ಉಡುಪಿ: ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ರಾಮ ಮತ್ತು ಆಂಜನೇಯನ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಎರಡು ದಿನಗಳಿಂದ ನಡೆದ ದೇಗುಲದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದರು.

ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳನ್ನು ಅರ್ಜುನ್ ಸರ್ಜಾ ತಮಿಳುನಾಡಿಗೆ ಕರೆಸಿ ದೇವರಿಗೆ ಕುಂಬಾಭಿಷೇಕ ಮಾಡಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಅವಧೂತ ವಿನಯ್ ಗುರೂಜಿ ಕೂಡ ಪಾಲ್ಗೊಂಡಿದ್ದರು.

ಪೇಜಾವರ ಸ್ವಾಮೀಜಿ ಭಗವಾನ್ ಆಂಜನೇಯ ದೇವರ ಬೃಹತ್ ವಿಗ್ರಹಕ್ಕೆ ಜೇನು, ತುಪ್ಪ, ಸಕ್ಕರೆಯ ಅಭಿಷೇಕವನ್ನು ಮಾಡಿ, ಪ್ರಾರ್ಥನೆ ಜೊತೆ ಹೂವಿನ ಪಕಳೆಗಳ ಅಭಿಷೇಕಗೈದರು. ಚೆನ್ನೈನಲ್ಲಿ ಪೇಜಾವರ ಮಠದ ಶಾಖೆ ಇದೆ. ಸರ್ಜಾ ಕುಟುಂಬ ವಿಶ್ವೇಶತೀರ್ಥರ ಕಾಲದಿಂದಲೂ ಪೇಜಾವರ ಮಠದ ಜೊತೆ ಸಂಬಂಧ ಹೊಂದಿದೆ.

The post ಸರ್ಜಾ ಕುಟುಂಬ ನಿರ್ಮಿಸಿರೋ ಆಂಜನೇಯ ದೇಗುಲ ಉದ್ಘಾಟನೆ: ಪೇಜಾವರ ಶ್ರೀ, ವಿನಯ್ ಗುರೂಜಿ ಭಾಗಿ appeared first on News First Kannada.

Source: newsfirstlive.com

Source link