ಚಿತ್ರದುರ್ಗ: ತಂಗಿಯ ಮೃತದೇಹ ಹೊತ್ತು ಮನೆಗೆ ತರುತ್ತಿದ್ದ ಅಣ್ಣನೂ ಸಹ ತಂಗಿಯ ಜೊತೆ ತಾನೂ ಪ್ರಾಣಬಿಟ್ಟ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ನಡೆದಿದೆ. ಸಾವಿನಲ್ಲೂ ಅಣ್ಣ-ತಂಗಿ ಒಂದಾಗಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರಿನ ರಾಮು ಮುದ್ದಿಗೌಡರ ಎಂಬಾತನ ಸಹೋದರಿ ರೇಣುಕಾ ಮೂರು ದಿನದ ಹಿಂದೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಅಣ್ಣ ರಾಮು ಆಕೆಗೆ ಹೆಚ್ಚಿನ ಚಿಕಿತ್ಸೆ ಕೊಡಿಸುವ ಉದ್ದೇಶದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದ.

ಆದರೆ ಚಿಕಿತ್ಸೆ ಫಲಕಾರಿಯಾಗದೇ ರೇಣುಕಾ ಸಾವನ್ನಪ್ಪಿದ್ದು ತಂಗಿಯ ಮೃತದೇಹ ಹೊತ್ತು ಕಾರ್​ನಲ್ಲಿ ವಾಪಸ್ಸಾಗುವಾಗ ಟಿಪ್ಪರ್​ಗೆ ಕಾರ್ ಬಡಿದು ಅಪಘಾತ ಸಂಭವಿಸಿದೆ. ಹಿರಿಯೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಮಾರ್ಗವಾಗಿ, ಹೀರೆಕೆರೂರಿಗೆ ಹೋಗುತ್ತಿರುವಾಗ ಅಪಘಾತವಾಗಿದ್ದು ಅಣ್ಣ ರಾಮು ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಹಿರಿಯೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಆತನೂ ಸಾವನ್ನಪ್ಪಿದ್ದಾನೆ.

The post ಸಹೋದರಿಯ ಶವ ಹೊತ್ತು ಬರುತ್ತಿದ್ದ ಅಣ್ಣನಿಗೆ ಅಪಘಾತ; ಅಣ್ಣ-ತಂಗಿ ದುರಂತ ಸಾವು appeared first on News First Kannada.

Source: newsfirstlive.com

Source link