ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಕಾಣಿಸಿಕೊಂಡ ಬಸವ, ತೆಂಗಿನಕಾಯಿಗೆ ವಿಶೇಷ ಪೂಜೆ
ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ತೆಂಗಿನಕಾಯಿಯಲ್ಲಿ ಬಸವ ರೂಪಿ ಕಾಣಿಸಿಕೊಂಡಿದ್ದು, ತೆಂಗಿನಕಾಯಿಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ಮೈಸೂರಿನ ಹಿನಕಲ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನಕಾಯಿಗೆ ಭಾವ ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಹಿನಕಲ್ನ ನನ್ನೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಶಿವ ಲಿಂಗದ ಮುಂದಿಟ್ಟು ಜನ ಹೂ, ಕುಂಕುಮ ಹಚ್ಚಿ ಭಕ್ತಿಯಿಂದ ಪೂಜಿಸಿದ್ದಾರೆ. ಸುಲಿದ ತೆಂಗಿನಕಾಯಿ ಮೊಳಕೆ ಒಡೆದು ಬಸವನ ಮೂತಿಯ ರೂಪ ಹೊರಬಂದಿದೆ. ಅದು ಬಸವನ ರೀತಿಯ ಮುಖ ಹಾಗೂ ಕೊಂಬುಗಳ ರೂಪ ಪಡೆದುಕೊಂಡಿದೆ. ಅದನ್ನು ಜನ ಬಸವ ದೇವರ ಸ್ವರೂಪಿ ಎಂದು ಪೂಜೆ ಮಾಡಿದ್ದಾರೆ.
Also Read:
ಗರುಡ ಪುರಾಣವನ್ನು ಮನೆಯಲ್ಲಿ ಓದಬಾರದು ಎಂಬುದು ಕಟ್ಟುಪಾಡು! ಇದು ಎಷ್ಟು ಸರಿ, ಇದಕ್ಕೆ ಕಾರಣವೇನು?
Zodiac Signs: ಈ 4 ರಾಶಿಯ ಜನರು ತಮ್ಮ ಪರಿಶ್ರಮ ಮತ್ತು ಅದೃಷ್ಟದಿಂದ ಶ್ರೀಮಂತರಾಗುತ್ತಾರೆ