ತುಮಕೂರು: ಜನವರಿ 30 ರಂದು ಜಿಲ್ಲೆಯ ಕೊರಟಗೆರೆಯಲ್ಲಿ ಸಂಪ್ಗೆ ಬಿದ್ದು ಸಾವನ್ನಪ್ಪಿದ್ದ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದಲ್ಲಿ ಸ್ವತಂ ಮಗಳೇ, ಸಹೋದರನೊಂದಿಗೆ ಸೇರಿ ತಾಯಿಯನ್ನು ಕೊಲೆಗೈದಿರೋ ಸತ್ಯ ಬೆಳಕಿಗೆ ಬಂದಿದೆ.
ಹೌದು, ಕಳೆದ ಜನವರಿ 30ರಂದು ಕೊರಟಗೆರೆ ಪಟ್ಟಣದ ಸಜ್ಜನರಾವ್ ಬೀದಿಯ ಸಾವಿತ್ರಮ್ಮ(45) ಸಾವನ್ನಪ್ಪಿದ್ದರು. ಆ ವೇಳೆ ಅವರು ಸಂಪ್ಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಮಗಳು ಹೇಳಿಕೆ ನೀಡಿದ್ದಳು. ಆದರೆ ಮಹಿಳೆ ಸಾವಿಗೆ ಬಿಗ್ ಟ್ವಿಸ್ಟ್ ಲಭಿಸಿದ್ದು, ಅನೈತಿಕ ಸಂಬಂಧಕ್ಕೆ ಅಣ್ಣನ ಜೊತೆ ಸೇರಿ ತಾಯಿಯನ್ನೇ ಕೊಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪುನೀತ್ (26,) ಶೈಲಜಾ (21) ತಾಯಿಯನ್ನೇ ಕೊಲೆಗೈದ ಆರೋಪಿಗಳಾಗಿದ್ದಾರೆ. ಇಬ್ಬರನ್ನು ಸದ್ಯ ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಕಾರಣವಾಯ್ತಾ ಅಕ್ರಮ ಸಂಬಂಧ..?
ಶೈಲಜಾ ಹಾಗೂ ಪುನೀತ್ ಇಬ್ಬರು ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳಾಗಿದ್ದು, ಅಣ್ಣನಾಗಿದ್ದ ಪುನೀತ್ ಜೊತೆಗೆ ಶೈಲಜಾಗೆ ಅಕ್ರಮ ಸಂಬಂಧ ಇತ್ತಂತೆ. ಆದರೆ ಹೊರಜಗತ್ತಿಗೆ ಇಬ್ಬರು ಅಣ್ಣ ತಂಗಿಯಂತೆ ವರ್ತನೆ ಮಾಡ್ತಿದ್ದರಂತೆ. ಆದರೆ ಮನೆಯೊಳಗೆ ಇಬ್ಬರು ಅನೈತಿಕ ಸಂಬಂಧದಲ್ಲಿ ತೊಡಗುತ್ತಿದ್ದರಂತೆ. ಇಬ್ಬರ ನಡುವಿನ ಲವ್ವಿ ಡವ್ವಿಗೆ ವಿಚಾರ ಶೈಲಜಾ ಅವರ ತಾಯಿ ಅವರಿಗೆ ಗೊತ್ತಾಗಿದ್ದು, ಇಬ್ಬರ ಸಂಬಂಧಕ್ಕೆ ಬ್ರೇಕ್ ಹಾಕಲು ಮಗಳಿಗೆ ಎಚ್ಚರಿಕೆ ನೀಡಿದ್ದರಂತೆ.
ಕಾಲು ಜಾರಿ ಸಂಪ್ಗೆ ಬಿದ್ದು ಸಾವನ್ನಪ್ಪಿರೋದಾಗಿ ನಾಟಕ..
ಅಲ್ಲದೇ, ಮೆಸೇಜ್ ಕಾಲ್, ಮಾಡದಂತೆ ಇಬ್ಬರಿಗೂ ಸಾವಿತ್ರಮ್ಮ ಹಾಗೂ ಪುನೀತ್ ತಾಯಿ ಎಚ್ಚರಿಕೆ ಕೊಟ್ಟಿದ್ದರಂತೆ. ಆ ಬಳಿಕ ಸ್ವಲ್ಪ ದಿನಗಳ ಕಾಲ ಅಣ್ಣ ತಂಗಿಯಂತೆ ಇದ್ದವರು ಮತ್ತೆ ತಮ್ಮ ಆಟ ಶುರು ಮಾಡಿದ್ದರಂತೆ. ಕಳೆದ ಜನವರಿ 29ರ ರಾತ್ರಿ ಶೈಲಜಾ ಮನೆಗೆ ಬಂದಿದ್ದ ಪುನೀತ್, ಸಾವಿತ್ರಮ್ಮ ಜೊತೆಗೆ ಒಟ್ಟಿಗೆ ಊಟ ಮಾಡಿ ಮನೆಯಲ್ಲೇ ಮಲಗಿದ್ದರಂತೆ. ಈ ವೇಳೆ ಸಾವಿತ್ರಮ್ಮ ಕೊಲೆಗೆ ಸ್ಕೇಚ್ ಹಾಕಿದ್ದ ಪುನೀತ್ ಹಾಗೂ ಶೈಲಜಾ, ಮಧ್ಯರಾತ್ರಿ ಸಾವಿತ್ರಮ್ಮನ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಕಾಲು ಜಾರಿ ಸಂಪ್ ಗೆ ಬಿದ್ದು ಸಾವನ್ನಪ್ಪಿರೋದಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ನಾಟಕವಾಡಿದ್ದರಂತೆ.
ಕೊಲೆ ಮಾಡಿ ಏನು ಗೊತ್ತಿಲ್ಲದಂತೆ ಹಾಯಾಗಿದ್ರು..
ಕೊಲೆ ಮಾಡಿ ತಮಗೆ ಏನು ಗೊತ್ತಿಲ್ಲದಂತೆ ಆಯಾಗಿದ್ದ ಪುನೀತ್ ಹಾಗೂ ಶೈಲಜಾ, ಘಟನೆ ಬಳಿಕ ಮತ್ತೆ ಸಂಬಂಧವನ್ನು ಮುಂದುವರಿಸಿದ್ದರು ಎನ್ನಲಾಗಿದೆ. ಈ ನಡುವೆ ಸಾವಿನ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಇಬ್ಬರ ನಡೆಯ ಬಗ್ಗೆ ಅನುಮಾನ ಬಂದಿದ್ದು, ಈ ವೇಳೆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ವೇಳೆ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಸದ್ಯ ಇಬ್ಬರನ್ನ ಬಂಧಿಸಿರುವ ಕೊರಟಗೆರೆ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.