ಬೆಂಗಳೂರು: ರಾಜ್ಯ ಸರ್ಕಾರ ಇಂದು ಪ್ಯಾಕೇಜ್ ಘೋಷಿಸಿದ್ದು ಈ ಪ್ಯಾಕೇಜ್​ ಕುರಿತು ವಿರೋಧ ಪಕ್ಷಗಳು ಭಾರೀ ಟೀಕೆ ಮಾಡುತ್ತಿವೆ. ಕೊರೊನಾ ಕಷ್ಟದಲ್ಲಿ ಕಣ್ಣೀರಿನಿಂದ ಕೈ ತೊಳೆಯುತ್ತಿರುವ ಜನರಿಗೆ ಈ ಪ್ಯಾಕೇಜ್ ಮೂಲಕ ಕಣ್ಣೊರೆಸೋ ತಂತ್ರವನ್ನಷ್ಟೇ ಮಾಡಿದೆಯೇ ಹೊರತು ಸರ್ಕಾರ ಬಡವರಿಗೆ ನೆರವಾಗುವ ಉದ್ದೇಶ ಇಟ್ಟುಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನ್ಯೂಸ್​ ಫಸ್ಟ್ ಜೊತೆಗೆ ಮಾತನಾಡಿದ ಹೆಚ್​ಡಿಕೆ.. ರಾಜ್ಯ ಸರ್ಕಾರ ಪ್ಯಾಕೇಜ್​ ಘೋಷಿಸುವ ಮೂಲಕ ಹಣ ದೋಚಲು ಮುಂದಾಗಿದೆ. ಹಣವನ್ನ ಜನರಿಗೆ ಯಾವ ಆಧಾರದ ಮೇಲೆ ಹಾಕ್ತೇವೆ, ಅದರ ಮಾನದಂಡಗಳೇನು ಅನ್ನೋದನ್ನ ತಿಳಿಸಿಲ್ಲ. ಈ ಪ್ಯಾಕೇಜ್ ಅಕ್ರಮಗಳಿಗೆ ದಾರಿ ಮಾಡಿಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಬೋರ್ಡ್ ಕಾರ್ಪೊರೇಷನ್​​ಗಳಿಗೆ ಚೇರ್​​ಮನ್​ಗಳನ್ನು ನೇಮಿಸಿ ಅವರಿಗೆ ಗೂಟದ ಕಾರು, ಮನೆಗಳನ್ನ ನೀಡುತ್ತಿದೆ. ಅದನ್ನ ನಿಲ್ಲಿಸಿ ಅದೇ ಹಣವನ್ನ ಜನರ ಕಷ್ಟಕ್ಕೆ ಉಪಯೋಗಿಸಲಿ.. ದೊಡ್ಡ ದೊಡ್ಡ ಯೋಜನೆಗಳನ್ನ 2 ವರ್ಷಗಳಿಗೆ ನಿಲ್ಲಿಸಲಿ.. ಅದೇ ಹಣವನ್ನ ಇಲ್ಲಿ ಬಳಕೆ ಮಾಡಲಿ. 55 ಲಕ್ಷ ಶ್ರಮಿಕ ವರ್ಗದ ಕುಟುಂಬಗಳಿಗೆ 10 ಸಾವಿರ ಹಣ ನೀಡಿದ್ರೂ ಹಣ ಹೊಂದಿಸಬಹುದು. 1 ಕೋಟಿ ಬಿಪಿಎಲ್​ ಕುಟುಂಬಗಳಿಗೆ 10 ಸಾವಿರ ಹಣ ನೀಡಿದ್ರೂ ನಂತರ ಸರ್ಕಾರ ಹಣ ಹೊಂದಿಸಬಹುದು ಎಂದು ಇದೇ ವೇಳೆ ಹೆಚ್​ಡಿಕೆ ಸಲಹೆಗಳನ್ನೂ ನೀಡಿದ್ರು.

The post ಸರ್ಕಾರ ಭಿಕಾರಿಗಳಿಗೆ ಕೊಡುವಂತೆ ಉದ್ಧಟತನದ ಪ್ಯಾಕೇಜ್ ಘೋಷಿಸಿದೆ- ಹೆಚ್​ಡಿಕೆ appeared first on News First Kannada.

Source: newsfirstlive.com

Source link