ಈ ವರ್ಷ ಈದ್​ ಹಬ್ಬದಂದು ರಿಲೀಸ್​ ಆಗಲಿರುವ ಸಲ್ಮಾನ್​ ಖಾನ್​ ನಟನೆಯ ರಾಧೆ ಸಿನಿಮಾ, ಬಿಡುಗಡೆಯಾಗುತ್ತೆ ಆಗಲ್ಲ ಅನ್ನೋ ಬಗ್ಗೆ ಬಹಳ ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿಗಿನ ವರ್ಷಗಳಲ್ಲಿ ಸಲ್ಮಾನ್​ ಖಾನ್​ ಎಲ್ಲಾ ಸಿನಿಮಾಗಳು ಈದ್​ ಹಬ್ಬದಂದೇ ತೆರೆ ಕಂಡಿದೆ. ಈಗಾಗಲೇ ರಾಧೆ ಸಿನಿಮಾದ ಟ್ರೈಲರ್​, ಡೈಲಾಗ್​ ಪ್ರೋಮೋಗಳು ಹಾಗೇ ಸೀಟಿ ಮಾರ್​ ಹಾಡು ರಿಲೀಸ್​ ಆಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಗಳಿಸ್ತಿದೆ. ಈ ಮಧ್ಯೆ ಸಲ್ಮಾನ್​ ಖಾನ್​ ಇಂದು ಮತ್ತೊಂದು ಟ್ವೀಟ್​ ಮಾಡಿ ಗುಡ್​ ನ್ಯೂಸ್​ ನೀಡಿದ್ದಾರೆ.

ಹೌದು.. ಸಲ್ಮಾನ್​ ಖಾನ್​ ಹಾಗೂ ದಿಶಾ ಪಟಾನಿ ಅಭಿನಯದ ರಾಧೆ ಸಿನಿಮಾದ ಮತ್ತೊಂದು ಹಾಡು ಈಗಾಗಲೆ ರೆಡಿಯಾಗಿದ್ದು ನಾಳೆ ತೆರೆ ಕಾಣಲಿದೆ. ಈ ಬಗ್ಗೆ ಸ್ವತಃ ಸಲ್ಮಾನ್​ ಖಾನ್​ ಟ್ವೀಟ್​ ಮಾಡಿದ್ದು, ಅಭಿಮಾನಿಗಳಿಗೆ ಈ ಕೊರೊನಾ ನಡುವೆಯೂ ಗುಡ್​ ನ್ಯೂಸ್​ ನೀಡಿದ್ದಾರೆ. ವಿಶೇಷ ಅಂದ್ರೆ ಈ ಹಾಡನ್ನ ಸಲ್ಮಾನ್​ ಖಾನ್​ ಪ್ರೇಯಸಿ ಎನ್ನಲಾಗ್ತಿದ್ದ ಲುಲಿಯಾ ವಾಂಟರ್​ ಹಾಡಿದ್ದಾರೆ. ಆ್ಯಶ್​ ಕಿಂಗ್​ ಧ್ವನಿಗೂಡಿಸಿದ್ದಾರೆ.

‘ಝೂಮ್​ ಝೂಮ್​’ ಅನ್ನೋ ಸಾಂಗ್​ ಇದಾಗಿದ್ದು, ಮೇ 10 ಅಂದ್ರೆ ನಾಳೆ ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಸದ್ಯ ದೇಶದ ಹಲವಾರು ರಾಜ್ಯಗಳಲ್ಲಿ ಲಾಖ್​ಡೌನ್​ ಹೇರಲಾಗಿದ್ದು, ಈ ಪರಿಸ್ಥಿತಿಯಲ್ಲೂ ರಾಧೆ ಸಿನಿಮಾ ರಿಲೀಸ್​ ಆಗ್ತಿರೋದು ಅಚ್ಚರಿ ಮೂಡಿಸ್ತಿದೆ. ಅಥವಾ ಮೇ 13ಕ್ಕೂ ಮುನ್ನ ರಾಧೆ ಚಿತ್ರತಂಡ ತಮ್ಮ ನಿರ್ಧಾರವನ್ನ ಬದಲಿಸುತ್ತಾ ಕಾದು ನೋಡಬೇಕು. ರಾಧೆ ಸಿನಿಮಾಗೆ ನಿರ್ದೇಶಕ-ಕೊರಿಯೋಗ್ರಾಫರ್​ ಪ್ರಭುದೇವ ಆ್ಯಕ್ಷನ್​ ಕಟ್​ ಹೇಳಿದ್ದಾರೆ.

The post ಸಲ್ಮಾನ್​ ಗುಡ್​ ನ್ಯೂಸ್​; ಪ್ರೇಯಸಿ ಲುಲಿಯಾ ಹಾಡಿರೋ ರಾಧೆ ಚಿತ್ರದ 2ನೇ ಹಾಡು ನಾಳೆ ರಿಲೀಸ್ appeared first on News First Kannada.

Source: newsfirstlive.com

Source link