ಸಾಂಗ್​ ರಿಲೀಸ್​ಗೆ ಹೊಸ ‘ಅವತಾರ’ವೆತ್ತಿದ ಸ್ಯಾಂಡಲ್​ವುಡ್​ ಅಧ್ಯಕ್ಷ


ಎರಡನೇ ಲಾಕ್ ಡೌನ್ ಮುಗಿದು ನಂತರ ಸಿನಿಮಾಗಳ ಹಬ್ಬ ಸ್ಯಾಂಡಲ್​​ವುಡ್​​ನಲ್ಲಿ ಶುರುವಾಗಿದೆ. ಎರಡು ವರ್ಷದಿಂದ ಶೂಟಿಂಗ್ ಸ್ಪಾಟ್​​ನಲ್ಲಿ ಕಾಲ ಕಳೆದು ಟೀಸರ್​ನಿಂದ ಗತ್ತು ಗಮ್ಮತ್ತನ್ನ ತೋರಿದ ಅವತಾರ ಪುರುಷ ಕೊನೆಗೂ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದ್ದಾರೆ.

ನಟ ಶರಣ್​​ ಸಹ ನಟನಾಗಿ ಕಾಮಿಡಿ ಕಚಗುಳಿ ಇಡ್ತಿದ್ದವರು ಱಂಬೋ ಚಿತ್ರದಿಂದ ಫುಲ್ ಟೈಮ್ ಹೀರೋ ಆಗಿ ಕಾಮಿಡಿ ಕಿಕ್ ಅನ್ನ ಕನ್ನಡಿಗರಿಗೆ ನೀಡ್ತಿದ್ದಾರೆ. ಆ್ಯಕ್ಟಿಂಗು, ಸಿಂಗಿಂಗು, ಡ್ಯಾನ್ಸಿಂಗ್​ನಂತ ಸಿನಿಮಾದ ಎಲ್ಲಾ ವಿಂಗ್​​​​ಗಳಲ್ಲೂ ಹೀ ಈಸ್ ಫರ್ಫೆಕ್ಟ್. ಇಂತಹ ರಂಗಭೂಮಿಯ ಪ್ರತಿಭೆ ಅಭಿನಯ ಮಾಡಿರುವ ನಿರೀಕ್ಷಿತ ಸಿನಿಮಾಗಳಲ್ಲೊಂದು ಅವತಾರ ಪುರುಷ.

ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಅವತಾರ ಪುರುಷ ಆಗಿ ಪ್ರೇಕ್ಷಕರನ್ನ ರಂಜಿಸಲಿದ್ದಾರೆ ಸ್ಯಾಂಡಲ್​ವುಡ್​ ಅಧ್ಯಕ್ಷ. ಇನ್ನು ಇದೇ ಡಿಸೆಂಬರ್​ 10 ರಂದು ಈ ಸಿನಿಮಾ ರಿಲೀಸ್​ ಆಗಲಿದ್ದು ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ನಾಳೆ ಚಿತ್ರದ ಇನ್ನೊಂದು ಹಾಡು ರಿಲೀಸ್​ ಆಗಲಿದ್ದು ವಿಭಿನ್ನವಾದ ಪ್ರಚಾರ ತಂತ್ರಕ್ಕೆ ಚಿತ್ರತಂಡ ಮೊರೆ ಹೋಗಿದೆ. ಜಾಹೀರಾತಿನ ಕಲ್ಪನೆಯಲ್ಲಿ ಒಂದು ಚಿಕ್ಕ ವಿಡಿಯೋವನ್ನು ರಿಲೀಸ್​ಗಾಗಿ ಸುನಿ ಟೀಂ ರೆಡಿ ಮಾಡಿ ಹರಿಬಿಟ್ಟಿದೆ. ಇದನ್ನ ಕಂಡ ಪ್ರೇಕ್ಷಕ ಮಹಾಪ್ರಭು ಅವತಾರ ಪುರುಷನ ಹೊಸ  ಅವತಾರಕ್ಕೆ ಫಿದಾ ಆಗಿದ್ದಾರೆ.

News First Live Kannada


Leave a Reply

Your email address will not be published. Required fields are marked *