ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | If the government is not able to pay I will pay salary to teachers says HD Revanna


ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ

ಜೆಡಿಎಸ್ ಶಾಸಕ ಎಚ್​. ಡಿ. ರೇವಣ್ಣ

ಬೆಂಗಳೂರು: ಹೊಳೆನರಸೀಪುರ ಕಾಲೇಜಿಗೆ 2 ಸ್ನಾತಕೋತ್ತರ ಕೋರ್ಸ್ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ (HD Revanna) ಪ್ರತಿಕ್ರಿಯೆ ನೀಡಿದ್ದಾರೆ. ಹೆಚ್​.ಡಿ. ಕುಮಾರಸ್ವಾಮಿ (HD Kumaraswamy) ನೀಡಿದ್ದನ್ನು ಅಶ್ವತ್ಥ್ ನಾರಾಯಣ ರದ್ದು ಮಾಡಿದ್ದಾರೆ. ಅಂದರೆ ನಮಗೆ ಕೊಟ್ಟ ಎಲ್ಲ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಯಾಕೆ ರಾಜಕೀಯ? ಉದ್ದೇಶಪೂರ್ವಕವಾಗಿ ಯಾಕೆ ಇದನ್ನು ಸಚಿವರು ತಿರಸ್ಕರಿಸಿದ್ದಾರೆ. ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್​​ಗೆ (Teacher) ಸಂಬಳ ಕೊಡುತ್ತೀನಿ. ಬೇಕಿದ್ದರೆ ಛಾಪಾ ಕಾಗದದ ಮೇಲೆ ಬರೆದುಕೊಡಲು ಸಿದ್ಧ ಎಂದು ತಿಳಿಸಿದ್ದಾರೆ.

ಖಾಸಗಿ ಕಾಲೇಜಿಗೆ ಅನುಮತಿ ಕೊಡಲು ಸಚಿವರಿಗೆ ಆಗುತ್ತದೆ. ಆದರೆ ಸರ್ಕಾರಿ ಕಾಲೇಜಿಗೆ ಅಲ್ಲ. ಕೆಲವರಿಗೆ 300-400 ಕೋಟಿ ರೂ. ನಿಯಮ ಮೀರಿ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ಹಣ ಎಲ್ಲಿ ಕೊಟ್ಟಿದ್ದಾರೆ ಅಂತ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಹೆಚ್​.ಡಿ.ರೇವಣ್ಣ ಆರೋಪ ಮಾಡಿದ್ದಾರೆ.

ಸಿಎಂ ಸಮಸ್ಯೆ ಪರಿಹಾರ ಮಾಡುತ್ತಾರೆ ಎಂಬ ವಿಶ್ವಾಸ ಇದೆ: ಹೆಚ್​.ಡಿ.ರೇವಣ್ಣ

ನಾನು ಮಾತಾಡಿದರೆ ಎಲ್ಲೋ ಹೋಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಸಮಸ್ಯೆ ಸರಿ ಮಾಡುವುದಾಗಿ ಹೇಳಿದ್ದಾರೆ. ನಮ್ಮ ಭಾಗಕ್ಕೆ ಕೋರ್ಸ್ಗೆ ಅನುಮತಿ ಕೊಡಬೇಕು ಎಂದು ಹೆಚ್​.ಡಿ.ರೇವಣ್ಣ ಹೇಳಿದ್ದಾರೆ.

ಹೊಳೆನರಸೀಪುರ ಮಹಿಳಾ ಗೃಹ ವಿಜ್ಞಾನ ಕಾಲೇಜಿಗೆ ಸ್ನಾತಕೋತ್ತರ ಕೋರ್ಸ್ ಮಂಜೂರು ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಹೊಳೆನರಸೀಪುರ ಶಾಸಕ ಹೆಚ್‌.ಡಿ.ರೇವಣ್ಣ ಪ್ರತಿಭಟನೆಗೆ ಮುಂದಾಗಿದ್ದ ಹಿನ್ನೆಲೆ ರೇವಣ್ಣ ಜೊತೆ ದೂರವಾಣಿ ಮೂಲಕ ಸಿಎಂ ಬೊಮ್ಮಾಯಿ‌ ಮಾತುಕತೆ ನಡೆಸಿದ್ದಾರೆ ಶುಕ್ರವಾರ ಸಭೆ ಕರೆಯುವುದಾಗಿ ಸಿಎಂ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕೃಷ್ಣಾದಿಂದ ಶಾಸಕ ಹೆಚ್.ಡಿ.ರೇವಣ್ಣ ವಾಪಸ್​ ಆಗಿದ್ದಾರೆ.

ಶಿರಾಡಿ ಘಾಟ್ ಬಂದ್ ವಿಚಾರ

ನಾನು ಮಂತ್ರಿ ಇದ್ದಾಗ ಈ ಬಗ್ಗೆ ಕ್ರಮ ವಹಿಸಿದ್ದೆ. 15 ವರ್ಷ ಬೇಕಾ ಇದನ್ನು ಸರಿ ಮಾಡೋಕೆ? ಬಿಜೆಪಿ ಅಧ್ಯಕ್ಷರೇ ಓಡಾಡುವ ಜಾಗ ಅದು. ಅವರು ಹೆಲಿಕಾಪ್ಟರ್​ನಲ್ಲಿ ಓಡಾಡುತ್ತಾರೆ ಅಷ್ಟೇ ಎಂದು ಶಿರಾಡಿ ಘಾಟ್ ಬಂದ್ ವಿಚಾರವಾಗಿ ಹೆಚ್​.ಡಿ.ರೇವಣ್ಣ ಮಾತನಾಡಿದ್ದಾರೆ.

ಹಾಸನ ಡಿಸಿಸಿ ಬ್ಯಾಂಕ್ ರಿಸಲ್ಟ್ ತಡೆ ಹಿಡಿದಿರುವ ವಿಚಾರ

ಹಾಸನ ಡಿಸಿಸಿ ಬ್ಯಾಂಕ್ ರಿಸಲ್ಟ್ ಅನ್ನು ಬಿಜೆಪಿಯವರು ತಡೆ ಹಿಡಿದ್ದಾರೆ. ಯಡಿಯೂರಪ್ಪ ಕಾಲದಲ್ಲಿ ಇದನ್ನು ತಡೆ ಹಿಡಿದಿದ್ದರು. ಯಾರೋ ಅರ್ಜಿ ಹಾಕಿದ್ದಾರೆ ಎಂದು ತಡೆ ಹಿಡಿದಿದ್ದಾರೆ ಎಂದು ಹೆಚ್​.ಡಿ.ರೇವಣ್ಣ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *