ಬೆಂಗಳೂರು: ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ ಎಂದು ಸಂಚಾರಿ ವಿಜಯ್ ಅವರ ಸಹೋದರ ಸಿದ್ದೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಅಪೊಲೋ ಆಸ್ಪತ್ರೆಯಲ್ಲಿ ಸಹೋರನ ಹೆಲ್ತ್​ ಕಂಡಿಷನ್ ವಿಚಾರಿಸಿ ಹೊರ ಬಂದು ಮಾತನಾಡಿದ ಸಿದ್ದೇಶ್ ಕುಮಾರ್.. ವಿಜಯ್ ನಮ್ಮ ಕುಟುಂಬದ ಆಧಾರಸ್ತಂಭ, ಆತ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಲಾಕ್​ಡೌನ್ ಸಮಯದಲ್ಲಿ ಸಾಕಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದ. ನಿನ್ನೆಯೂ ಅಂಥದ್ದೇ ಕೆಲಸ ಮುಗಿಸಿ ಬರುವಾಗ ಅವಘಡವಾಗಿದೆ ಎಂದರು.

 

ವೈದ್ಯರು 8 ಗಂಟೆ ಅಬ್ಸರ್ವೇಷನ್​ನಲ್ಲಿ ಇರಿಸಿದ್ದಾರೆ. ನಾಳೆಗೆ 48 ಗಂಟೆ ಕಂಪ್ಲೀಟ್ ಆಗಲಿದೆ. ದಯವಿಟ್ಟು ನನ್ನ ಸಹೋದರನಿಗಾಗಿ ಪ್ರಾರ್ಥಿಸಿ ಎಂದು ಸಿದ್ದೇಶ್ ಕುಮಾರ್ ಇದೇ ವೇಳೆ ಮನವಿ ಮಾಡಿಕೊಂಡರು.

The post ಸಹೋದರನಿಗಾಗಿ ಎಲ್ಲರೂ ಪ್ರಾರ್ಥಿಸಿ -ಸಂಚಾರಿ ವಿಜಯ್ ಅಣ್ಣ ಮನವಿ  appeared first on News First Kannada.

Source: newsfirstlive.com

Source link