ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇದೆ. ಆರಂಭದಿಂದಲೂ ಬಜೆಟ್ ವಿಚಾರಕ್ಕೆ ಸದ್ದು ಮಾಡುತ್ತಿರುವ ಈ ಸಿನಿಮಾ ಬಗ್ಗೆ ಹೊಸ ಅಪ್‍ಡೇಟ್ ಸಿಕ್ಕಿದೆ.

ಕೊರೊನಾ ಲಾಕ್‍ಡೌನ್ ನಂತರ ಸಲಾರ್ ಚಿತ್ರದ ಶೂಟಿಂಗ್ ಮತ್ತೆ ಆರಂಭಗೊಂಡಿದೆ. ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ಸಿನಿಮಾ ಸೆಟ್ ಫೋಟೋಗಳು ಲೀಕ್ ಆಗಿವೆ. ಇದರಲ್ಲಿ ಪ್ರಭಾಸ್  ಬೈಕ್ ಸಾಕಷ್ಟು ಗಮನ ಸೆಳೆಯುತ್ತಿದೆ.

1970 ಮೈಸೂರು ರಾಜ್ಯದಲ್ಲಿದ್ದ ಎಂಇಸಿ ನಂಬರ್ ಪ್ಲೇಟ್ ಇರುವ ಜಾವಾ ಬೈಕ್ ಎಲ್ಲರ ಗಮನ ಸೆಳೆಯುತ್ತಿದೆ. 1970ರ ಕಾಲಘಟ್ಟದ ಕಥೆಯನ್ನು ಸಿನಿಮಾ ಹೇಳಲಿದೆ ಎಂದು ಮೂಲಗಳು ತಿಳಿಸಿವೆ. ಬೈಕ್ ನಂಬರ್ ಪ್ಲೇಟ್ ಮೇಲೆ ಎಂಇಸಿ 6987 ಎಂದಿದೆ. ಸದ್ಯ, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ.

 

ಕೆಜಿಎಫ್ ಚಿತ್ರ ರೆಟ್ರೋ ಲುಕ್‍ನಲ್ಲಿ ಮೂಡಿ ಬಂದಿತ್ತು. ಇದನ್ನು ನಿರ್ದೇಶಕ ಪ್ರಶಾಂತ್ ನೀಲ್ ಅದ್ಭುತವಾಗಿ ಕಟ್ಟಿ ಕೊಟ್ಟಿದ್ದರು. ಈಗ ಸಲಾರ್ ಚಿತ್ರ ಕೂಡ ರೆಟ್ರೋ ಶೈಲಿಯಲ್ಲೇ ಮೂಡಿ ಬರುತ್ತಿದ್ದು, ಕಥೆಗೆ ಮೈಸೂರಿನ ಲಿಂಕ್ ಕೊಟ್ಟಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.

The post ಸಲಾರ್ ಸಿನಿಮಾಕ್ಕಿದೆ ಮೈಸೂರಿನ ಲಿಂಕ್ appeared first on Public TV.

Source: publictv.in

Source link