

ಗದಗ ನಗರದ ಪಂಚರಹೊಂಡದ ಬಳಿಯ ತರಕಾರಿ ಮಾರ್ಕೆಟ್​ನಲ್ಲಿ ಜನಸಾಗರವೇ ಸೇರಿದೆ. ಮಾಸ್ಕ್, ಸಾಮಾಜಿಕ ಅಂತರ ಇಲ್ಲದೇ ಜನರು ಖರೀದಿಗೆ ಮುಗಿ ಬಿದ್ದಿದ್ದಾರೆ. ಒಮಿಕ್ರಾನ್ ಭಯವಿಲ್ಲದೇ ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ವ್ಯಾಪಾರಸ್ಥರು ನಿರ್ಲಕ್ಷ್ಯ ಮೆರೆದಿದ್ದಾರೆ. ಕೇವಲ ಗದಗದಲ್ಲಿ ಮಾತ್ರವಲ್ಲ. ರಾಜ್ಯದ ಹಲವೆಡೆ ಇದೇ ರೀತಿ ಜನ ವರ್ತಿಸುತ್ತಿದ್ದಾರೆ. ಧಾರವಾಡದಲ್ಲೂ ಕೊರೊನಾ ಮರೆತು ಜನ ದಿನನಿತ್ಯದ ಸಾಮಗ್ರಿಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

ಸರ್ಕಾರದ ರೂಲ್ಸ್​ಗಳಿಗೆ ಡೋಂಟ್ ಕೇರ್
ಯಾದಗಿರಿಯಲ್ಲಿ ಜನರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿದೆ. ಕೊರೊನಾ ರೂಪಾಂತರಿ ಭಯವಿಲ್ಲದೆ ಓಡಾಡುತ್ತಿರುವ ಜನರಿಗೆ ಹೇಳೋರಿಲ್ಲ ಕೇಳೋರಿಲ್ಲ ಎನ್ನುವಂತೆ ಆಗಿದೆ. ಇನ್ನು ವಿಜಯಪುರದಲ್ಲೂ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ಜನರು ಓಡಾಡುತ್ತಿದ್ದಾರೆ. ಕ್ಯಾಮೆರಾ ನೋಡಿ ಕೆಲವರು ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ.

ಮಾಸ್ಕ್ ಹಾಕದವರಿಗೆ ಬಿಸಿ ಮುಟ್ಟಿಸಿದ ಬಿಬಿಎಂಪಿ
ಬೆಂಗಳೂರಿನ ಮಾರುಕಟ್ಟೆಗಳಿಗೆ ಮಾಸ್ಕ್ ಹಾಕದೆ ಬರುವ ಜನರಿಗೆ ಬಿಬಿಎಂಪಿ ದಂಡ ವಿಧಿಸುತ್ತಿದೆ. ಬಿಬಿಎಂಪಿ ಮಾರ್ಷಲ್​ಗಳು ಮಾಸ್ಕ್ ಧರಿಸದವರಿಗೆ 250 ರೂ. ದಂಡ ಹಾಕುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *