ಸಹಾಯ ಮಾಡೋ ನೆಪದಲ್ಲಿ ಮನೆಗೆ ಬರ್ತಿದ್ದ ಕಾನ್ಸ್​ಟೇಬಲ್​ ಮಾಡಿದ್ದೇನು?

ಚಿಕ್ಕಬಳ್ಳಾಪುರ: ಆಕೆ ಕಟ್ಟಿಕೊಂಡ ಬೇಡ ಅಂತ ಬೇರೊಂದು ಮನೆಯಲ್ಲಿ ವಾಸವಿದ್ದಳು. ಹೀಗೆ, ಗಂಡನಿಂದ ದೂರವಿದ್ದು ವರ್ಷಗಳೇ ಕಳೆದಿತ್ತು. ಆದ್ರೆ, ವಾಸವಿದ್ದ ಬಾಡಿಗೆ ಮನೆಯಲ್ಲೇ ದಿಢೀರ್ ಅಂತ ಸಾವಿಗೀಡಾಗಿದ್ದಾಳೆ. ಆಕೆಯ ಸಾವಿಗೆ ಕಾರಣ ಪತಿ ಮತ್ತು ಪತ್ನಿ ನಡುವೆ ಬಂದ ‘ಅವನು’?

ನನ್ನ ಹೆಂಡ್ತಿ ಸೂಸೈಡ್ ಮಾಡ್ಕೊಳೊಳೇ ಅಲ್ಲ. ಅವನೇ ನನ್ನ ಹೆಂಡ್ತಿಯನ್ನ ಸಾಯಿಸಿದ್ದಾನೆ ಅಂತ ಪೊಲೀಸ್ ಠಾಣೆ ಮುಂದೆ ಆಕ್ರೋಶ ವ್ಯಕ್ತಪಡಿಸುತ್ತಿರೋ ಪತಿ. ಇವರ ಈ ರೋಷಾವೇಷಕ್ಕೆ ಕಾರಣ, ಇದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಪೊಲೀಸ್ ಪೇದೆ ಅನಂತಕುಮಾರ್. ತನ್ನ ಪತ್ನಿಯನ್ನ ಪೊಲೀಸ್ ಪೇದೆ ಅನಂತಕುಮಾರ್ ಕೊಲೆ ಮಾಡಿದ್ದಾನೆ ಅಂತ ಆರೋಪಿಸಿ, ಪತಿ ವೆಂಕಟೇಶ್ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಷ್ಟಕ್ಕೆಲ್ಲಾ ಕಾರಣ, ಪತ್ನಿ ರಾಜೇಶ್ವರಿ ಮತ್ತು ಪೇದೆ ಅನಂತಕುಮಾರ್ ಮಧ್ಯೆ ಇದ್ದ ಅನೈತಿಕ ಸಂಬಂಧ.


ಕೊಲೆ ಮಾಡಿದ್ರಾ ಪೇದೆ?

ವರ್ಷದ ಹಿಂದೆ ರಾಜೇಶ್ವರಿಯನ್ನ ವೆಂಕಟೇಶ್ ಮದುವೆಯಾಗಿದ್ದರು. ಆದ್ರೆ, ಚಾಲಕನಾಗಿದ್ದ ವೆಂಕಟೇಶ್ ವಾರಗಟ್ಟಲೇ ಮನೆಗೆ ಬರ್ತಿರಲಿಲ್ಲ. ಈ ವೇಳೆ ಸಹಾಯ ಮಾಡೋ ನೆಪದಲ್ಲಿ ಮುಖ್ಯಪೇದೆ ಅನಂತಕುಮಾರ್ ಮನೆಗೆ ಬರ್ತಿದ್ರಂತೆ. ಬಳಿಕ ಪೇದೆ ಮತ್ತು ರಾಜೇಶ್ವರಿ ಮಧ್ಯೆ ಅನೈತಿಕ ಸಂಬಂಧ ಶುರುವಾಗಿತ್ತು. ಈ ಹಿನ್ನೆಲೆ ಪತಿ ವೆಂಕಟೇಶ್​ನನ್ನ ಬಿಟ್ಟು ಬೇರೆ ಮನೆಯಲ್ಲಿ ರಾಜೇಶ್ವರಿ ವಾಸವಿದ್ದಳು. ಒಂದೂವರೆ ವರ್ಷದಿಂದ ಬಾಡಿಗೆ ಮನೆಯಲ್ಲಿ ರಾಜೇಶ್ವರಿ ವಾಸವಾಗಿದ್ದಳು. ನಿನ್ನೆ ರಾತ್ರಿ ಪೇದೆ ಅನಂತಕುಮಾರ್ ಮತ್ತು ರಾಜೇಶ್ವರಿ ಮಧ್ಯೆ ಜಗಳವಾಗಿತ್ತು. ಜಗಳವಾಡುತ್ತಿದ್ದ ವಿಷಯವನ್ನ ರಾಜೇಶ್ವರಿ ಮಗಳು, ಸಂಬಂಧಿಗೆ ಕಾಲ್ ಮಾಡಿ ತಿಳಿಸಿದ್ದಳಂತೆ. ಕೊನೆಗೆ ಸಂಬಂಧಿ ಸ್ಥಳಕ್ಕೆ ಬರುವಷ್ಟೊತ್ತಿಗೆ, ನೇಣು ಬಿಗಿದ ಸ್ಥಿತಿಯಲ್ಲಿ ರಾಜೇಶ್ವರಿ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆ ಪೇದೆಯೇ ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನೆ ಅಂತ ಪತಿ ವೆಂಕಟೇಶ್ ಆರೋಪಿಸಿದ್ದಾರೆ.

ಇನ್ನು, ಘಟನೆ ನಡೆಯುತ್ತಿದ್ದಂತೆ ನಾಪತ್ತೆಯಾಗಿರೋ ಪೇದೆ ಅನಂತಕುಮಾರ್, ರಾಜೇಶ್ವರಿ ಸಾವಿಗೆ ಕಾರಣ ನಾನಲ್ಲ. ಆಕೆಯೇ ನನಗೆ ಬ್ಲ್ಯಾಕ್​​ಮೇಲ್ ಮಾಡಿದ್ದಾಳೆ ಅಂತ ಆರೋಪಿದ್ದಾರೆ. ಸದ್ಯ, ನಾಪತ್ತೆಯಾಗಿರೋ ಪೇದೆಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಆತ ಸಿಕ್ಕ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

News First Live Kannada

Leave a comment

Your email address will not be published. Required fields are marked *