ಮೈಸೂರು: ಈ ಕೊರೊನಾ ಮಹಾಮಾರಿ ಮಾನವೀಯತೆ ಜೊತೆಗೆ ರಕ್ತಸಂಬಂಧವನ್ನೂ ದೂರ ಮಾಡುತ್ತಿದೆ. ಎಲ್ಲಾದ್ರೂ ಹೋದರೇ ಎಲ್ಲಿ ನಮಗೂ ಈ ಕಾಯಿಲೆ ಬಂದ್​ಬಿಡುತ್ತೆ ಅನ್ನೋ ಭಯಕ್ಕೆ ಸಹಜ ಖಾಯಿಲೆಯಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೂ ಯಾವ ಸಂಬಂಧಿಕರು ಮುಂದಾಗದ ಘಟನೆ ಮೈಸೂರಿನಲ್ಲಿ ನಡೆದಿದೆ.

ಗೌಸಿಯಾನಗರದ ನಿವಾಸಿ ಸೀನಾ ಎಂಬವರು ಕೊರೊನೇತರ ಕಾರಣದಿಂದ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನ ಯಾವೊಬ್ಬ ಸಂಬಂಧಿಕರು ನೆರವೇರಿಸಿಲ್ಲ. ಪಕ್ಕದ ಮನೆಯಲ್ಲೇ ಸಹೋದರನಿದ್ದರೂ, ಮೃತದೇಹವನ್ನ ಮುಟ್ಟಲು ಮುಂದೆ ಬಂದಿಲ್ಲ ಎನ್ನಲಾಗಿದೆ.

ಈ ಬಗ್ಗೆ, ಮಾಹಿತಿ ಅರಿತ ರಜಾ಼ ನೌಜವಾನ್ ವೆಲ್ ಫೇರ್ ಅಸೋಸಿಯೇಷನ್ ಎಂಬ ಸಂಘಟನೆ ಮನೆ ಬಳಿ ಬಂದು ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದೆ. ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ಸೀನಾ, ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಇಂದು ಬೆಳಿಗ್ಗೆ ತಮ್ಮ‌ ಮನೆಯಲ್ಲೇ ಅವರು ಮೃತಪಟ್ಟಿದ್ದಾರೆ ಅಂತ ತಿಳಿದುಬಂದಿದೆ.

The post ಸಹಜ ಕಾಯಿಲೆಯಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಗೆ ಮುಂದೆ ಬರದ ಸಂಬಂಧಿಕರು, ಮಾನವೀಯತೆ ಮೆರೆದ ಎನ್​ಜಿಒ appeared first on News First Kannada.

Source: newsfirstlive.com

Source link