ಸಹಚರನೊಬ್ಬನಿಂದ ಅತೀಂದ್ರಿಯ ಶಕ್ತಿಯ ನಾಟಕವಾಡಿಸಿದ ಮಗಳು ತನ್ನಮ್ಮನ ವಶದಲ್ಲಿದ್ದ ರೂ. 1100 ಕೋಟಿ ಬೆಲೆಬಾಳುವ ಕಲಾಕೃತಿಗಳನ್ನು ಕದ್ದಳು! | Woman dupes mother out of Rs.1100 Cr in art masterpieces in a bizarre con involving a psychic according to police


ಪೇಂಟಿಂಗ್ ಗಳಲ್ಲಿ ಬ್ರೆಜಿಲ್ ವಿಖ್ಯಾತ ಕಲಾವಿದರಾಗಿರುವ ತರ್ಸಿಲಾ ಡಿ ಅಮರಾಲ್, ಮತ್ತು ಎಮಿಲಿಯಾನೋ ಡಿ ಕಾವಲ್ಕಂಟಿ ಅವರ ಮ್ಯೂಸಿಯಂ ದರ್ಜೆಯ ಕಲಾಕೃತಿಗಳು ಸಹ ಸೇರಿವೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಬೆಡ್ ಒಂದರ ಕೆಳಗೆ 10 ಕಲಾಕೃತಿಗಳು ಸಿಕ್ಕಿವೆ.

ಸಹಚರನೊಬ್ಬನಿಂದ ಅತೀಂದ್ರಿಯ ಶಕ್ತಿಯ ನಾಟಕವಾಡಿಸಿದ ಮಗಳು ತನ್ನಮ್ಮನ ವಶದಲ್ಲಿದ್ದ ರೂ. 1100 ಕೋಟಿ ಬೆಲೆಬಾಳುವ ಕಲಾಕೃತಿಗಳನ್ನು ಕದ್ದಳು!

ವಶಪಡಿಸಿಕೊಳ್ಳಲಾಗಿರುವ ಒಂದು ಪೇಂಟಿಂಗ್

ಸುಮಾರು 1110 ಕೋಟಿ ರೂ. ಬೆಲೆಬಾಳುವ 16 ಕಲಾಕೃತಿಗಳ ಕಳುವಿಗೆ ಸಂಬಂಧಿಸಿದಂತೆ ಬ್ರೆಜಿಲ್ ರಾಜಧಾನಿ ರಿಯೋ ಡಿ ಜನೈರೋ (Rio de Janerio) ಪೊಲೀಸರು 6 ಜನರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಅವರೇ ನೀಡಿರುವ ಮಾಹಿತಿ ಪ್ರಕಾರ ಕೆಲ ವರ್ಣಚಿತ್ರಗಳನ್ನು (paintings) ಬರಾಮತ್ತು ಮಾಡಿಕೊಳ್ಳಲಾಗಿದೆ.

ಕಲಾಚಿತ್ರಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಡೀಲರೊಬ್ಬನ 82-ವರ್ಷ-ವಯಸ್ಸಿನ ವಿಧವೆಯ ಮನೆಯಿಂದ ಪೇಂಟಿಂಗ್​ಗಳನ್ನು ಕದಿಯಲಾಗಿದೆ ಎಂದು ಪೊಲೀಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪೇಂಟಿಂಗ್ ಗಳಲ್ಲಿ ಬ್ರೆಜಿಲ್ ವಿಖ್ಯಾತ ಕಲಾವಿದರಾಗಿರುವ ತರ್ಸಿಲಾ ಡಿ ಅಮರಾಲ್, ಮತ್ತು ಎಮಿಲಿಯಾನೋ ಡಿ ಕಾವಲ್ಕಂಟಿ ಅವರ ಮ್ಯೂಸಿಯಂ ದರ್ಜೆಯ ಕಲಾಕೃತಿಗಳು ಸಹ ಸೇರಿವೆ ಎಂದು ಪೊಲೀಸರು ಹೇಳಿದ್ದಾರೆ. ಅವರು ಬಿಡುಗಡೆ ಮಾಡಿರುವ ವಿಡಿಯೋನಲ್ಲಿ ಬೆಡ್ ಒಂದರ ಕೆಳಗೆ 10 ಕಲಾಕೃತಿಗಳು ಸಿಕ್ಕಿವೆ. ಅವುಗಳಲ್ಲಿ ಪೂರ್ತಿ ಕೆಳಭಾಗದಲ್ಲಿದ್ದಿದ್ದು, ಅಮರಾಲ್ ಅವರ ‘ಸೊಲ್ ಪೊಯೆಂಟೆ’ ವರ್ಣಚಿತ್ರ.

‘ಓಹ್, ಇಲ್ನೋಡಿ ಅದು ಇಲ್ಲಿದೆ,’ ಎಂದು ಒಬ್ಬ ಮಹಿಳಾ ಅಧಿಕಾರಿ ಉದ್ಗರಿಸಿದ್ದು ವಿಡಿಯೋನಲ್ಲಿ ರೆಕಾರ್ಡ್ ಆಗಿದೆ.

ಕಳುವಾದ ಕಲಾಕೃತಿಗಳಲ್ಲಿ ಬ್ರೆಜಿಲ್ ಇನ್ನಿಬ್ಬರು ಖ್ಯಾತ ಕಲಾವಿದರಾದ ಸೆಸೆರೊ ಡಿಯಾಸ್, ರೂಬೆನ್ಸ್ ಗರ್ಚ್ಮ್ಯಾನ್ ಮತ್ತು ಆಲ್ಬರ್ಟೋ ಗಾಗಿನಾರ್ಡ್ ಅವರ ತೈಲಚಿತ್ರಗಳೂ ಸಹ ಸೇರಿವೆ.

ಕಳ್ಳತನವನ್ನು ವಿಧವೆಯ ಮಗಳು ಆಯೋಜಿಸಿರುವಳೆಂದು ಹೇಳಿರುವ ಪೊಲೀಸರು ಅರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ. ಸ್ಥಳೀಯ ಮಾಧ್ಯಮಗಳ ಪ್ರಕಾರ ಬುಧವಾರ ಬಂಧಿಸಲ್ಪಟ್ಟವರಲ್ಲಿ ಮಗಳೂ ಸೇರಿದ್ದಾಳೆ. ಪೊಲೀಸರು ಆಗಮಿಸುತ್ತಿದ್ದಂತೆ ಮಹಿಳೆ ಕಿಟಕಿಯ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಿತ್ರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

ಈ ವರ್ಣಚಿತ್ರಗಳನ್ನು ಕಳುವು ಮಾಡುವ ಇಚ್ಛೆಯೊದಿಗೆ ಲಪಟಾಯಿಸದೆ ಒಂದು ವಿಲಕ್ಷಣವಾದ ರೀತಿಯಲ್ಲಿ ಅವುಗಳನ್ನು ಕದಿಯಲಾಗಿದೆ. ಜನವರಿ 2020 ರಲ್ಲಿ, ಸ್ವಯಂ ಘೋಷಿತ ‘ಅತೀಂದ್ರಿಯ ಶಕ್ತಿ ಹೊಂದಿರುವುದಾಗಿ’ ಹೇಳಿಕೊಳ್ಳುತ್ತಿದ್ದ ಕೋಪಕಬಾನಾ ಎಂಬ ವ್ಯಕ್ತಿ ತನ್ನ ನೆರೆಮರೆಮೆಯಲ್ಲಿ ವಾಸವಾಗಿದ್ದ ವಿಧವೆಯನ್ನು ಸಂಪರ್ಕಿಸಿ ಆಕೆಯ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದು ಶೀಘ್ರದಲ್ಲೇ ಸಾಯಲಿದ್ದಾಳೆ ಎಂದು ಹೇಳಿದನೆಂದು ಪೋಲೀಸರು ತಿಳಿಸಿದ್ದಾರೆ.

ಮಗಳ ಆಧ್ಯಾತ್ಮಿಕ ಚಿಕಿತ್ಸೆಗಾಗಿ ಭಾರಿ ಮೊತ್ತದ ಹಣ ಪಾವತಿಸಲು ಆಕೆಗೆ ಮನವರಿಕೆ ಮಾಡಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಅತೀಂದ್ರಿಯ ಶಕ್ತಿಗಳಲ್ಲಿ ನಂಬಿಕೆ ಇರುವ ವಿಧವೆಗೆ, ಆಧ್ಯಾತ್ಮಿಕ ಚಿಕಿತ್ಸೆಗಾಗಿ ಎರಡು ವಾರಗಳ ಅವಧಿಯಲ್ಲಿ ಸುಮಾರು 8 ಕೋಟಿ ರೂ. ಗಳನ್ನು ಬ್ಯಾಂಕ್ ವರ್ಗಾವಣೆ ಮಾಡುವಂತೆ ಒತ್ತಾಯಿಸಲಾಗಿದೆ. ಹಣ ನೀಡುವಂತೆ ಪ್ರೋತ್ಸಾಹಿಸಿದ ವಿಧವೆಯ ಮಗಳು ಮನೆಗೆಲಸದವರನ್ನು ಕೆಲದಿಂದ ತೆಗೆದು ಹಾಕಿದ್ದಾಳೆ. ಅವಳ ಸಹಚರರು ಅಡೆತಡೆಯಿಲ್ಲದೆ ನಿವಾಸವನ್ನು ಪ್ರವೇಶಿಸಲು ಸಾಧ್ಯವಾಲು ಮತ್ತು ಯಾವುದೇ ಅಡೆತಡೆಯಿಲ್ಲದೆ ಕಲಾಕೃತಿಗಳನ್ನು ಎತ್ತಿಕೊಂಡು ಹೋಗಲು ಅನುಕೂಲವಾಗಲು ಆಕೆ ಕೆಲಸಗಾರರನ್ನು ವಜಾ ಮಾಡಿದ್ದಾಳೆ.

ಮಗಳು ಮತ್ತು ಸಹಚರರಿಂದ ಬೆದರಿಕೆ ಕರೆಗಳು ಬರಲಾರಂಭಿಸಿದ ನಂತರ, ವಿಧವೆ ಹೆಚ್ಚೆಚ್ಚು ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸುತ್ತಾ ಹೋಗಿದ್ದಾಳೆ.

ಸುಮಾರು 468 ಕೋಟಿ ರೂ. ಬೆಲೆ ಬಾಳುವ ಮೂರು ಕಲಾಕೃತಿಗಳನ್ನು ಸಾವೋ ಪಾಲೋನಲ್ಲಿರುವ ಆರ್ಟ್ ಗ್ಯಾಲರಿಯಿಂದ ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ನೀಡಿರುವ ಮಾಹಿತಿ ಪ್ರಕಾರ ಆರ್ಟ್ ಗ್ಯಾಲರಿಯ ಮಾಲೀಕ ವರ್ಣಚಿತ್ರಗಳನ್ನು ನೇರವಾಗಿ ವಿಧವೆ ಮಗಳಿಂದ ಖರೀದಿಸಿದ್ದು ಮತ್ತು ಅವುಗಳಲ್ಲಿ ಎರಡನ್ನು ಬ್ಯೂನಸ್ ಐರಸ್ನಲ್ಲಿರುವ ಲ್ಯಾಟಿನ್ ಅಮೇರಿಕನ್ ಆರ್ಟ್ ಗೆ ಮಾರಿದ್ದಾಗಿ ಹೇಳಿದ್ದಾನೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *