ಲಂಡನ್: ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಈ ನಡುವೆ ಅಭ್ಯಾಸದ ವೇಳೆ ಸಹ ಆಟಗಾರನ ಫುಟ್‍ಬಾಲ್ ಆಟಕಂಡು ತಂಡದ ನಾಯಕ ವಿರಾಟ್ ಕೊಹ್ಲಿ ನೆಲದಲ್ಲಿ ಬಿದ್ದು ಹೊರಳಾಡಿ ನಕ್ಕಿದ್ದಾರೆ.

ಇಂಗ್ಲೆಂಡ್‍ನಲ್ಲಿ ನಡೆದ ವಿಶ್ವಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಬಳಿಕ ಸ್ವಲ್ಪ ವಿರಾಮದಲ್ಲಿದ್ದ ಭಾರತ ತಂಡ ಮತ್ತೆ ಇದೀಗ ಇಂಗ್ಲೆಂಡ್ ಸರಣಿಗೆ ಅಭ್ಯಾಸ ಆರಂಭಿಸಿದೆ. ಈ ನಡುವೆ ತಂಡದ ಸಹ ಆಟಗಾರರಲ್ಲಿ ಕೊರೊನಾ ದೃಢಪಟ್ಟಿರುವ ಆತಂಕದ ನಡುವೆ ಭಾರತ ತಂಡದ ಸದಸ್ಯರು ಡರ್ಹಾಮ್‍ಗೆ ತೆರಳಿ ಅಭ್ಯಾಸ ಅರಂಭಿಸಿದ್ದಾರೆ.

ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಸಹಿತ ಎಲ್ಲ ಆಟಗಾರರು ಫುಟ್‍ಬಾಲ್ ಆಟದಲ್ಲಿ ತೊಡಗಿದ್ದಾರೆ. ಈ ವೇಳೆ ಸಹ ಆಟಗಾರರು ಕಾಲು ಮತ್ತು ತಲೆಯಲ್ಲಿ ಬಾಲ್‍ನ್ನು ಒದೆಯುತ್ತಿದ್ದರು. ಈ ಸಂದರ್ಭ ಕನ್ನಡಿಗ ಪ್ರಸಿದ್ಧ್ ಕೃಷ್ಣ ಫುಟ್‍ಬಾಲ್ ಆಡುವುದನ್ನು ಕಂಡು ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಅಣಕಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರಾಹುಲ್ ತಲೆಯಲ್ಲಿ ಪ್ರಸಿದ್ಧ್ ಕೃಷ್ಣರಂತೆ ಆ್ಯಕ್ಷನ್ ಮಾಡುವ ಮೂಲಕ ನಗಲು ಆರಂಭಿಸಿದ್ದಾರೆ. ಕೊಹ್ಲಿ ನಕ್ಕು, ನಕ್ಕು ಕೊನೆಗೆ ಮೈದಾನದಲ್ಲಿ ಹೊರಳಾಡಿದ್ದಾರೆ. ಇದನ್ನೂ ಓದಿ: ಸಚಿನ್, ಸೆಹ್ವಾಗ್ ಬಳಿಕ ಆರಂಭಿಕನಾಗಿ ಶಿಖರ್ ಧವನ್ ನೂತನ ಮೈಲಿಗಲ್ಲು

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಾಟ ಆಗಸ್ಟ್ 4 ರಂದು ಆರಂಭವಾಗಲಿದೆ. ಈ ಮೂಲಕ 5 ಪಂದ್ಯಗಳ ಸುದೀರ್ಘ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ಕಾದಾಡಲಿದೆ.

The post ಸಹ ಆಟಗಾರನ ಫುಟ್‍ಬಾಲ್ ಆಟಕಂಡು ನೆಲದಲ್ಲಿ ಹೊರಳಾಡಿ ನಕ್ಕ ಕೊಹ್ಲಿ appeared first on Public TV.

Source: publictv.in

Source link