ಬೆಂಗಳೂರು: ಸಚಿವ ಸಿ.ಪಿ.ಯೋಗೇಶ್ವರ್ ಮಾಧ್ಯಮಗಳಿಗೆ ಮಾತನಾಡಿ.. ಬಿಜೆಪಿ ಸರ್ಕಾರ ರಚನೆಯಾಗುವುದಕ್ಕೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ ಎಂದಿದ್ದಾರೆ.

ಪಕ್ಷದಲ್ಲಿ ನಮ್ಮ ಗೆಳೆಯರು ಏನು ಹೇಳಿದ್ರೂ ನಾವು ಸ್ನೇಹಿತರೇ.. ನಾವೂ ಕೂಡ ಸಿಎಂ ಇನ್ನೂ 2 ವರ್ಷ ಸಿಎಂ ಆಗಿರ್ಲಿ ಅಂತ ಬಯಸ್ತೇವೆ. ಬಿಎಸ್​ವೈ ಮುಖ್ಯಮಂತ್ರಿಯಾಗಲಿ ಅಂತಲೇ ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರ ಫ್ರೆಂಡರ್​ಶಿಪ್​ನ್ನ ಕಿತ್ತು ಬಿಸಾಡಿಸಿ.. ಆಡಳಿತ ವೈಫಲ್ಯನ ಬೇಡ ಅಂತ ಹೇಳಿ ತೆಗೆದುಬಿಟ್ವಿ.. ನಾವು ಮುಖ್ಯಮಂತ್ರಿ ಮಾಡಿದ್ದು. ನಮ್ಮದೂ ಒಂದು ಅಳಿಲು ಸೇವೆ ಇದ್ಯಲ್ಲ ಮುಖ್ಯಮಂತ್ರಿ ಆಗ್ಲಿಕ್ಕೆ ಎಂದರು. ಈ ವೇಳೆ ಮಾಧ್ಯಮದವರು ನಿಮ್ಮ ಅಳಿಲು ಸೇವೆಗೆ ಬೆಲೆ ಸಿಗ್ತಾ ಇಲ್ವ ಎಂದು ಕೇಳಿದ್ದಕ್ಕೆ ಸಿಗ್ತಾ ಇದೆ ಬಿಡಣ್ಣ ಪ್ರೊವೋಕ್ ಮಾಡಬೇಡ ಎಂದು ಅಸಹಾಯಕ ನಗೆ ಬೀರಿದರು.

The post ಸರ್ಕಾರ ರಚನೆ & ಬಿಎಸ್​ವೈ ಸಿಎಂ ಆಗೋದ್ರಲ್ಲಿ ನಮ್ಮದೂ ಅಳಿಲು ಸೇವೆ ಇದೆ-ಸಿಪಿವೈ appeared first on News First Kannada.

Source: newsfirstlive.com

Source link