ಸರ್ಜನ್​ನಿಂದ ಅಲ್​ಖೈದಾ ನಾಯಕನವರೆಗೆ; ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ ಅಯ್ಮನ್ ಅಲ್-ಜವಾಹಿರಿ ಪಯಣ ಹೀಗಿತ್ತು | From a surgeon to Al Qaeda chief: Ayman al Zawahiri killed by United States in drone strike in Kabul


71 ವರ್ಷದ ಅಲ್- ಜವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿ (ಸರ್ಜನ್) ಕೆಲಸ ಮಾಡಿದ್ದರು.

ಸರ್ಜನ್​ನಿಂದ ಅಲ್​ಖೈದಾ ನಾಯಕನವರೆಗೆ; ಅಮೆರಿಕಾದ ಡ್ರೋನ್ ದಾಳಿಗೆ ಬಲಿಯಾದ ಅಯ್ಮನ್ ಅಲ್-ಜವಾಹಿರಿ ಪಯಣ ಹೀಗಿತ್ತು

ಒಸಾಮಾ ಬಿನ್ ಲಾಡೆನ್ ಜೊತೆ ಅಲ್​- ಜವಾಹಿರಿ

Image Credit source: Hindustan Times

ಕಾಬೂಲ್: ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಅಯ್ಮನ್ ಅಲ್-ಜವಾಹಿರಿಯನ್ನು (Ayman al-Zawahiri) ಹತ್ಯೆಗೈದಿರುವುದಾಗಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ (Joe Biden) ಘೋಷಿಸಿದ್ದಾರೆ. ಅಲ್-ಜವಾಹಿರಿಯನ್ನು ಹತ್ಯೆ ಕಾರ್ಯಾಚರಣೆಯ ಸಮಯದಲ್ಲಿ ಕೊಲ್ಲಲ್ಪಟ್ಟಾಗ ಆತ ತನ್ನ ಕುಟುಂಬದೊಂದಿಗೆ ಅವಿತುಕೊಂಡಿದ್ದ. ಆದರೆ, ಆತನ ಕುಟುಂಬದ ಸದಸ್ಯರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಬೈಡೆನ್ ಹೇಳಿದ್ದಾರೆ.

ಅಯ್ಮನ್ ಅಲ್-ಜವಾಹಿರಿ ಬಗೆಗಿನ 5 ಕುತೂಹಲಕಾರಿ ವಿಷಯಗಳು ಇಲ್ಲಿವೆ:

1. ಅಯ್ಮನ್ ಅಲ್- ಜವಾಹಿರಿ ಈಜಿಪ್ಟಿನ ಪ್ರಜೆ. ಅಯ್ಮನ್ ಅಲ್-ಜವಾಹಿರಿ 1951ರ ಜೂನ್ 19ರಂದು ಆಫ್ರಿಕನ್ ರಾಷ್ಟ್ರದ ಗಿಜಾದಲ್ಲಿ ಜನಿಸಿದರು. 2011ರ ಜೂನ್ ತಿಂಗಳಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಮೆರಿಕ ದಾಳಿ ನಡೆಸಿ ಒಸಾಮಾ ಬಿನ್ ಲಾಡೆನ್​ನನ್ನು ಕೊಂದ ನಂತರ ಅಯ್ಮನ್ ಅಲ್-ಜವಾಹಿರಿ ಅವರನ್ನು ಅಲ್-ಖೈದಾದ ಎರಡನೇ ‘ಜನರಲ್ ಎಮಿರ್’ ಎಂದು ಘೋಷಿಸಲಾಯಿತು.

2. ಬ್ಯುಸಿನೆಸ್ ಮತ್ತು ಎಕನಾಮಿಕ್ಸ್​ ಅಡ್ಮಿನಿಸ್ಟ್ರೇಷನ್ ಅಧ್ಯಯನ ಮಾಡಿದ ಅಲ್ ಜವಾಹಿರಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿಯನ್ನು ಸಹ ಪಡೆದರು. 71 ವರ್ಷ ವಯಸ್ಸಿನ ಜವಾಹಿರಿ ಮೂರು ವರ್ಷಗಳ ಕಾಲ ಈಜಿಪ್ಟ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು.

TV9 Kannada


Leave a Reply

Your email address will not be published. Required fields are marked *