‘ಸಲಗ’ ಸಂಭ್ರಮಕ್ಕೆ ಅಪ್ಪು, ಶಿವಣ್ಣ, ಉಪ್ಪಿ, ಡಿಕೆಎಸ್, ಸಿದ್ದರಾಮಯ್ಯ ಸಾಥ್

ಸಲಗ ರಿಲೀಸ್ ಯಾವಾಗ? ಯಾವಾಗ? ಅಂತ ಕೇಳ್ತಿದ್ದ ಅಭಿಮಾನಿಗಳಿಗೆ ದಿನಗಣನೆ ಶುರುವಾಗಿದೆ.. ತನ್ನಲ್ಲಿರೋ ಕಂಟೆಂಟ್​ಗಳನ್ನ ಹೊರ ಬಿಟ್ಟು ಚಿತ್ರಪ್ರೇಮಿಗಳು ಸಲಗ ಚಿತ್ರದ ಕಡೆ ದಿಟ್ಟಿಸಿ ನೋಡೋಂಗೆ ಮಾಡಿರುವ ದುನಿಯಾ ವಿಜಯ್ ಸಿನಿಮಾ ತಂಡ ದೊಡ್ಡದೊಂದು ಸಂಭ್ರಮವನ್ನ ಮಾಡಲಿದೆ.. ಸಲಗನ ಸಂಭ್ರಮಕ್ಕೆ ಅರ್ಧ ಸ್ಯಾಂಡಲ್​ವುಡ್ ಸಾಥ್ ಕೊಡಲಿದೆ.

ಒಂದು ಸಿನಿಮಾ ರಿಲೀಸ್ ಆಗೋಕೂ ಮುನ್ನ ಸದ್ದು ಮಾಡಬೇಕು, ಅಭಿಮಾನಿಗಳು ಸಿನಿಮಾವನ್ನ ನೋಡಲು ಸಂಭ್ರಮಿಸಬೇಕು.. ಆಗ್ಲೇ ನಿರೀಕ್ಷಿತ ಸಿನಿಮಾಕ್ಕೆ ಒಂದು ಗತ್ತು.. ಕಳೆದ ಎರಡು ವರ್ಷದಿಂದ ಸಲಗ ಸಿನಿಮಾ ತಂಡ ಬೇಜಾನ್ ಸದ್ದು ಮಾಡಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾವನ್ನ ರಿಲೀಸ್ ಮಾಡೋ ಭರ್ಜರಿ ತಯಾರಿಯಲ್ಲಿಯೂ ಇದೆ.. ಈ ರೈಟ್ ಟೈಮ್​​ನಲ್ಲೇ ನಿರೀಕ್ಷೆಯ ಮಟ್ಟ ಗಗನದಲ್ಲಿ ಗಾಳಿಪಟವಾಗುವಂತೆ ಒಂದು ಸಂಭ್ರಮಾಚರಣೆಯನ್ನ ಮಾಡಲು ಸಲಗ ಸಿನಿಮಾ ಬಳಗ ಪ್ಲಾನ್ ಮಾಡ್ತಿದೆ..

‘ಸಲಗ’ ಸಂಭ್ರಮಕ್ಕೆ ಅರ್ಧ ಸ್ಯಾಂಡಲ್​ವುಡ್ ಸಾಥ್

ಒಂದು ಸಿನಿಮಾದ ಮನರಂಜನೆಯ ಸಮಯ ಎರಡೂವರೆ ಗಂಟೆ.. ಆದ್ರೆ ಒಂದೊಳ್ಳೆ ಸಿನಿಮಾ ಎರಡೂವರೆ ಗಂಟೆಯ ನಂತರವೂ ಪ್ರೇಕ್ಷಕರ ನೆನಪಿನ ಲೋಕದಲ್ಲಿ ಮನಸಿನ ಮಾಳಿಗೆಯಲ್ಲಿ ಸದಾ ಇರುತ್ತದೆ.. ಇದು ಸಿನಿಮಾಕ್ಕಿರೋ ತಾಕತ್ತು.. ಎರಡನೇ ಲಾಕ್ ಡೌನ್ ಅಂತ್ಯದ ನಂತರ ಮತ್ತೆ ಸಿನಿಮಾ ರಂಗದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿದೆ.. ತುಂಬಿದ ಚಿತ್ರಮಂದಿರಗಳ ಪ್ರದರ್ಶನಕ್ಕೆ ಸರ್ಕಾರ ಅನುಮತಿ ಕೊಟ್ಟಿರೋ ಕಾರಣ ಹೊಸ ಹೊಸ ಸಿನಿಮಾಗಳು ಬೆಳ್ಳಿ ತೆರೆಯ ಅಂಗಳಕ್ಕೆ ಬರಲು ಸಜ್ಜಾಗುತ್ತಿವೆ.. ರಿಲೀಸ್​ಗೆ ಸಿದ್ಧವಿರೋ ಎಲ್ಲಾ ಸಿನಿಮಾಗಳಿಗಿಂತ ಒಂದು ಹೆಜ್ಜೆ ಮುಂದೆ ಸಲಗ ಸಿನಿಮಾ ನಿಂತಿದೆ.. ಸಲಗ ಸಿನಿಮಾವನ್ನ ಪ್ರೇಕ್ಷಕರಿಗೆ ಮುಟ್ಟಿಸಲು ದುನಿಯಾ ವಿಜಯ್ ಬಳಗ ಹಗಲಿರುಳು ಶ್ರಮಿಸುತ್ತಿದೆ.. ಈಗ ಸಲಗ ಸಿನಿಮಾದ ಸಂಭ್ರಮಕ್ಕೆ ಸ್ಯಾಂಡಲ್​ವುಡ್ ಗಣ್ಯಾತಿ ಗಣ್ಯರ ಸೂಪರ್ ಪವರ್​​ಫುಲ್​​ ಸಾಥ್ ಸಿಗಲಿದೆ..

‘ಸಲಗ’ನ ಹಿಂದೆ ಅಪ್ಪು-ಶಿವಣ್ಣ-ಉಪ್ಪಿ ಮತ್ತು ಸಿದ್ದು

ದಸರಾ ಹಬ್ಬವನ್ನ ಇನ್ನಷ್ಟು ಸಂಭ್ರಮಿಸಲು ಸಲಗ ಸಿನಿಮಾ ಅಕ್ಟೋಬರ್ 14ನೇ ತಾರೀಕು ಪ್ರೇಕ್ಷಕರ ಮುಂದೆ ಬರಲಿದೆ.. ಬರೋ ಮುಂಚೆ ಒಂದು ಬಿಗ್ ಸಂಭ್ರಮವನ್ನ ಮಾಡಲು ಸಲಗ ಸಿನಿ ಬಳಗ ಪ್ಲಾನ್ ಮಾಡಿಕೊಂಡಿದೆ.. ಈ ತಿಂಗಳ 10ನೇ ತಾರೀಕು ಅಂದ್ರೆ ನಾಳೆ ಭಾನುವಾರ ಸಲಗ ಪ್ರೀ ರಿಲೀಸ್ ಇವೆಂಟ್ ಆಯೋಜನೆ ಮಾಡಿದೆ ಚಿತ್ರತಂಡ.. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್​ವುಡ್​​ನ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್, ಸೂಪರ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರು ಮುಖ್ಯ ಅತಿಥಿಗಳಾಗಿ ಬಂದು ಸಲಗ ಸಿನಿಮಾಕ್ಕೆ ಶುಭ ಹಾರೈಸಲಿದ್ದಾರೆ..

ದೊಡ್ಡ ಮಟ್ಟಕ್ಕೆ ಧಾಮ್ ಧೂಮ್ ಅಂತ ಸೌಂಡ್ ಮಾಡ್ಕೊಂಡು ಪ್ರೇಕ್ಷಕರ ತೇರನ್ನ ಥಿಯೇಟರ್ ಅಂಗಳಕ್ಕೆ ಎಳೆದು ತಂದು ನಿಲ್ಲಿಸೋದು ಸಲಗ ಸಿನಿಮಾ ತಂಡದ ಯೋಜನೆ​​.. ಇವತ್ತು ಥಿಯೇಟರ್​ ಕಡೆ ಪ್ರೇಕ್ಷಕರನ್ನ ಕರೆತರೋದು ತುಂಬಾನೇ ಕಷ್ಟವಿದೆ.. ಸಿನಿಮಾ ಮಾಡೋಕ್ಕಿಂತ ಸಿನಿಮಾ ಪ್ರಮೋಷನ್ ಮಾಡೋದು ಇನ್ನೂ ಕಷ್ಟ.. ಈ ವಿಚಾರದಲ್ಲಿ ಸಲಗ ಸಿನಿಮಾ ನಿಜಕ್ಕೂ ಸಾಹಸವನ್ನೇ ಮಾಡ್ತಿದೆ.

The post ‘ಸಲಗ’ ಸಂಭ್ರಮಕ್ಕೆ ಅಪ್ಪು, ಶಿವಣ್ಣ, ಉಪ್ಪಿ, ಡಿಕೆಎಸ್, ಸಿದ್ದರಾಮಯ್ಯ ಸಾಥ್ appeared first on News First Kannada.

News First Live Kannada

Leave a comment

Your email address will not be published. Required fields are marked *