ಚಾಮರಾಜನಗರ: ಯಾವುದೇ ಸರ್ವೇ ನಡೆಸದೆ ಸರ್ಕಾರದಿಂದ ಬುಡಕಟ್ಟು ಸೋಲಿಗರಿಗೆ ನೀಡಿದ್ದ ಜಮೀನುಗಳಲ್ಲಿ ಆನೆಕಂದಕ ನಿರ್ಮಾಣ ಮಾಡಿರುವ ಆರೋಪ ಚಾಮರಾಜನಗರ ತಾಲೂಕಿನ ಹೊನ್ನೇಗೌಡನಹಳ್ಳಿಯಲ್ಲಿ ಕೇಳಿ ಬಂದಿದೆ.

2001ರಲ್ಲಿ ಎಸ್‍ಟಿ/ಎಸ್‍ಸಿ ಕಾರ್ಪೋರೇಶನ್ ಜಮೀನು ಖರೀದಿಸಿ ಮಾಡಿ ಬುಡಕಟ್ಟು ಜನಾಂಗದ ಸೋಲಿಗರಿಗೆ ಹಂಚಿಕೆ ಮಾಡಿತ್ತು. ಪ್ರತಿ ರೈತ ಕುಟುಂಬಕ್ಕೆ 2 ಎಕರೆಯಂತೆ ಜಮೀನು ಹಂಚಿಕೆ ಮಾಡಲಾಗಿದೆ. ಆದರೆ ಸದ್ಯ ಯಾವುದೇ ಸರ್ವೆ ನಡೆಸದೆ ಅರಣ್ಯ ಇಲಾಖೆಯ ಜಮೀನು ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಆನೆಕಂದಕ ನಿರ್ಮಾಣ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ನಡೆಯಿಂದ ಸೋಲಿಗರಷ್ಟೇ ಅಲ್ಲದೇ ಇತರೇ ರೈತರ ಆತಂಕ ಎದುರಾಗಿದ್ದು, ಅವರ ಜಮೀನುಗಳಲ್ಲೂ ಆನೆಕಂದಕ ನಿರ್ಮಾಣ ಮಾಡಲಾಗಿದೆ. ಇದರಿಂದ ಜಮೀನು ಕಳೆದುಕೊಳ್ಳುವ ಭೀತಿಯ ರೈತರಲ್ಲಿ ಮೂಡಿದೆ.

The post ಸರ್ವೆ ನಡೆಸದೇ ಬುಡಕಟ್ಟು ಸೋಲಿಗರ ಜಮೀನಲ್ಲಿ ಆನೆ ಕಂದಕ ನಿರ್ಮಾಣ- ಆತಂಕದಲ್ಲಿ ರೈತರು appeared first on News First Kannada.

Source: newsfirstlive.com

Source link