ತುಮಕೂರು: ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡಿದ್ದಾರೆ ಎಂದು ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್.ಆರ್‌ ಶ್ರೀನಿವಾಸ್‌ ಆರೋಪಿಸಿದ್ದಾರೆ.

ಶಿಲ್ಪಾ ನಾಗ್​ ಜೊತೆಗಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು.. ವೈಯಕ್ತಿಕವಾಗಿ ಏನೇನು ನಡೆದಿದ್ಯೋ ಗೊತ್ತಿಲ್ಲ. ‘ಜಿಲ್ಲಾಧಿಕಾರಿ ಬಯಲು ನಾಟಕ ನಡೆದಂತೆ ಆಗಿದೆ’. ಸರ್ಕಾರಿ ನೌಕರರಿಗೆ ಅವರದ್ದೇ ಆದಂತಹ ನಿಬಂಧನೆಗಳಿವೆ. ರಾಜಕಾರಣಿಗಳಂತೆ ಹೇಳಿಕೆ ಕೊಡೋದು ಸರಿಯಲ್ಲ, ಸರ್ಕಾರ ಕಣ್ಮುಚ್ಚಿಕೊಂಡು ಕೂತಿದೆ ಎಂದು ವಾಗ್ದಾಳಿ ನಡೆಸಿದ್ರು.

ಇಂತವ್ರನೆಲ್ಲಾ ಸಸ್ಪೆಂಡ್‌ ಮಾಡ್ಬೇಕು. ಉತ್ತರ ಪ್ರದೇಶದ ಅಖಿಲೇಶ್‌ ಯಾದವ್‌ ಇಬ್ಬರು ಐಎಎಸ್‌ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿದ್ರು. ಅದೇ ರೀತಿ ಇಲ್ಲೂ ಇವರನ್ನು ಸಸ್ಪೆಂಡ್‌ ಮಾಡಬೇಕು. ಸಸ್ಪೆಂಡ್‌ ಮಾಡಿ ಮೂಲೆಯಲ್ಲಿ ಕೂರಿಸಿದ್ರೆ ಬುದ್ಧಿ ಬರುತ್ತೆ, ರೋಹಿಣಿ ಸಿಂಧೂರಿ ಯಾರೂ ಮಾಡದ ಕೆಲಸ ಮಾಡಿದ್ದಾರಾ? ಇವರಿಗಿಂತ ಜ್ಞಾನ ಇರುವ ಅಧಿಕಾರಿ ಇಲ್ವಾ? ಇವರಿಗಿಂತ ಒಳ್ಳೆ ಕೆಲಸ ಮಾಡಿರುವ ಐಎಎಸ್‌ ಅಧಿಕಾರಿಗಳು ಇಲ್ವಾ?

ಅವರ್ಯಾರೂ ಪ್ರಚಾರದ ಗೀಳು ಹೆಚ್ಚಿಸಿಕೊಂಡಿಲ್ಲ, ಇವರಿಗೆ ಪ್ರಚಾರದ ಕಾಯಿಲೆ ಇದೆ. ಎಲ್ಲ ಭೂಗಳ್ಳರನ್ನು ಈಯಮ್ಮ ಒಬ್ಬರೇ ಹಿಡಿದು ಹಾಕಿದ್ದಾರಾ? ಬೇರೆಯವರು ಎಷ್ಟು ಜನ ಹಿಡಿದು ಹಾಕಿಲ್ಲ? ಎಷ್ಟು ಜನ ಕೆಲಸ ಮಾಡಿಲ್ಲ? ತಮ್ಮ ಹುದ್ದೆ ಗೌರವವನ್ನು ಉಳಿಸಿಕೊಳ್ಳಬೇಕು. ಸರ್ಕಾರದ ಮೇಲೆ ಯಾವ ಒತ್ತಡ ಇದೆಯೋ ಗೊತ್ತಿಲ್ಲ. ಇಂತವರನ್ನು ಉಳಿಸಿಕೊಂಡಿದೆ. ಇಂತಹ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಬೇಕು ಎಂದು ಕಿಡಿಕಾರಿದ್ದಾರೆ.

The post ಸಸ್ಪೆಂಡ್‌ ಮಾಡಿ ಮೂಲೆಯಲ್ಲಿ ಕೂರಿಸಿದ್ರೆ ಬುದ್ಧಿ ಬರುತ್ತೆ -ಸಿಂಧೂರಿ ವಿರುದ್ಧ JDS ಶಾಸಕ ವಾಗ್ದಾಳಿ appeared first on News First Kannada.

Source: newsfirstlive.com

Source link