ಸರ್ಜಾ ಕುಟುಂಬದ ಬಹುದಿನದ ಕನಸು ನನಸು.. ಆಂಜನೇಯಸ್ವಾಮಿ ದೇಗುಲ ಉದ್ಘಾಟನೆ

ಸರ್ಜಾ ಕುಟುಂಬದ ಬಹುದಿನದ ಕನಸು ನನಸು.. ಆಂಜನೇಯಸ್ವಾಮಿ ದೇಗುಲ ಉದ್ಘಾಟನೆ

ನಟ ಅರ್ಜುನ್ ಸರ್ಜಾ ಅವರ ಬಹುದಿನದ ಕನಸು ನನಸಾಗ್ತಿದೆ. ಸರ್ಜಾ ಫ್ಯಾಮಿಲಿ ಆಂಜನೇಯನ ಭಕ್ತರು ಅನ್ನೋದು ಗೊತ್ತಿರೋ ವಿಚಾರ. ಅದ್ರಲ್ಲೂ ಧ್ರುವ ಸರ್ಜಾ ಭಜರಂಗಿಯ ಅಪ್ಪಟ ಭಕ್ತ ಅನ್ನೋದನ್ನ ಹೊಸದಾಗಿ ಹೇಳಬೇಕಿಲ್ಲ. ಹೀಗಿರೋ ಸರ್ಜಾ ಕುಟುಂಬದಿಂದ ಆಂಜನೇಯ ಸ್ವಾಮಿ ದೇವಸ್ಥಾನವೊಂದು ನಿರ್ಮಾಣ ಆಗಿದೆ. ಅದರ ಉದ್ಘಾಟನಾ ಸಮಾರಂಭ ನಡೆಯುತ್ತಿದೆ.

ಇಂದು ಮತ್ತು ನಾಳೆ‌ ದೇವಾಲಯದ ಉದ್ಘಾಟನಾ ಸಮಾರಂಭ ನಡೆಯಲಿದೆ. ಚನ್ನೈನ ಗುರುಗಂಬಕಂನಲ್ಲಿ ಅರ್ಜುನ್‌ ಸರ್ಜಾ ಆಂಜನೇಯಸ್ವಾಮಿ ದೇವಸ್ಥಾನವನ್ನ ಕಟ್ಟಿಸಿದ್ದಾರೆ. ಇಂದು ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ರಮ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಅರ್ಜುನ್ ಸರ್ಜಾ ದಂಪತಿ, ಪುತ್ರಿ ಐಶ್ವರ್ಯ, ಧ್ರುವಾ ಸರ್ಜಾ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ದೇಗುಲದ ಉದ್ಘಾಟನೆ ಸರಳವಾಗಿ ನೆರವೇರುತ್ತಿದೆ. ಕಾರ್ಯಕ್ರಮ ನೋಡಲು ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಸ್ಟ್ರೀಮ್ ವ್ಯವಸ್ಥೆ ಮಾಡಲಾಗಿದೆ.

The post ಸರ್ಜಾ ಕುಟುಂಬದ ಬಹುದಿನದ ಕನಸು ನನಸು.. ಆಂಜನೇಯಸ್ವಾಮಿ ದೇಗುಲ ಉದ್ಘಾಟನೆ appeared first on News First Kannada.

Source: newsfirstlive.com

Source link