ಸಾಮಾಜಿಕ ಜಾಲಾತಾಣಗಳಲ್ಲಿ ಈ ವರ್ಷ ಅತಿಹೆಚ್ಚು ಉಪಯೋಗಿಸಲ್ಪಟ್ಟಿರುವ ಇಮೋಜಿ ಯಾವುದು ಗೊತ್ತಾ? ಇಲ್ಲಿದೆ ಮಾಹಿತಿ | Emojis dominate chats made on social media, but which is the one used most by users?


ಸಾಮಾಜಿಕ ಜಾಲತಾಣಗಳಲ್ಲಿ ಚ್ಯಾಟ್ ಮಾಡುವಾಗ ಸಂದೇಶಗಳೊಂದಿಗೆ ಇಮೋಜಿಗಳನ್ನು ಪ್ರಾಯಶಃ ಎಲ್ಲರೂ ಕಳಿಸುತ್ತಾರೆ. ಕೆಲವರಂತೂ ಅವುಗಳ ಸಹಾಯದಿಂದಲೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಂದಹಾಗೆ, 2021 ರಲ್ಲಿ ಪ್ರಪಂಚದಾದ್ಯಂತತ ಅತಿಹೆಚ್ಚು ಬಳಸಲ್ಪಟ್ಟ ಇಮೋಜಿ ಯಾವುದಿರಬಹುದೆಂದು ಊಹಿಸಬಲ್ಲಿರಾ? ಅಂತರರಾಷ್ಟ್ರೀಯ ಬೈಡೈರೆಕ್ಷನಲ್ ಅಲ್ಗೋರಿದಮ್ ಫಾರ್ ಲ್ಯಾಂಗ್ವೇಜ್ (ಬಿಇಎಲ್) ಕೋಡಿಂಗ್ ವಿಧಾನಗಳನ್ನು ಅಭಿವೃದ್ಧಿ ಮತ್ತು ನಿರ್ವಹಣೆ ಮಾಡುವ ಯುನಿಕೋಡ್ ಕನ್ಸೋರ್ಟಿಯಂ ಹೆಸರಿನ ಸಂಸ್ಥೆಯು 2021ರಲ್ಲಿ ಅತಿಹೆಚ್ಚು ಉಪಯೋಗಿಸಲಾದ ಇಮೋಜಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದೆ.

ಯುನಿಕೋಡ್ ಕನ್ಸೋರ್ಟಿಯಂ ಒದಗಿಸಿರುವ ಮಾಹಿತಿಯ ಪ್ರಕಾರ ಆನಂದಭಾಷ್ಪ ಸುರಿಸುತ್ತಿರುವ ಮುಖ (face with tears of joy) 2021 ರಲ್ಲಿ ಜನ ಬಳಸಿದ ಇಮೋಜಿಗಳಲ್ಲಿ ಶೇಕಡಾ 5 ರಷ್ಟು ಪಾಲು ಹೊಂದಿದೆ. ಸಂಸ್ಥೆಯ ವರದಿಯಲ್ಲಿ ಒಂದರಿಂದ ಹತ್ತನೇ ಸ್ಥಾನದವರೆಗೆ ಅತಿಹೆಚ್ಚು ಬಳಸಲಾಗಿರುವ ಇಮೋಜಿಗಳ ಪಟ್ಟಿಯಲ್ಲಿ ಹೃದಯದ ಇಮೋಜಿಗೆ ಎರಡನೇ ಸ್ಥಾನ ಸಿಕ್ಕಿದೆ. ಮೂರನೇ ಸ್ಥಾನದಲ್ಲಿ ನಗುತ್ತಾ ನೆಲದ ಮೇಲೆ ಹೊರಳಾಡುತ್ತಿರುವ ಇಮೋಜಿ ಇದೆ. ಥಂಬ್ ಅಪ್ ಮತ್ತು ಜೋರಾಗಿ ಅಳುತ್ತಿರುವ ಇಮೋಜಿಗೆ ಕ್ರಮವಾಗಿ 4 ಮತ್ತು 5 ನೇ ಸ್ಥಾನ ಸಿಕ್ಕಿವೆ.

ನಗುಮುಖ ಮತ್ತು ಚಪ್ಪಾಳೆ ಅಭಿನಂದನೆ ಮೊದಲಾದ ಇಮೋಜಿಗಳನ್ನು ಅತಿಹೆಚ್ಚು ಬಳಸಲಾಗಿದೆ. ಯುನಿಕೋಡ್ ಕನ್ಸೋರ್ಟಿಯಂ ಇಮೋಜಿಗಳ ಕೆಟೆಗಿರಿ ಸಹ ಮಾಡಿದ್ದು ಪ್ರಾಣಿ ಮತ್ತು ಪ್ತಕೃತಿ ವಿಭಾಗದಲ್ಲಿ ಬರುವ ಇಮೋಜಿಗಳನ್ನು ಅತಿಹೆಚ್ಚು ಉಪಯೋಗಿಸಲಾಗಿದೆ.

ಸಸ್ಯ ಪುಷ್ಪಗಳ ಕೆಟೆಗಿರಿಯಲ್ಲಿ ಬೋಕೆ ಮತ್ತು ಪ್ರಾಣಿಗಳ ಕೆಟೆಗಿರಿಯಲ್ಲಿ ಚಿಟ್ಟೆ (butterfly) ಅತಿಹೆಚ್ಚು ಬಳಕೆಯಾಗಿರುವ ಇಮೋಜಿಗಳಾಗಿವೆ.

ಯುನಿಕೋಡ್ ಕನ್ಸೋರ್ಟಿಯಂ ವರದಿಯ ಪ್ರಕಾರ ಬಳಕೆದಾರರಿಗೆ ಲಭ್ಯವಿರುವ 3,663 ಇಮೋಜಿಗಳ ಪೈಕಿ ಪಟ್ಟಿಯಲ್ಲಿ ಮೊದಲ 100 ಸ್ಥಾನ ಪಡೆದಿರುವವೇ ಶೇಕಡಾ 82 ರಷ್ಟು ಬಳಕೆಯಾಗಿವೆ.

TV9 Kannada


Leave a Reply

Your email address will not be published. Required fields are marked *