ಆಸ್ಟ್ರೇಲಿಯಾದ ಲೆಜೆಂಡರಿ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಇನ್ನಿಲ್ಲ. 52 ವರ್ಷ ಶೇನ್ ವಾರ್ನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಾರ್ನ್ ಥಾಯ್ಲೆಂಡ್‌ನ ತಮ್ಮ ವಿಲ್ಲಾದಲ್ಲಿ ಇದ್ದರು. ಶನಿವಾರ ಬೆಳಿಗ್ಗೆ ತಮ್ಮ ವಿಲ್ಲಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದರೂ ಯಾವುದೇ ಪ್ರಯೋಜನ ಆಗಲಿಲ್ಲ.
ಸಾರ್ವಕಾಲಿಕ ಶ್ರೇಷ್ಠ ಲೆಗ್ ಸ್ಪಿನ್ನರ್ ಆಗಿರುವ ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಸಾಯೋ ಮುನ್ನ ಇಂದು ಬೆಳಗ್ಗೆ ಆಸೀಸ್ ದಿಗ್ಗಜ ಕ್ರಿಕೆಟಿಗ ರೋಡ್ ಮಾರ್ಶ್ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ರೊಡ್ ಮಾರ್ಶ್ ಇಂದು ನಿಧನರಾಗಿದ್ದರು. 74 ವರ್ಷದ ರೊಡ್ ಮಾರ್ಶ್ ಅಗಲಿಕೆಗೆ ಸಂತಾಪ ಸೂಚಿಸಿ ಶೇನ್ ವಾರ್ನ್ ಕೊನೆಯ ಟ್ವೀಟ್ ಮಾಡಿದ್ದರು.
ರೊಡ್ ಮಾರ್ಶ್ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ರೊಡ್ ಮಾರ್ಶ್ ಯುವ ಕ್ರಿಕೆಟಿಗರಿಗೆ ಸ್ಪೂರ್ತಿ. ಇವರ ಕೊಡುಗೆ ಕ್ರೀಡಾ ಲೋಕಕ್ಕೆ ಅಪಾರ. ರೊಡ್ ಮಾರ್ಶ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಶೇನ್ ವಾರ್ನ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.