ಬೆಂಗಳೂರು: ಸಾರಿಗೆ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ದ ಸಾರಿಗೆ ನೌಕರರು ತಿರುಗಿ ಬಿದ್ದಿದ್ದಾರೆ. ನಮ್ಮ ಮುಷ್ಕರ ವಿಫಲವಾಗಲು ಕೋಡಿಹಳ್ಳಿ ಚಂದ್ರಶೇಖರ ಅವರೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

ಮುಷ್ಕರದಿಂದ‌ ಕೆಲಸ ಕಳೆದುಕೊಂಡವರು ಹಾಗೂ ನೌಕರರ ಒಕ್ಕೂಟದ ಒಡಕಿನ ವಿಚಾರವಾಗಿ ಕೋಡಿಹಳ್ಳಿ ಒಕ್ಕೂಟದಿಂದ ಹೊರ ಬಂದಿರುವ ನಾಲ್ಕು ನಿಗಮದ ನೌಕರರು ಸುದ್ದಿಗೋಷ್ಟಿ ನಡೆಸಿದ್ದು ಒಕ್ಕೂಟದ ಅಧ್ಯಕ್ಷ ಚಂದ್ರು ಮತ್ತು ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ಏಕಪಕ್ಷೀಯ ನಿರ್ಧಾರಗಳಿಂದಲೇ ಎರಡು ಸಾರಿಗೆ ಮುಷ್ಕರಗಳು ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಸಾರಿಗೆ ನೌಕರರಿಗೆ ಗುಡ್​ನ್ಯೂಸ್; ಜೂನ್​ ತಿಂಗಳ ವೇತನಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆ

ಇನ್ನು ಕೋಡಿಹಳ್ಳಿಯ ವಿರುದ್ಧ ನೌಕರರು ಆರೋಪ ಮುಂದುವರೆಸಿದ್ದು ನಮ್ಮನ್ನೆಲ್ಲ ಬೆದರಿಸಿ ಮುಷ್ಕರಕ್ಕೆ ಭಾಗಿಯಾಗುವಂತೆ ಹೇಳ್ತಿದ್ರು ಅಂತ ಗಂಭೀರ ಆರೋಪ ಮಾಡಿದ್ದಾರೆ. ಸಚಿವರ ಜೊತೆ ಅಧಿಕಾರಿಗಳ ಜೊತೆ ಮಾತಾನಾಡೋಣ ಎಂದಾಗ ಪ್ರತಿಸಲ ನಿರಾಕರಿಸ್ತಿದ್ದರು ಎಂದಿದ್ದಾರೆ.

ಇದನ್ನೂ ಓದಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ದೂರು ನೀಡಿದ ಬಿಡಿಎ ಎಂಜಿನಿಯರ್: ಏನಿದು ಪ್ರಕರಣ..?

15 ದಿನಗಳ ಕಾಲ ಮುಷ್ಕರ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ, ಮುಷ್ಕರದ ಸಂದರ್ಭದಲ್ಲಿ ಸಾವಿರಾರು ನೌಕರರು ಕೆಲಸ ಕಳೆದುಕೊಂಡಿದ್ದಾರೆ. ಕೊನೆತನಕ ಕೋಡಿಹಳ್ಳಿಯವರು ಯಾವುದೇ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಹೀಗಾಗಿ ನಾವು ಸಾರಿಗೆ ನೌಕರರ ಒಕ್ಕೂಟದಿಂದ ಆಚೆ ಬಂದು ಮತ್ತೊಂದು ಒಕ್ಕೂಟ ರಚನೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

ಸದ್ಯ ನಾವು ಸಾರಿಗೆ ಸಚಿವ ಲಕ್ಷಣ್ ಸವದಿಯನ್ನ ಭೇಟಿ ಮಾಡಿದ್ದು ಕೆಲಸ ಕಳೆದುಕೊಂಡವರನ್ನ ಪುನಃ ನೇಮಕ ಮಾಡುವಂತೆ ಮನವಿ ಮಾಡಿದ್ದೇವೆ. ಸಮಾನ ವೇತನ ಹಾಗೂ ಕೆಲಸ ಕಳೆದುಕೊಂಡವರನ್ನ ಮತ್ತೆ ನೇಮಕ ಮಾಡುವಂತೆ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೋಡಿಹಳ್ಳಿ ವಿರುದ್ಧ ತಿರುಗಿಬಿದ್ದ ನೌಕರರು; ಸಾರಿಗೆ ಸಿಬ್ಬಂದಿಯಿಂದ ರಾಜೀನಾಮೆ ಪರ್ವ

ನಮ್ಮ ಬೇಡಿಕೆಯನ್ನು ಸರ್ಕಾರ ಇಡೇರಿಸುವ ಭರವಸೆ ಇದ್ದು ಇನ್ನು ಮುಂದೆ ಕೋಡಿಹಳ್ಳಿ ಌಂಡ್​ ಟೀಂ ಮುಷ್ಕರ ಮಾಡಿದ್ರೆ ನಾವು ಬೆಂಬಲ ನೀಡುವುದಿಲ್ಲ ಎಂದು ನೌಕರ ಆನಂದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

The post ‘ಸಾರಿಗೆ ಮುಷ್ಕರ ವಿಫಲವಾಗೋಕೆ ಕೋಡಿಹಳ್ಳಿಯೇ ಕಾರಣ’.. ತಿರುಗಿಬಿದ್ದ ನೌಕರರ ಕ್ಷೇಮಾಭಿವೃದ್ಧಿ ಸಂಘ appeared first on News First Kannada.

Source: newsfirstlive.com

Source link