ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸೋಂಕು ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರ, ಕೇರಳ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ 1986 ಅನ್ನು ಜಾರಿಗೆ ತಂದಿದೆ. ಆರೋಗ್ಯ ಸೇವೆ ಜನರ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಅಗತ್ಯವಸ್ತುಗಳ ಗರಿಷ್ಠ ದರ ನಿಗದಿ

  • ಪಿಪಿಇ ಕಿಟ್​​ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು.
  • ಒಂದು ಎನ್95 ಮಾಸ್ಕ್‌ಗೆ 22 ರೂ, ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ, ಎನ್​ಆರ್​ಬಿ ಮಾಸ್ಕ್​ಗೆ 80 ರೂಪಾಯಿ  ನಿಗದಿಗೊಳಿಸಲಾಗಿದೆ.
  • ಫೇಸ್​​ಶೀಲ್ಡ್​ಗೆ 21 ರೂಪಾಯಿ, ಏಪ್ರಾನ್​ಗೆ 12 ರೂಪಾಯಿ.
  • ಅರ್ಧ ಲೀಟರ್ ಸ್ಯಾನಿಟೈಸರ್​​ಗೆ 192 ರೂ., 200 ಎಂ.ಎಲ್​ಗೆ 98 ರೂ. ಹಾಗೂ 100 ಎಂ.ಎಲ್​ ಸ್ಯಾನಿಟೈಸರ್​ಗೆ 55 ರೂ. ಹಣವನ್ನು ನಿಗದಿ ಮಾಡಲಾಗಿದೆ.
  • ಸರ್ಜಿಕಲ್ ಗೌನ್​​ಗೆ 65 ರೂ., ಎಕ್ಸಾಮಿನೇಷನ್​ ಗ್ಲವ್ಸ್​​ಗೆ 5.75 ರೂ., ಸ್ಟೆರೈಲ್ ಗ್ಲವ್ಸ್​ಗೆ 15 ರೂಪಾಯಿ ನಿಗದಿ ಮಾಡಲಾಗಿದೆ.

 

The post ಸರ್ಜಿಕಲ್ ಮಾಸ್ಕ್​ಗೆ ₹3, N95 ಮಾಸ್ಕ್‌ಗೆ ₹22 -ಕೊರೊನಾ ಅಗತ್ಯ ವಸ್ತುಗಳ ಗರಿಷ್ಠ ದರ ನಿಗದಿಗೊಳಿಸಿದ ಕೇರಳ ಸರ್ಕಾರ appeared first on News First Kannada.

Source: newsfirstlive.com

Source link