‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ಕಿಂಚಿತ್ತೂ ಚೆನ್ನಾಗಿಲ್ಲ ಎಂದು ನೆಗೆಟಿವ್​ ಪ್ರಚಾರ; ಇದರ ಹಿಂದೆ ಯಾರ ಹುನ್ನಾರ? | One section of audience does negative publicity for Akshay Kumar starrer Samrat Prithviraj movie


‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರ ಕಿಂಚಿತ್ತೂ ಚೆನ್ನಾಗಿಲ್ಲ ಎಂದು ನೆಗೆಟಿವ್​ ಪ್ರಚಾರ; ಇದರ ಹಿಂದೆ ಯಾರ ಹುನ್ನಾರ?

ಅಕ್ಷಯ್ ಕುಮಾರ್

Samrat Prithviraj: ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರವನ್ನು ಕೆಲವರು ತೆಗಳಿದ್ದಾರೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ನೆಗೆಟಿವ್​ ವಿಮರ್ಶೆ ನೀಡಲಾಗಿದೆ ಎಂದು ಅಕ್ಷಯ್​ ಕುಮಾರ್​ ಫ್ಯಾನ್ಸ್​ ಆರೋಪಿಸುತ್ತಿದ್ದಾರೆ.

2022ನೇ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ (Samrat Prithviraj) ಚಿತ್ರ ಕೂಡ ಪ್ರಮುಖವಾದದ್ದು. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ (Akshay Kumar) ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಮೆಚ್ಚುಗೆ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ ಚಿತ್ರಕ್ಕೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿದೆ. ಆದರೆ ಈ ಸಿನಿಮಾ ಬಗ್ಗೆ ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ನೆಗೆಟಿವ್​ ಪ್ರಚಾರ ಮಾಡುತ್ತಿದ್ದಾರೆ. ಇದೆಲ್ಲವೂ ಅಕ್ಷಯ್​ ಕುಮಾರ್​ ಅವರ ವಿರೋಧಿಗಳ ಹುನ್ನಾರ ಎಂದು ಹೇಳಲಾಗುತ್ತಿದೆ. ಇಂದು (ಜೂನ್​ 3) ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಚಿತ್ರದ ಬಗ್ಗೆ ಟ್ವಿಟರ್​ನಲ್ಲಿ ಕೆಲವರು ಕೆಟ್ಟದಾಗಿ ಪೋಸ್ಟ್​ (Samrat Prithviraj Twitter Review) ಮಾಡುತ್ತಿದ್ದಾರೆ. ಬೇಕಂತಲೇ ಈ ಸಿನಿಮಾವನ್ನು ಟಾರ್ಗೆಟ್​ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಆ ರೀತಿಯಲ್ಲಿ ಅನೇಕ ಟ್ವೀಟ್​ಗಳು ವೈರಲ್​ ಆಗಿವೆ.

ಅದ್ದೂರಿ ಬಜೆಟ್​ನಲ್ಲಿ ‘ಸಾಮ್ರಾಟ್​ ಪೃಥ್ವಿರಾಜ್​’ ಸಿನಿಮಾ ಮೂಡಿಬಂದಿದೆ. ಮೇಕಿಂಗ್​ ಗುಣಮಟ್ಟದ ಬಗ್ಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ಈ ಚಿತ್ರವನ್ನು ಸಂಪೂರ್ಣವಾಗಿ ಕಳಪೆ ಎಂದು ಜರಿಯುತ್ತಿದ್ದಾರೆ. ಈ ಸಿನಿಮಾ ನೋಡಿ ತೀವ್ರ ನಿರಾಸೆ ಆಯಿತು ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ಕಳಪೆ ಚಿತ್ರಕಥೆ, ಕೆಟ್ಟ ನಿರ್ದೇಶನ, ಇದು ಅಕ್ಷಯ್​ ಕುಮಾರ್​ ಅವರ ದುರ್ಬಲ ಸಿನಿಮಾ. ಕೇವಲ ಅರ್ಧ ಸ್ಟಾರ್​ ಕೊಡಬಹುದು’ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಈ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ಕೂಡ ಹ್ಯಾಶ್​ಟ್ಯಾಗ್​ ಅಭಿಯಾನ ಮಾಡಲಾಗಿದೆ. ಉದ್ದೇಶಪೂರ್ವಕವಾಗಿಯೇ ಈ ರೀತಿ ನೆಗೆಟಿವ್​ ವಿಮರ್ಶೆ ನೀಡಲಾಗಿದೆ ಎಂದು ಅಕ್ಷಯ್​ ಕುಮಾರ್​ ಫ್ಯಾನ್ಸ್​ ಆರೋಪಿಸುತ್ತಿದ್ದಾರೆ.

ಮಾನುಷಿ ಚಿಲ್ಲರ್​ ಅವರು ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಅಕ್ಷಯ್​ ಕುಮಾರ್​ ಅವರಿಗೆ 54 ವರ್ಷ ವಯಸ್ಸು. ಮಾನುಷಿ ಚಿಲ್ಲರ್​ ಅವರಿಗೆ ಈಗಷ್ಟೇ 25ರ ಪ್ರಾಯ. ಹಾಗಾಗಿ ಇಬ್ಬರ ಜೋಡಿಯೇ ಸೂಕ್ತವಲ್ಲ ಎಂದು ಕೂಡ ಒಂದು ವರ್ಗದ ನೆಟ್ಟಿಗರು ಕಾಲೆಳೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *