ಚಿತ್ರದುರ್ಗ: ನಾನು ಇಲ್ಲಿ ಆಸ್ಪತ್ರೆ ಮಾಡೋದಿಲ್ಲ. ನನಗೆ ಅವಶ್ಯಕತೆ ಇಲ್ಲ. ‘ಸಾಯೋರು ಎಲ್ಲಾದರೂ ಸಾಯಲಿ’ ಎಂದು ಉಡಾಫೆಯ ಉತ್ತರ ನೀಡುವ ಮೂಲಕ ಹೊಳಲ್ಕೆರೆ ಬಿಜೆಪಿ ಶಾಸಕ ಹಾಗೂ ಸಾರಿಗೆ ನಿಗಮ ಅಧ್ಯಕ್ಷ ಎಂ.ಚಂದ್ರಪ್ಪ ಅವರು ಟೀಕೆಗೆ ಗುರಿಯಾಗಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಎಂ.ಚಂದ್ರಪ್ಪ, ಡಿಹೆಚ್‍ಓ ಡಾ.ಪಾಲಾಕ್ಷಗೆ ಹೇಳಿದ ವೀಡಿಯೋ ಸಂಭಾಷಣೆ ಇದಾಗಿದ್ದು, ಹೊಳಲ್ಕೆರೆ ತಾಲೂಕು ಆಸ್ಪತ್ರೆಯಲ್ಲಿ 50 ಬೆಡ್‍ನ ಕೊವಿಡ್ ವಾರ್ಡ್ ನಿರ್ಮಾಣದ ಕುರಿತಾಗಿ ಶಾಸಕರು ತಿಳಿಸಿದ್ದರು. ಆದರೆ 10 ಆಕ್ಸಿಜನ್ ಬೆಡ್ ನಿರ್ಮಾಣದ ಬಗ್ಗೆ ಶಾಸಕರಿಗೆ ಡಿಹೆಚ್‍ಓ ಮಾಹಿತಿ ನೀಡಿದ್ದರು. ಇದರಿಂದ ಕೆರಳಿದ ಚಂದ್ರಪ್ಪರವರು 50 ಆಕ್ಸಿಜನ್ ಬೆಡ್ ನಿರ್ಮಿಸಿ ಇಲ್ಲವಾದರೆ ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.

ನಾನು ಆಸ್ಪತ್ರೆ ಮಾಡೋದಿಲ್ಲ ಇಲ್ಲಿ, ನನಗೆ ಅವಶ್ಯಕತೆ ಇಲ್ಲ. ಸಾಯೋರು ಎಲ್ಲಾದರೂ ಸಾಯಲಿ ಎಂದು ಚಂದ್ರಪ್ಪ ಹೇಳಿದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

The post ‘ಸಾಯೋರು ಎಲ್ಲಾದರೂ ಸಾಯಲಿ’ – ಶಾಸಕ ಎಂ.ಚಂದ್ರಪ್ಪ appeared first on Public TV.

Source: publictv.in

Source link