ಸಲ್ಮಾನ್​​ ಭೇಟಿ ಬೆನ್ನಲ್ಲೇ ಗಾಸಿಪ್​​ಗಳ ಸುರಿಮಳೆ: ಈ ಬಗ್ಗೆ RRR ಡೈರೆಕ್ಟರ್​​ ರಾಜಮೌಳಿ ಹೇಳಿದ್ದೇನು?


ಲೆಜೆಂಡರಿ ಡೈರೆಕ್ಟರ್​ ಎಸ್​.ಎಸ್. ರಾಜಮೌಳಿ ಮತ್ತು ಅವರ ಮಗ ಎಸ್​.ಎಸ್.​ ಕಾರ್ತಿಕೇಯ ಬಾಲಿವುಡ್​ ಸೂಪರ್​ಸ್ಟಾರ್​ ಸಲ್ಮಾನ್​ ಖಾನ್​ರನ್ನು ಭೇಟಿಯಾಗಿದ್ದಾರೆ.

ರಾಜಮೌಳಿ ಸಲ್ಮಾನ್​ ಖಾನ್​ರನ್ನು ಭೇಟಿಯಾಗಿದ್ದೇ ತಡ, ಸಲ್ಲು ಜೊತೆ ರಾಜಮೌಳಿ ಹೊಸ ಸಿನಿಮಾ ಮಾಡುತ್ತಾರೆ ಎಂದು ಟಾಲಿವುಡ್​ನಿಂದ ಬಾಲಿವುಡ್​ವರೆಗೆ ರಾತ್ರೋ ರಾತ್ರಿ ಕಾಡ್ಗಿಚ್ಚಿನಂತೆ ಸೋಶಿಯಲ್​ ಮೀಡಿಯಾದಲ್ಲಿ ಹಬ್ಬಿತ್ತು. ಈ ಕಾಡ್ಗಿಚ್ಚಿಗೆ ರಾಜಮೌಳಿ  ತಣ್ಣೀರಾಕಿದ್ದು ಸಲ್ಮಾನ್ ಖಾನ್​ರನ್ನು ಭೇಟಿಯಾಗಿದ್ದು ಹೊಸ ಸಿನಿಮಾ ಮಾಡಲು ಅಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

2022 ರ ಜನವರಿ 7 ನೇ ತಾರೀಖು ವಿಶ್ವದಾದ್ಯಂತ ”ಥ್ರಿಬಲ್​ ಆರ್” ಸಿನಿಮಾ​ ತೆರಕಾಣಲಿದೆ. ಅದಕ್ಕೂ ಮುನ್ನ ರಾಜಮೌಳಿ ದುಬೈನಲ್ಲಿ ಅದ್ಧೂರಿಯಾಗಿ ”ಥ್ರಿಬಲ್​ ಆರ್”​ ಸಿನಿಮಾದ ಪ್ರೀ ರಿಲೀಸ್​ ಇವೆಂಟ್​ ಅನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ರನ್ನು ಆಹ್ವಾನಿಸಲು ರಾಜಮೌಳಿ ಮತ್ತು ಮಗ ಕಾರ್ತಿಕೇಯ ಮುಂಬೈಗೆ ಹಾರಿದ್ದಾರೆ. ರಾಜಮೌಳಿ ಆಹ್ವಾನವನ್ನು ಸ್ವೀಕರಿಸಿರುವ ಸಲ್ಲುಭಾಯ್ ”ಥ್ರಿಬಲ್​ ಆರ್”​ ಪ್ರೀ ರಿಲೀಸ್​ ಇವೆಂಟ್​ಗೆ ಬರುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:RRR ಡೈರೆಕ್ಟರ್​​ ರಾಜಮೌಳಿ ಮೇಲೆ ಅಜಯ್​ ದೇವಗನ್ ಫ್ಯಾನ್ಸ್​ ಬೇಸರ; ಯಾಕೆ?

The post ಸಲ್ಮಾನ್​​ ಭೇಟಿ ಬೆನ್ನಲ್ಲೇ ಗಾಸಿಪ್​​ಗಳ ಸುರಿಮಳೆ: ಈ ಬಗ್ಗೆ RRR ಡೈರೆಕ್ಟರ್​​ ರಾಜಮೌಳಿ ಹೇಳಿದ್ದೇನು? appeared first on News First Kannada.

News First Live Kannada


Leave a Reply

Your email address will not be published. Required fields are marked *