ಸ್ಟಾರ್​ ನಿರ್ದೇಶಕ ಪ್ರಶಾಂತ್​ ನೀಲ್​ ನಿರ್ದೇಶನದ ಎರಡನೇ ಪ್ಯಾನ್​ ಇಂಡಿಯಾ ಸಿನಿಮಾ ‘ಸಲಾರ್’​ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಸಲಾರ್​ ಸಿನಿಮಾ ಅನೌನ್ಸ್​ ಆದ ದಿನದಿಂದಲೂ ಸಿಕ್ಕಾಪಟ್ಟೆ ಸುದ್ದಿಯಾಗ್ತಾನೆ ಇದೆ. ಪ್ರಭಾಸ್​​ ಫಸ್ಟ್​ ಲುಕ್​ ಪೋಸ್ಟರ್​​ ಒಂದಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದ್ರೆ, ಸಲಾರ್​ಗೆ ಶೃತಿ ಹಾಸನ್​ ನಾಯಕಿಯಾಗಿದ್ದು ಮತ್ತೊಂದು ಸುದ್ದಿ. ಇದೀಗ ತಮಿಳಿನ ಖ್ಯಾತ ನಟನ ಪತ್ನಿ, ಸ್ಟಾರ್​ ನಟಿ ಸಲಾರ್​ಗೆ ಎಂಟ್ರಿ ಕೊಡ್ತಾರೆ ಅನ್ನೋ ವಿಚಾರ ಕೇಳಿ ಬರ್ತಿದೆ.

ಹೌದು.. ನಟ ಸೂರ್ಯ ಪತ್ನಿ, ಖ್ಯಾತ ನಟಿ ಜ್ಯೋತಿಕಾ ಸೂರ್ಯ ‘ಸಲಾರ್’​ ಸಿನಿಮಾದಲ್ಲಿ ನಟಿಸಬಹುದು ಅನ್ನೋ ಮಾತುಗಳಿವೆ. ಕಳೆದ ವರ್ಷ ತೆರೆ ಕಂಡ ‘ಪೊಣ್ಮಗಳ್​ ವಂದಾಳ್’​ ಸಿನಿಮಾದ ನಂತರ ಜ್ಯೋತಿಕಾ ಬಗ್ಗೆ ಯಾವುದೇ ಸಿನಿಮಾ ಸುದ್ದಿ ಹೊರಬಿದ್ದಿಲ್ಲ. ಇದೀಗ ಸಲಾರ್​ ಚಿತ್ರತಂಡ ಜ್ಯೋತಿಕಾ ಸೂರ್ಯರನ್ನ ಸಂಪರ್ಕಿಸಿ ಕಥೆ ಹೇಳಿರೋದಾಗಿ ಸುದ್ದಿ ಹರಿದಾಡ್ತಿದೆ. ದಿನದಿಂದ ದಿನಕ್ಕೆ ಸಲಾರ್​ ಸಿನಿಮಾದ ಬಗ್ಗೆ ಒಂದಲ್ಲೊಂದು ವಿಚಾರ ಹೊರ ಬೀಳ್ತಿದ್ದು, ಇವೆಲ್ಲವೂ ನಿಜನಾ ಸುಳ್ಳಾ ಅನ್ನೋ ಅನುಮಾನವೂ ಶುರುವಾಗ್ತಿದೆ. ಏನಿದ್ದರೂ ಇದಕ್ಕೆ ‘ಸಲಾರ್’​ ಸಿನಿಮಾ ತಂಡವೇ ಉತ್ತರ ನೀಡಬೇಕು.

‘ಸಲಾರ್’​ ಸಿನಿಮಾದಲ್ಲಿ ಪ್ರಭಾಸ್​​ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಒಂದು ಸುದ್ದಿಯಾಗಿದ್ರೆ, ಸದ್ಯ ಪ್ರಭಾಸ್​ ಅಕ್ಕನ ಪಾತ್ರಕ್ಕೆ ಜ್ಯೋತಿಕಾರನ್ನ ಅಪ್ರೋಚ್​ ಮಾಡಲಾಗಿದೆ ಅಂತಿವೆ ವರದಿಗಳು. ಆದ್ರೆ ಇದಕ್ಕೆ ಇನ್ನೂ ಜ್ಯೋತಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅಂತಾನೂ ಹೇಳಲಾಗ್ತಿದೆ. ಒಂದು ವೇಳೆ ಈ ವಿಷಯ ನಿಜವಾದಲ್ಲಿ, ಜ್ಯೋತಿಕಾ ಕೂಡ ಈ ಸಿನಿಮಾ ಒಪ್ಪಿಕೊಂಡಲ್ಲಿ, 15 ವರ್ಷಗಳ ನಂತರ ಜ್ಯೋತಿಕಾ ತೆಲುಗಿಗೆ ವಾಪಾಸಾದ ಹಾಗೇ ಆಗುತ್ತದೆ.

ಕೊನೆಯ ಬಾರಿ 2006ರಲ್ಲಿ ತೆರೆ ಕಂಡ ‘ಶಾಕ್’​​ ಹೆಸರಿನ ತೆಲುಗು ಸಿನಿಮಾದಲ್ಲಿ ನಟಿ ಜ್ಯೋತಿಕಾ ನಟಿಸಿದ್ದರು. ​2002 ರಲ್ಲಿ ಬಿಡುಗಡೆಯಾದ ನಾಗರಹಾವು ಕನ್ನಡದಲ್ಲಿ ಇವರ ಕೊನೆಯಾ ಸಿನಿಮಾವಾಗಿತ್ತು. ಅಂದ್ಹಾಗೇ, 2022ರ ಏಪ್ರಿಲ್​ 14ರಂದು ‘ಸಲಾರ್’​ ರಿಲೀಸ್​ಗೆ ಚಿತ್ರತಂಡ ಮುಹೂರ್ತ ಫಿಕ್ಸ್​ ಮಾಡಿದೆ.

The post ಸಲಾರ್​​ಗೆ ನಾಗರಹಾವು ಎಂಟ್ರಿ.. ಪ್ರಭಾಸ್ ಬಾಳಲ್ಲಿ ‘ಜ್ಯೋತಿ’ ಬೆಳಗ್ತಾರಾ ನೀಲ್? appeared first on News First Kannada.

Source: newsfirstlive.com

Source link