ಗುಜರಾತ್: ಕೆಲವರು ಯೌವ್ವನಾವಸ್ಥೆಯಲ್ಲಿದ್ದಾಗ ಸಾಧನೆಯ ಬೆನ್ನು ಹತ್ತಿ ವಯಸ್ಸಾಗುತ್ತಲೇ ಜೀವನೋತ್ಸಾಹವನ್ನೇ ಕಳೆದುಕೊಂಡು ಸಾವಿನ ದಿನಗಳನ್ನ ಎಣಿಸಲು ಪ್ರಾರಂಭಿಸುತ್ತಾರೆ. ಇಂಥವರ ಮಧ್ಯೆ 67 ವರ್ಷದ ವೃದ್ಧೆಯೋರ್ವರು ಮಹತ್ವದ ಸಾಧನೆಯೊಂದನ್ನು ಮಾಡುವ ಮೂಲಕ ಸಾಧನೆಗೆ ವಯಸ್ಸಿನ ಅಂತರವಿಲ್ಲ ಅನ್ನೋದನ್ನ ಸಾಧಿಸಿ ತೋರಿಸಿದ್ದಾರೆ.

ಗುಜರಾತ್​ನ ವಡೋದರಾದ 67 ವರ್ಷದ ವೃದ್ಧೆ ಉಷಾ ಲೊದಯ ಎಂಬುವವರು 20 ವರ್ಷ ವಯಸ್ಸಿದ್ದಾಗಲೇ ಕಾಲೇಜ್ ಬಿಟ್ಟು ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆಗಿನಿಂದಲೂ ಅವರಿಗೆ ಪಿಹೆಚ್​ಡಿ ಮುಗಿಸಿ ಡಾಕ್ಟರೇಟ್ ಪಡೆಯುವ ಆಸೆಯೊಂದು ಹಾಗೆಯೇ ಉಳಿದುಹೋಗಿತ್ತಂತೆ. ಆದ್ರೆ ಇದೀಗ ವೃದ್ಧಾಪ್ಯದಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಜೈನಿಸಮ್ ವಿಷಯದಲ್ಲಿ ಸದ್ಯ ಉಷಾ ಲೊದಯ ಅವರು ಪಿಹೆಚ್​ಡಿ ಮುಗಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಪಿಹೆಚ್​ಡಿ ಮಾಡುವ ಇವರ ಕನಸಿಗೆ ಮಗಳು ನೀರೆರೆದಿದ್ದಾರೆ. ಈ ಕುರರಿತು ಹೇಳಿಕೆ ನೀಡಿರುವ ಉಷಾ ಅವರು.. ನಾನು ಮದುವೆಯಾದಾಗ ಮೊದಲ ವರ್ಷದ ಪದವಿ ಮಾಡುತ್ತಿದ್ದೆ. ನನಗೆ ಆಗಿನಿಂದಲೂ ಡಾಕ್ಟರ್ ಆಗಬೇಕೆಂಬ ಕನಸಿತ್ತು. ನನ್ನ ಪೋಷಕರು ನನಗೆ ವಿದ್ಯಾಭ್ಯಾಸ ಮುಂದುವರೆಸಲು ಹೇಳಿದರೂ ನನಗೆ ಅದರ ಮೇಲೆ ಫೋಕಸ್ ಮಾಡಲಾಗಲಿಲ್ಲ.. ಆದರೆ ಈಗ ಪಿಹೆಚ್​ಡಿ ಮುಗಿಸಿದ್ದು ನನಗೆ ತೃಪ್ತಿ ತಂದಿದೆ ಎಂದಿದ್ದಾರೆ.

The post ಸಾಧನೆಗಿಲ್ಲ ವಯಸ್ಸಿನ ಅಂತರ: 67 ವರ್ಷದ ವೃದ್ಧೆಯ ಪಿಎಚ್​ಡಿ ಕನಸು ಕೊನೆಗೂ ನನಸು appeared first on News First Kannada.

Source: newsfirstlive.com

Source link