– ಮತ್ತೆ ಹುಟ್ಟಿ ಬರುತ್ತೇನೆ: ನಟನ ಕೊನೆಯ ಪೋಸ್ಟ್

ನವದೆಹಲಿ: ಅನ್‍ಫ್ರೀಡಂ ಸಿನಿಮಾ ಖ್ಯಾತಿಯ ನಟ ರಾಹುಲ್ ವೊಹ್ರಾ ಕೋವಿಡ್‍ಗೆ ಬಲಿಯಾಗಿದ್ದಾರೆ. ಶನಿವಾರ ಫೇಸ್‍ಬುಕ್ ನಲ್ಲಿ ರಾಹುಲ್ ತಮಗೆ ಸಹಾಯ ಮಾಡುವಂತೆ ಬರೆದುಕೊಂಡಿದ್ದರು. ಜೊತೆಗೆ ತಮ್ಮ ಕೊರೊನಾ ಸೋಂಕು ತಗುಲಿರುವ ಮಾಹಿತಿ ಹಂಚಿಕೊಂಡಿದ್ದರು.

ನನಗೂ ಒಳ್ಳೆಯ ಚಿಕಿತ್ಸೆ ದೊರೆತರೆ ನಾನು ಬದುಕಿ ಉಳಿಯುತ್ತೇನೆ. ನಿಮ್ಮ ರಾಹುಲ್ ವೊಹ್ರಾ ಎಂದು ಬರೆದುಕೊಂಡಿದ್ದರು. ಕೊರೊನಾ ರೋಗಿಯಾಗಿದ್ದರಿಂದ ಬೆಡ್ ನಂಬರ್ ಸಹಿತ ಮಾಹಿತಿ ಶೇರ್ ಮಾಡಿಕೊಂಡಿದ್ದರು. ಕೊನೆಗೆ ಮತ್ತೆ ಹುಟ್ಟಿ ಬಂದು, ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ಸದ್ಯ ನಾನು ಆತ್ಮಸ್ಥೈರ್ಯ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು.

ಅನ್‍ಫ್ರೀಡಂ ಚಿತ್ರದ ನಿರ್ದೇಶಕ ಸಂತಾಪ: ರಾಹುಲ್ ವೊಹ್ರಾ ನಮ್ಮೊಂದಿಗಿಲ್ಲ. ನಮ್ಮ ಪ್ರತಿಭಾನ್ವಿತ ಕಲಾವಿದ ಇಂದು ಜಗತ್ತಿನಲ್ಲಿಲ್ಲ. ಒಳ್ಳೆಯ ಚಿಕಿತ್ಸೆ ಸಿಕ್ಕರೆ ಬದುಕುತ್ತೇನೆಂದು ನಿನ್ನೆ ಹೇಳಿಕೊಂಡಿದ್ದನು. ವಿಷಯ ತಿಳಿಯುತ್ತಲೇ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಆಯುಷ್ಮಾನ್ ದ್ವಾರಾಕಗೆ ಶಿಫ್ಟ್ ಮಾಡಲಾಗಿತ್ತು. ಆದ್ರೂ ಆತನನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ನಮ್ಮನ್ನು ಕ್ಷಮಿಸು ರಾಹುಲ್, ನಿನ್ನನ್ನು ಬದುಕಿಸಿಕೊಳ್ಳದ ನಾವು ಅಪರಾಧಿಗಳು. ನಿನಗೆ ನನ್ನ ಅಂತಿಮ ನಮನಗಳು ಎಂದು ಅನ್‍ಫ್ರೀಡಂ ಚಿತ್ರದ ನಿರ್ದೇಶಕ ಅರವಿಂದ್ ಗೌರ್ ಸಂತಾಪ ಸೂಚಿಸಿದ್ದಾರೆ.

ಮೃತ ರಾಹುಲ್ ವೊಹ್ರಾ ರಂಗಭೂಮಿ ಕಲಾವಿದರೊಂದಿಗೆ ಹಲವು ಪಾತ್ರಗಳಿಗೆ ಜೀವ ತುಂಬುವ ಕಲೆಯನ್ನ ಕರಗತ ಮಾಡಿಕೊಂಡಿದ್ದರು. ಇದರ ಜೊತೆಗೆ ಕಿರುಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

The post ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕೆ ಮನವಿ – ಮರುದಿನವೇ ನಟ ಕೊರೊನಾಗೆ ಬಲಿ appeared first on Public TV.

Source: publictv.in

Source link