ಕೋವಿಡ್ ಬರುವ ಮುಂಚೆ ನಮ್ಮ ಸ್ನೇಹಿತರು, ಬಂಧುಗಳು ಸೇರಿದಾಗ, ತುಂಬ ಆತ್ಮೀಯದಿಂದ ಸ್ವಾಗತಿಸುತ್ತಿದ್ದೆವು. ಕೈ ಕುಲುಕಿ, ತಬ್ಬಿಕೊಂಡು ಆದಷ್ಟು ಹತ್ತಿರದಲ್ಲಿ ಇದ್ದು ಅಭ್ಯಾಸ ನಮಗೆ. ಆದರೆ ಕೊರೊನಾ ಎಲ್ಲದಕ್ಕೂ ಬ್ರೇಕ್ ಹಾಕಿಬಿಟ್ಟಿದೆ. ಯಾರೆ ಬಂದರೂ ಅವರಿಂದ ಕನಿಷ್ಟ ಅಂತರ ಕಾಯ್ದುಕೊಳ್ಳಲೇಬೇಕು. ಕೊರೊನಾ ಮೊದಲ ಅಲೆಯಲ್ಲಿ ಕನಿಷ್ಟ 6 ಅಡಿ ಅಂತರ ಕಾಯ್ದುಕೊಳ್ಳಬೇಕಿದ್ದ ನಮಗೆ ಇತ್ತೀಚೆಗೆ ಬಂದ ಮಾರ್ಗಸೂಚಿ ಪ್ರಕಾರ ಎರಡನೇ ಅಲೆಯಿಂದ ಮೂರನೇ ಅಲೆಗೆ ಹೊಗದಿರಲು 10 ಅಡಿ ಅಂತರ ಬೇಕೆಬೇಕು ಎನ್ನುವುದು ವರದಿ. ಇದರಿಂದ ಸೋಂಕು ಬೇರೆಯವರಿಂದ ನಿಮಗೆ, ನಿಮ್ಮಂದ ಬೇರೆಯವರಿಗೆ ಹರಡುವುದು ತೆಡೆಗಟ್ಟುತ್ತದೆ. ಕೋವಿಡ್ ಚೈನ್ ಗೆ ಬ್ರೇಕ್ ಹಾಕಲು ಉಳಿದಿರುವ ಒಂದೇ ಮಾರ್ಗ ಇದು.

ಮೈಮರೆಯದಂತೆ ಎಚ್ಚರಿಸುತ್ತೆ ಪ್ರಾಕ್ಸಿಮಿಟಿ ಸೆನ್ಸಾರ್
ಬ್ಯುಸಿ ಲೈಫ್ನಲ್ಲಿ ಕೋವಿಡ್ ಮಾರ್ಗಸೂಚಿ ಮರೆತರೆ ಮತ್ತೆ ನಮಗೆ ಅದರಿಂದ ತೊಂದರೆ. ಕೆಲಸದ ಒತ್ತಡದಲ್ಲಿ ಅಥವಾ ಹೇಗೋ ಮೈಮರೆತು ಒಮ್ಮೆಯಾದರೂ ನಾವು ಸಾಮಾಜಿಕ ಅಂತರ ಪಲಿಸೋದಿಲ್ಲ. ಇದಕ್ಕೆ ಪರಿಹಾರವಾಗಿ ಹೊಸದೊಂದು ಸ್ಪೆಷಲ್ ಡಿವೈಸ್ ರೆಡಿಯಾಗಿದೆ. ಈ ಡಿವೈಸ್ ನೀವು ಸಾಮಾಜಿಕ ಅಂತರ ಮರೆತರೆ ಅಲಾರಾಂ ಸದ್ದು ಮಾಡಿ ಎಚ್ಚರಿಸುತ್ತದೆ. ಕೂಡಲೇ ಎಚ್ಚೆತ್ತು ಅಂತರ ಕಾಪಾಡಬಹುದು.

ಸೋಷಿಯಲ್ ಡಿಸ್ಟೆನ್ಸಿಂಗ್ ಕಾಪಾಡಿಕೊಳ್ಳಲು ಎಚ್ಚರಿಸುವ ಈ ಡಿವೈಸ್ ಹೆಸರು ಪ್ರಾಕ್ಸಿಮಿಟಿ ಸೆನ್ಸಾರ್ ಆ್ಯಂಡ್ ಕಾಂಟ್ಯಾಕ್ಟ್ ಟ್ರೇಸಿಂಗ್. ಇದರಲ್ಲಿ ಪ್ರಾಕ್ಸಿಮಿಟಿ ಸೆನ್ಸಾರ್ ಅಳವಡಿಸಲಾಗಿರುತ್ತದೆ. ಇದು ಒಂದು ಡಿವೈಸ್ನಿಂದ ಇನ್ನೊಂದು ಡಿವೈಸ್ ನಡುವೆ ಅಂತರದ ಲೆಕ್ಕಾಚಾರ ಹಾಕಿ ಕಾಪಾಡಿಕೊಳ್ಳುತ್ತಿರುತ್ತದೆ. ಪ್ರ ತಿಬಾರಿಯು ಸುತ್ತಲಿನ ಎಲ್ಲ ಸೆನ್ಸಾರ್ಗಳಿಗೆ ಇದು ಯಾವುದೇ ಇನಿಷಿಯೇಷನ್ ಇಲ್ಲದೆ ಕನೆಕ್ಟ್ ಆಗುತ್ತೆ. ಒಂದೊಮ್ಮೆ ಈ ಲೆಕ್ಕಾಚಾರ ತಪ್ಪಿ ಅಂತರ ಹತ್ತಿರವಾದಾಗ ಈ ಸೆನ್ಸಾರ್ ಅದನ್ನು ಗುರುತಿಸಿ ಅಲಾರಾಂ ಅಥವಾ ಬಸ್ಸರ್ ಮುಖಾಂತರ ಎಚ್ಚರಿಕೆ ಸಂದೇಶ ಹೇಳುತ್ತದೆ. ಈ ಸೆನ್ಸಾರ್ ಪ್ರಭಾವದಿಂದ ಮತ್ತೆ ಡಿಸ್ಟೆನ್ಸ್ ಕಾಯ್ದುಕೊಳ್ಳಬಹುದು.

ಹೇಗೆ ಕೆಲಸ ಮಾಡುತ್ತದೆ..?
ಈ ಸೆನ್ಸಾರ್ ಹಿಂದೆ ಇರುವುದು ಸಾಮಾನ್ಯ ವಿಜ್ಞಾನ. ಅದು ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್. ಒಂದು ಮ್ಯಾಗ್ನೆಟ್ ಇಟ್ಟರೆ ಸುತ್ತಲು ತನ್ನದೆ ಆದ ಮ್ಯಾಗ್ನೆಟಿಕ್ ಫೀಲ್ಡ್ ಮಾಡಿಕೊಳ್ಳುತ್ತದೆ. ಆ ಮ್ಯಾಗ್ನೆಟಿಕ್ ಫೀಲ್ಡ್ ಹೆಚ್ಚು ಡಿಸ್ಟೆನ್ಸಿಗೆ ಬೇಕೆಂದರೆ ಸ್ವಲ್ಪ ದೊಡ್ಡ ಮಟ್ಟಿಗಿನ ಮ್ಯಾಗ್ನೆಟ್ ಬಳಸಬೇಕಾಗುತ್ತದೆ. ಇದರಿಂದ ಎಲ್ಲ ಸೆನ್ಸಾರ್ ಗಳಿಗೂ ಚಾರ್ಜರ್ ಸಹಾಯದಿಂದ ಮ್ಯಾಗ್ನೆಟಿಕ್ ಫೀಲ್ಡ್ ಶಕ್ತಿಯನ್ನು ಹೆಚ್ಚಿಸಲಾಗುತ್ತದೆ. ಹಾಗೆ ಪ್ರಾಕ್ಸಿಮಿಟಿ ಸೆನ್ಸಾರ್ ಸಹ ಎಲೆಕ್ಟ್ರೋ ಮ್ಯಾಗ್ನೆಟಿಕ್ ಸ್ಪೆಕ್​ಟ್ರಂ ಮೂಲಕ ತನ್ನ ಸುತ್ತ ಒಂದು ಫೀಲ್ಡ್ ಸಿದ್ದಮಾಡಿಕೊಂಡಿರುತ್ತದೆ. ಈ ಫೀಲ್ಡ್ಗೆ ಇನ್ನೊಂದು ಮ್ಯಾಗ್ನೆಟಿಕ್ ಫೀಲ್ಡ್ ಅಡ್ಡ ಬಂದರೆ ಸೆನ್ಸಾರ್ ಬಸ್ಸರ್ ಸದ್ದು ಮಾಡಬೇಕು ಎನ್ನುವ ಪ್ರೋಗ್ರಾಂ ಮಾಡಿರಲಾಗುತ್ತದೆ.

ಈ ಕಾರಣದಿಂದ ಎಲ್ಲೆಲ್ಲಿ ಮ್ಯಾಗ್ನೆಟಿಕ್ ಫೀಲ್ಡ್ ಸೃಷ್ಟಿ ಆಗುತ್ತದೆಯೋ ಅಲ್ಲಲ್ಲಿ ಬೇರೆ ಮ್ಯಾಗ್ನೆಟಿಕ್ ರೇಡಿಯೇಷನ್ಗಳನ್ನು ಈ ಸೆನ್ಸಾರ್ ಗಮನಿಸುತ್ತಿರುತ್ತದೆ. ಯಾವಾಗ ಒಂದು ಫೀಲ್ಡ್ ಗೆ ಇನ್ನೊಂದು ಫೀಲ್ಡ್ ಓವರ್ ಲ್ಯಾಪ್ ಆಗುತ್ತೋ ಆಗ ಸೋಷಿಯಲ್ ಡಿಸ್ಟೆನ್ಸಿಂಗ್ ಮೀರಿರುವುದಾಗಿ ಗುರುತಿಸಿ ಬಸ್ಸರ್ ಸದ್ದು ಕೇಳತೊಡಗುತ್ತದೆ.

ಅನಾಹುತ ತಪ್ಪಿಸುತ್ತವೆ ಪ್ರಾಕ್ಸಿಮಿಟಿ ಸೆನ್ಸಾರ್
ಈ ಸೆನ್ಸಾರ್​​ನಲ್ಲಿ ಇರುವ ಟೆಕ್ನಾಲಜಿ ಹೊಸದೇನಲ್ಲ. ಪ್ರಾಕ್ಸಿಮಿಟಿ ಸೆನ್ಸಾರ್​ಗಳನ್ನ ಮುಂಚೆ ಫ್ಯಾಕ್ಟರಿಗಳಲ್ಲಿ, ಮಿಷಿನ್ ಓರಿಯಂಟೆಡ್ ಕಂಪನಿಗಳಲ್ಲಿ ಬಳಸಲಾಗುತ್ತಿತ್ತು. ಸಾಲು ಸಾಲಾಗಿ ಬರುತ್ತಿದ್ದ ಪ್ರಾಡಕ್ಟ್ಗಳಿಗೆ ಇನ್ನೊಂದಡೆಗೆ ದಾರಿ ಸೂಚಿಸುವುದು ಈ ಸೆನ್ಸಾರ್ಗಳೇ. ಇನ್ನು ಬಾಂಬ್ ಡಿಟೆಕ್ಟಿಂಗ್ ಸ್ಕ್ವಾಡ್ ಬಳಿ ಇರುವ, ಬಾಂಬ್ಗಳನ್ನು ಪತ್ತೆಹಚ್ಚುವ ಡಿವೈಸ್ ಸಹ ಪ್ರಾಕ್ಸಿಮಿಟಿ ಸೆನ್ಸಾರ್ಗಳೆ. ಹೀಗೆ ಮ್ಯಾಗ್ನೆಟಿಕ್ ಫೀಲ್ಡ್ ಶಕ್ತಿಯಿಂದ ಹಲವು ಅನಾಹುತವನ್ನು ತಪ್ಪಿಸಿದ ಪ್ರಾಕ್ಸಿಮಿಟಿ ಸೆನ್ಸಾರ್, ಈಗ ಕೊರೊನಾದಿಂದ ನಮ್ಮನ್ನು ರಕ್ಷಿಸಲು ರೆಡಿಯಾಗಿದೆ..

ಈ ಸೆನ್ಸಾರ್ ಗಳನ್ನು ಈಗಾಗಲೇ ಬೇರೆ ಬೇರೆ ದೇಶಗಳಲ್ಲಿ ಆಯ್ಕೆಯಾಗಿ ಇಟ್ಟಿದ್ದಾರೆ. ಹಲವು ಕಂಪನಿಗಳು, ವಿಜ್ಞಾನಿಗಳು ಕೊರೊನಾ ಸೋಂಕಿನಿಂದ ದೂರ ಇರಲು ಇದನ್ನು ಬಳಸುತ್ತಿದ್ದಾರೆ.  ವಿದ್ಯಾರ್ಥಿಗಳು ಸಹ ಲೈಬ್ರರಿಯಲ್ಲಿ ಕ್ಲಾಸ್ ರೂಂಗಳಲ್ಲಿ, ಒಟ್ಟಿಗೆ ಸೇರುವ ಇನ್ನಿತರ ಜಾಗಗಳಲ್ಲಿ ಬಳಸಬಹುದಾಗಿದೆ. ಈ ಕೊರೊನಾ ಸಂಕಷ್ಟದ ನಡುವೆಯೂ ಕಾರ್ಯನಿರ್ವಹಿಸಲೇಬೇಕಾದ ವಿಜ್ಞಾನಿಗಳು, ವೈದ್ಯರು, ಆರೋಗ್ಯ ಕರ್ತರು ಇದರ ಉಪಯೋಗವನ್ನು ಪಡೆಯಬಹುದು. ಇನ್ನು ಕೋವಿಡ್ ತೀವ್ರತೆ ಕಡಿಮೆ ಆದ ನಂತರ ಕಾರ್ಪೊರೇಟ್ ಕಚೇರಿಗಳಲ್ಲಿ ಎಸಿ ಹಾಲ್ನಲ್ಲಿ ಕೆಲಸ ಮಾಡುವ ಎಲ್ಲ ಐಟಿ ಉದ್ಯೂಗಿಗಳಿಗೆ ಇದು ಸಹಾಯಕವಾಗುವುದು ಸಂಶವೇ ಇಲ್ಲ.

ಸುಲಭವಾಗಿ ಕ್ಯಾರಿ ಮಾಡಬಹದು
ಈ ಡಿವೈಸ್ ಸುಲಭವಾಗಿ ಕ್ಯಾರಿ ಮಾಡಬಹದು. ಇದನ್ನು ಕೆಲವು ಕಂಪನಿಗಳು ಬೇರೆ ಬೇರೆ ರೀತಿಯಲ್ಲಿ ಡಿಸೈನ್ ಮಾಡಿದ್ದಾರೆ. ಕೆಲವೊಂದು ಐಡಿ ಕಾರ್ಡ್ ರೀತಿಯಲ್ಲಿ ಕತ್ತಿಗೆ ಹಾಕಿಕೊಳ್ಳುವುದಾಗಿರುತ್ತದೆ. ಇನ್ನು ಕೆಲವು ಬೆಲ್ಟ್ ರೀತಿಯಲ್ಲಿ ಎದೆಯ ಭಾಗದಲ್ಲಿ ಇರಸಲಾಗಿರುತ್ತದೆ. ಕೆಲವೊಂದು ಕಂಪನಿ ಐಡಿ ಕಾರ್ಡ್ ಗಳಿಗೆ ಫಿಕ್ಸ್ ಸಹ ಮಾಡಬಹದು. ಅಲ್ಲದೆ ಹೆಡ್ ಕ್ಯಾಪ್ ಗಳಿಗೂ  ಅಳವಡಿಸಿ ಡಿಸ್ಟಿನ್ಸ್ ಮೇನ್​ಟೇನ್ ಮಾಡಬಹುದು. ಹೀಗೆ ಕೊರೊನಾ ವೈರಸ್ ನಿಂದ ನಮ್ಮನ್ನು ನಾವು ಸೇಫ್ ಆಗಿ ಇಡಲು ಈ ಡಿವೈಸ್​ ನೆರವಾಗುತ್ತದೆ. ಎಲ್ಲರಿಗೂ ಈಗಾಗಲೇ ತಿಳಿದಂತೆ ಕೊರೊನಾ ಹರಡುವಿಕೆ ತಡೆಯಲು ಸಾಮಾಜಿಕ ಅಂತರ ಬಹಳ ಮುಖ್ಯ.

The post ಸಾಮಾಜಿಕ ಅಂತರ ಪಾಲಿಸಲು ನೆನಪಿಸುವ ವಿಶೇಷ ಡಿವೈಸ್​​ ಇಲ್ಲಿದೆ appeared first on News First Kannada.

Source: newsfirstlive.com

Source link