ಸಹೋದರರಿಂದ ಮತ್ತೆ ಶುರುವಾಗಲಿದೆ ‘ಮಿಂಚಿನ ಓಟ’ -ಸಿನಿಮಾ ಹೆಸರು ಯಾವುದು ಗೊತ್ತಾ..?

ಸಹೋದರರು ಒಟ್ಟಿಗೆ ಒಂದೇ ಸಿನಿಮಾದಲ್ಲಿ ಸಿಲ್ವರ್ ಸ್ಕ್ರೀನ್​​ನಲ್ಲಿ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಆದ್ರೇ ಆಗಾಗ ಸಹೋದರರ ರಂಜನೆಯ ಜಾದು ನಮ್ಮ ಕನ್ನಡ ಬೆಳ್ಳಿ ಲೋಕದಲ್ಲಿ ಆದ ಇತಿಹಾಸವಿದೆ. ಈಗ ವಿಷಯವೇನು ಗೊತ್ತಾ ? ಮತ್ತೊಮ್ಮೆ ಚಿನ್ನಾರಿ ಮುತ್ತ ಹಾಗೂ ರೋರಿಂಗ್ ರಥಾವರ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ.

ಸಹೋದರರು ಸಿನಿಮಾ ರಂಗದಲ್ಲಿ ಕಲಾವಿದರಾಗಿ ಇರೋದು ಹಿಂದಿನಿಂದ ನಡೆದುಕೊಂಡು ಬಂದಿರೋ ಸುಸಂಪ್ರಾದಯ. ಡಾ.ರಾಜ್ ಕುಮಾರ್ ಅವರ ಜೊತೆ ಅವರ ಸಹೋದರ ವರದಪ್ಪನವರು ತೆರೆಯ ಮೇಲೆ ಜೊತೆಯಾಗಿ ಇರದಿದ್ದರು ತೆರೆಯ ಹಿಂದೆ ರಾಜಣ್ಣನ ಶಕ್ತಿಯಾಗಿದ್ದರು. ಸ್ಯಾಂಡಲ್​ವುಡ್​​ನ ಫೇಮಸ್ ಅಣ್ತಮ್ಮಂದಿರಲ್ಲಿ ಮತ್ತೊಂದು ಸಹೋದರರ ಜೋಡಿ ಅನಂತ್ ನಾಗ್ ಶಂಕರ್ ನಾಗ್. ನಾಗ್ ಬ್ರದರ್ಸ್ ಅನೇಕ ಸಿನಿಮಾಗಳಲ್ಲಿ ಮಿಂಚಿನ ಓಟವನ್ನೇ ಮಾಡಿದೆ.

ಅನಂತ್ ನಾಗ್ ನಂತರ ಸಹೋದರಾಗಿ ಸ್ಯಾಂಡಲ್​ವುಡ್​​ನಲ್ಲಿ ಮಿಂಚಿದವರು ಡಾ.ಶಿವರಾಜ್ ಕುಮಾರ್ ಹಾಗು ರಾಘವೇಂದ್ರ ರಾಜ್ ಕುಮಾರ್​​. ಶಿವಣ್ಣ- ರಾಘಣ್ಣ ನಟನೆಯ ಆಸೆಗೊಬ್ಬ ಮೀಸೆಗೊಬ್ಬ ಸಿನಿಮಾವನ್ನ ಯಾರ್ ಮರಿಯೋಕೆ ಆಗುತ್ತೇಳಿ.

ನಾಗ್ ಬ್ರದರ್ಸ್ ನಂತರ ಶಿವಣ್ಣ- ರಾಘಣ್ಣನ ನಂತರ ಸ್ಯಾಂಡಲ್​​ವುಡ್​​ನಲ್ಲಿ ಸಹೋದರ ಸ್ಟಾರ್ಸ್​​​ಗಳೆಂದು ಕರೆಸಿಕೊಂಡವರು ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಮತ್ತು ರೋರಿಂಗ್ ಸ್ಟಾರ್ ಶ್ರೀಮುರಳಿ.. ಚಿನ್ನಾರಿ ಮುತ್ತಾ ಮತ್ತು ರೋರಿಂಗ್ ಸ್ಟಾರ್ ಹಿಂದೊಮ್ಮೆ ಅನಂತ್ ನಾಗ್ – ಶಂಕರ್ ನಾಗ್ ಸಹೋದರರ ಸ್ಫೂರ್ತಿ ಪಡೆದು ಅವರಿವಬ್ಬರೇ ನಟಿಸಿದ್ದ ಮಿಂಚಿನ ಓಟ ಸಿನಿಮಾದಲ್ಲೇ ಒಂದು ಸಿನಿಮಾ ಮಾಡಿದ್ರು.

ವಿಜಯ್ – ಶ್ರೀಮುರಳಿ ಮತ್ತೆ ಒಟ್ಟಿಗೆ ಮಿಂಚಿನ ಓಟ
ಮತ್ತೊಮ್ಮೆ ನಟಿಸೋ ಆಸೆ ವ್ಯಕ್ತ ಪಡಿಸಿದ ಸಹೋದರರು

ವಿಜಯ್ ಮತ್ತು ಮುರಳಿ ನಟನೆಯ ಮಿಂಚಿನ ಓಟ ಸಿನಿಮಾ ಅಷ್ಟಾಗಿ ಪ್ರೇಕ್ಷಕರ ಹತ್ತಿರವಾಗದೇ ಇದ್ರು ಪರಿಚಿತ ಸಿನಿಮಾ ಆಗಿತ್ತು.. ಈಗ ಮತ್ತೆ ಈ ಇಬ್ಬರು ಒಟ್ಟಿಗೆ ನಟಿಸೋ ಮಾತುಗಳನ್ನ ಆಡಿದ್ದಾರೆ. ಚಿನ್ನೇಗೌಡ್ರ ಮಕ್ಕಳು ಮತ್ತೆ ಒಟ್ಟಿಗೆ ನಟಿಸೋ ಮಾತನಾಡೋ ಹಾಗೆ ಮಾಡಿದ್ದು ‘‘ಗ್ರೇ ಗೇಮ್ಸ್​ ’’ ಸಿನಿಮಾ.

ಗ್ರೇ ಗೇಮ್ಸ್​. ಇದು ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಅವರ 51ನೇ ಸಿನಿಮಾ. ‘‘ಸೀತಾರಾಮ್ ಬಿನೋಯಿ’’ ಸಿನಿಮಾದ ನಂತರ ‘‘ಗ್ರೇ ಗೇಮ್ಸ್​ ’’ ಸಿನಿಮಾದಲ್ಲಿ ವಿಜಯ ರಾಘವೇಂದ್ರ ನಿಂತಿದ್ದಾರೆ. ಈ ಸಿನಿಮಾದ ಮುಹೂರ್ತದ ಮುಖ್ಯ ಅತಿಥಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಕಾಣಿಸಿಕೊಂಡರು. ಈ ಸುಸಂದರ್ಭದಲ್ಲಿ ವಿಜಯ್-‘ಮುರಳಿ ಸಹೋದರರು ಮತ್ತೆ ಅಭಿನಯಸೋ ಮಾತುಗಳನ್ನ ಆಡಿದ್ದಾರೆ.

ಒಟ್ಟಿನಲ್ಲಿ ವಿಜಯ್ ರಾಘವೇಂದ್ರ ಹಾಗೂ ಶ್ರೀ ಮುರಳಿ ಅವರ ಈ ಸ್ಟೆಟ್​ಮೆಂಟ್ ಸ್ಯಾಂಡಲ್​ವುಡ್ ಲೋಕದಲ್ಲಿ ಕುತೂಹಲ ಮೂಡಿಸಿದೆ.

The post ಸಹೋದರರಿಂದ ಮತ್ತೆ ಶುರುವಾಗಲಿದೆ ‘ಮಿಂಚಿನ ಓಟ’ -ಸಿನಿಮಾ ಹೆಸರು ಯಾವುದು ಗೊತ್ತಾ..? appeared first on News First Kannada.

News First Live Kannada

Leave a comment

Your email address will not be published. Required fields are marked *