ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ಅವರು ಇತ್ತೀಚೆಗೆ ತಮ್ಮ ಸಹೋದ್ಯೋಗಿಯೋರ್ವಳಿಗೆ ಕಿಸ್ ಮಾಡಿದ್ದ ಸೀಕ್ರೆಟ್ ಫೋಟೋವೊಂದು ಅಂತರಾಷ್ಟ್ರೀಯ ಮಾಧ್ಯಮವೊಂದರಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆ ಅವರು ಕ್ಷಮೆ ಕೇಳಿದ್ದಾರೆ.

ಆರೋಗ್ಯ ಕಾರ್ಯದರ್ಶಿಯಾಗಿದ್ದುಕೊಂಡು ಕೋವಿಡ್ ನಿಯಮಗಳಲ್ಲೊಂದಾದ ಸೋಷಿಯಲ್ ಡಿಸ್ಟೆನ್ಸ್ ಉಲ್ಲಂಘಿಸಿ ತಪ್ಪು ಮಾಡಿದ್ದೇನೆ.. ನನ್ನನ್ನ ಕ್ಷಮಿಸಿ ಅಂತ ಮ್ಯಾಟ್ ಹ್ಯಾಂಕಾಕ್ ಕ್ಷಮೆ ಕೋರಿದ್ದಾರೆ. ನಾನು ಆ ಸಂದರ್ಭದಲ್ಲಿ ಸೋಷಿಯಲ್ ಡಿಸ್ಟೆನ್ಸ್ ನಿಯಮವನ್ನು ಉಲ್ಲಂಘಿಸಿರೋದನ್ನ ಒಪ್ಪಿಕೊಳ್ಳುತ್ತೇನೆ. ಜನರು ನನ್ನ ಮೇಲಿಟ್ಟ ನಂಬಿಕೆಯನ್ನ ನಾನು ಉಳಿಸಿಕೊಳ್ಳಲಿಲ್ಲ. ವೆರಿ ಸಾರಿ.. ಇನ್ನು ಮುಂದೆ ದೇಶವನ್ನ ಕೊರೊನಾ ಮುಕ್ತವಾಗಿಸಲು ಹೋರಾಡುತ್ತೇನೆ. ನನ್ನ ಕುಟುಂಬವೂ ಈ ವಿಚಾರದಲ್ಲಿ ನನ್ನ ಕುಟುಂಬದ ಪ್ರೈವಸಿಗೆ ಧಕ್ಕೆ ತರದಿರುವುದಕ್ಕೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.

The post ಸಹೋದ್ಯೋಗಿಗೆ ಕಿಸ್ ಮಾಡಿ ಕೊರೊನಾ ರೂಲ್ಸ್ ಬ್ರೇಕ್: ಕ್ಷಮೆ ಕೇಳಿದ ಯುಕೆ ಆರೋಗ್ಯಾಧಿಕಾರಿ appeared first on News First Kannada.

Source: newsfirstlive.com

Source link