ಸಲ್ಮಾನ್ ಅಭಿನಯದ ‘ಕುರುಪ್’ ಚಿತ್ರದ ವಿರುದ್ಧ ಬಿತ್ತು ಕೇಸ್..!


ಮಾಲಿವುಡ್​ ನಟ ದುಲ್ಖರ್ ಸಲ್ಮಾನ್​ ನಟನೆಯ ಕುರುಪ್​ ಚಿತ್ರದ ವಿರುದ್ಧ ಕೇರಳ ಹೈಕೋರ್ಟ್​ನಲ್ಲಿ ಕೇಸ್​ ದಾಖಲಾಗಿದೆ. ಇಂದು ಈ ಚಿತ್ರ ತೆರೆ ಮೇಲೆ ಅಪ್ಪಳಿಸಿದ್ದು, ಕೊಚ್ಚಿಯ ನಿವಾಸಿಯೊಬ್ಬರು ಕೇಸ್​ ದಾಖಲಿಸಿದ್ದಾರೆ.

ಈ ಚಿತ್ರದಲ್ಲಿ ಸುಕುಮಾರ್ ಕುರುಪ್ ಎಂಬ ವ್ಯಕ್ತಿಯ ತೇಜೋವಧೆ ಮಾಡಲಾಗಿದೆ ಅಂತ ಸ್ಥಳೀಯ ನಿವಾಸಿ ದೂರು ನೀಡಿದ್ದಾರೆ. ದೂರು ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್​ ಕೇರಳ ಸರ್ಕಾರಕ್ಕೆ ಹಾಗೂ ಸಿನಿಮಾ ನಿರ್ಮಾಪಕರಿಗೆ ನೋಟಿಸ್ ನೀಡಿ ಮಾಹಿತಿ ಕೇಳಿದೆ. ಆದರೆ ಸಿನಿಮಾ ರಿಲೀಸ್​​ಗೆ ಯಾವುದೇ ತಡೆಯನ್ನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಕುರುಪ್ ಚಿತ್ರ ರಿಲೀಸ್ ಆಗಿದೆ.

ಇದು 1984ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದು, ಈ ವರ್ಷದ ಮೇ ನಲ್ಲಿ ಸಿನಿಮಾ ರಿಲೀಸ್​ ಆಗಬೇಕಿತ್ತು. ಆದ್ರೆ ಕೊರೊನಾ ಎರಡನೇ ಅಲೆ, ಲಾಕ್​ಡೌನ್​ನಿಂದಾಗಿ ಚಿತ್ರವನ್ನು ಇಂದು ರಿಲೀಸ್​ ಆಗಿದೆ.

News First Live Kannada


Leave a Reply

Your email address will not be published. Required fields are marked *