ಬೆಂಗಳೂರು: ರಾಮೂರ್ತಿ ನಗರ ಪೊಲೀಸರ ವಿಶೇಷ ತಂಡ ರಾಜ್ಯ ರಾಜಧಾನಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರಿಗಳ ಬೆನ್ನು ಬಿದ್ದಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ದಂಪತಿ ಹಾಗೂ ಯುವತಿಯ ಗುಪ್ತಾಂಗಕ್ಕೆ ಬಾಟ್ಲಿ ಮತ್ತು ಕಾಲು ಹಾಕಿ ವಿಕೃತಿ ಮೆರೆದಿದ್ದ ಪ್ರಮುಖ ಆರೋಪಿಗಾಗಿ ಪೊಲೀಸರು ಹಗಲು ರಾತ್ರಿ ಎನ್ನದೇ ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣ ಸಂಬಂಧ ಆರೋಪಿಗಳಾದ ಸಾಗರ್ ಸೇರಿದಂತೆ ಆರು ಮಂದಿಯನ್ನ ಬಂಧಿಸಿರೋ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆ ಬಳಿಕ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಗಳು ಕರ್ನಾಟಕ ಬಿಟ್ಟು ಚೆನ್ನೈ ಸೇರಿಕೊಂಡಿರೋ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಪೊಲೀಸರ ವಿಶೇಷ ತಂಡ ಚೆನ್ನೈನಲ್ಲಿ ಮೂರ್ನಾಲ್ಕು ದಿನದಿಂದ ತೀವ್ರ ಶೋಧ ನಡೆಸುತ್ತಿದೆ.

ಸಾಮೂಹಿಕ ಅತ್ಯಾಚಾರಕ್ಕೆ ಪ್ರಚೋದನೆ ಕೊಟ್ಟಿದ್ದ ದಂಪತಿ ಅತ್ಯಾಚಾರದ ಬಳಿಕ ಬಾಂಗ್ಲಾದೇಶ ಸೇರಿರೋ ಬಗ್ಗೆ ಕೂಡ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ. ಆದರೆ ಆರೋಪಿಗಳು ಅಕ್ರಮವಾಗಿ ಬಂದು ವಾಸ್ತವ್ಯ ಮಾಡಿದ್ದರಿಂದ ಪೊಲೀಸರಿಗೆ ಸಮರ್ಪಕವಾದ ಮಾಹಿತಿ ಲಭ್ಯವಾಗುತ್ತಿಲ್ಲ. ಅದರ ಹೊರತಾಗಿಯೂ ಪೊಲೀಸರು ಪ್ರಮುಖ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಗ್ಯಾಂಗ್ ರೇಪ್ ಪ್ರಕರಣ- ಮೂವರು ಆರೋಪಿಗಳು ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ

ಸಂತ್ರಸ್ತ ಯುವತಿ ಕೂಡ ರಾಮೂರ್ತಿ ನಗರ ಪೊಲೀಸರ ವಶದಲ್ಲಿದ್ದು, ತನಿಖೆ ಮಾಡಲಾಗುತ್ತಿದೆ. ಆರೋಪಿಗಳು ವಿಚಾರಣೆ ವೇಳೆ ಹೇಳಿರೋ ಮಾಹಿತಿ ಬಗ್ಗೆ ಸಂತ್ರಸ್ತೆಯಿಂದ ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಸಂತ್ರಸ್ತ ಯುವತಿಯ 164 ಹೇಳಿಕೆ ದಾಖಲಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡು ಕೋರ್ಟ್ ಅನುಮತಿ ಪಡೆದಿದ್ದಾರೆ.

ಕೋರ್ಟ್ ಅನುಮತಿ ನೀಡಿದ ಬಳಿಕ ಸಂತ್ರಸ್ತೆಯ 164 ಹೇಳಿಕೆ ದಾಖಲಿಸಿಕೊಳ್ಳಲಾಗುತ್ತೆ. ಉಳಿದ ಕಾಮುಕರನ್ನು ಹೆಚ್ಚಿನ ವಿಚಾರಣೆಗೆ 14 ದಿನ ಕಸ್ಟಡಿಗೆ ಪಡೆದಿದ್ದಾರೆ. ಇದನ್ನೂ ಓದಿ: ಬೆಂಗಳೂರು ಅತ್ಯಾಚಾರ ಪ್ರಕರಣ- ಕಾಮುಕರ ಕಾಲಿಗೆ ಗುಂಡು ಹೊಡೆದ ಪೊಲೀಸರು

ನಡೆದಿದ್ದೇನು..?
ಮೇ 27ರಂದು ರಾಜಧಾನಿಯಲ್ಲಿ ನಿರ್ಭಯಾ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಯುವತಿಯನ್ನು ಅತ್ಯಾಚಾರಗೈದು ಗುಪ್ತಾಂಗಕ್ಕೆ ಬಾಟ್ಲಿ ಹಾಗೂ ಕಾಲಿನ ಬೆರಳು ತುರುಕಿ ವಿಕೃತಿ ಮರೆದಿದ್ದರು. 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತ. ನಾಲ್ವರು ಕಾಮುಕರಿಗೆ ಇಬ್ಬರು ಯುವತಿಯರು ಸಾಥ್ ನೀಡಿದ್ದಾರೆ. ಸಾಗರ್, ಮೊಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹಕೀಲ್ ಬಂಧಿತ ಆರೋಪಿಗಳು. ಆರೋಪಿಗಳು ಬಾಂಗ್ಲಾ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸಂತ್ರಸ್ತೆ ಸೇರಿದಂತೆ ಆರೋಪಿಗಳು ರಾಮಮೂರ್ತಿ ನಗರದ ಎನ್.ಆರ್.ಐ ಲೇಔಟ್ ನಲ್ಲಿ ವಾಸವಾಗಿದ್ದರು. ಯುವತಿಯನ್ನು ಅತ್ಯಾಚಾರಗೈದು, ದೌರ್ಜನ್ಯ ನಡೆಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಯನ್ನು ಕಿರಾತಕರು ವೀಡಿಯೋ ಮಾಡಿದ್ದಾರೆ. ಯುವತಿಯ ಮೇಲೆ ದ್ವೇಷಕ್ಕಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿದು ಬಂದಿತ್ತು.

ಬಾಂಗ್ಲಾದೇಶ ಸೇರಿದಂತೆ ಭಾರತದ ಈಶಾನ್ಯ ರಾಜ್ಯಗಳಲ್ಲಿ ಅತ್ಯಾಚಾರದ ವೀಡಿಯೋ ವೈರಲ್ ಆಗಿತ್ತು. ಅಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಸ್ಸಾಂ ರಾಜ್ಯದ ಪೊಲೀಸರು ಈ ಕುರಿತು ತನಿಖೆ ನಡೆಸಿದ್ದರು. ವೀಡಿಯೋದಲ್ಲಿ ಬಾಂಗ್ಲಾ ಪ್ರಜೆಗಳು ಭಾಗಿಯಾಗಿದ್ದರಿಂದ ಅಲ್ಲಿನ ಪೊಲೀಸರಿಗೂ ಮಾಹಿತಿ ರವಾನಿಸಲಾಗಿತ್ತು. ಆ ಬಳಿಕ ಬಾಂಗ್ಲಾ ಪೊಲೀಸರು ಸಂತ್ರಸ್ತೆಯ ಕುಟುಂಬಸ್ಥರನ್ನ ಪತ್ತೆ ಮಾಡಿದ್ದಾರೆ. ಆ ನಂತರ ಘಟನೆ ಬೆಂಗಳೂರಿನಲ್ಲಿ ನಡೆದಿರೋ ಬಗ್ಗೆ ತಿಳಿದು ಬಂದಿತ್ತು.

The post ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಬೆನ್ನು ಬಿದ್ದ ಪೊಲೀಸರು appeared first on Public TV.

Source: publictv.in

Source link