ಸಲೀಂ ಕಣ್ಣೀರು; ಡಿ.ಕೆ ಶಿವಕುಮಾರ್ ಕೊಟ್ಟ ಮಾರ್ಮಿಕ ಹೇಳಿಕೆ ಏನು..?

ಬೆಂಗಳೂರು: ಡಿ.ಕೆ. ಶಿವಕುಮಾರ್​ ಬಗ್ಗೆ ಮಾತ್ನಾಡಿರೋ ವಿಡಿಯೋಗೆ ಸಂಬಂಧಿಸಿದಂತೆ ಉಚ್ಛಾಟಿತ ಕಾಂಗ್ರೆಸ್‌ ನಾಯಕ ಸಲೀಂ ಕಣ್ಣೀರು ಹಾಕಿದ್ದಾರೆ. ಇಬ್ಬರ ಪಿಸುಮಾತು ಬಹಿರಂಗೊಂಡ ಬಗ್ಗೆ ಸಲೀಂ ನ್ಯೂಸ್​ಫಸ್ಟ್ ಜೊತೆ ಮಾತನಾಡೋ ವೇಳೆ ಕಣ್ಣೀರು ಇಟ್ಟಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್​, ಯಾಱರು ಏನೇನು ಹೇಳಬೇಕೋ ಈಗಾಗಲೇ ಹೇಳಿದ್ದಾರೆ. ಆ ಹೇಳಿಕೆಗಳನ್ನ ಯಾರು ಹೇಗೆಲ್ಲಾ ಬಳಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ಇದನ್ನೂ ಓದಿ: Exclusive: ದೊಡ್ಡ ತಪ್ಪಾಗಿದೆ, ಯಾವ ಮುಖ ಇಟ್ಕೊಂಡು DKS ಭೇಟಿಯಾಗಲಿ -ಕಣ್ಣೀರಿಟ್ಟ ಸಲೀಂ

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಅವಕಾಶ ಕೊಟ್ಟ ಕಾರಣ ಬಿಜೆಪಿಯವರು ನನ್ನ ವಿರುದ್ಧ ದೂರಿದ್ದಾರೆ. ಯಾಱರು ಏನೇನು ಹೇಳಬೇಕೋ ಈಗಾಗಲೇ ಹೇಳಿದ್ದಾರೆ. ಆ ಹೇಳಿಕೆಗಳನ್ನ ಯಾರು ಹೇಗೆಲ್ಲಾ ಬಳಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ನಾನು ದೊಡ್ಡವರ ಬಗ್ಗೆ ಮಾತನಾಡಲ್ಲ, ಈ ವಿಚಾರಗಳನ್ನ ಅವರವರ ಅರಿವಿಗೆ, ಚಿಂತನೆಗೆ ಬಿಡುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ ಅಲ್ಲ. ಇದು ಪಕ್ಷದ ವಿಚಾರ, ಅರಿವಿಗೆ ತಕ್ಕಂತಿರಲಿ ಅಂತಾ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರವುದು ನನ್ನ ಗುರಿ. ಕಾಂಗ್ರೆಸ್ ಬಾವುಟ ಹಾರಿಸುವುದು ನಮ್ಮ ಹೋರಾಟ. ಸಿಎಂ ಇಬ್ರಾಹಿಂ ದೊಡ್ಡವರು, ಅವರಿಗೆ ದೊಡ್ಡ ಕಾಂಟ್ಯಾಕ್ಟ್ ಇದೆ. ಅವರ ಆ ಪ್ರಯತ್ನ ನನಗೆ ಗೊತ್ತಿದೆ ಎಂದು ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಹಾಗೂ ಡಿ.ಕೆ.ಶಿವಕುಮಾರ್ ಅವರನ್ನು ಒಂದುಗೂಡಿಸುವ ಸಿಎಂ ಇಬ್ರಾಹಿಂ ಹೇಳಿಕೆ‌ಗೆ ಪ್ರತಿಕ್ರಿಯೆ ನೀಡಿದರು.

News First Live Kannada

Leave a comment

Your email address will not be published. Required fields are marked *