– ರಸ್ತೆಯಲ್ಲೇ ಪೊಲೀಸರ ಜೊತೆ ಸೇರಿ ಟೆಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕಟ್ಟಿಹಾಕಲು ಬಿಬಿಎಂಪಿ ನಯಾ ಅಸ್ತ್ರವೊಂದನ್ನು ಹೂಡಿದೆ. ಈ ಮೂಲಕ ಲಾಕ್‍ಡೌನ್ ಉಲ್ಲಂಘಿಸುವವರಿಗೆ ಬಿಬಿಎಂಪಿ ಶಾಕ್ ನೀಡಿದೆ.

ಐಡಿ ಚೆಕ್ ಮಾಡುವುದರ ಜೊತೆಗೆ ಈಗ ಕೊರೊನಾ ರಿಪೋರ್ಟ್ ಕೂಡ ಚೆಕ್ ಮಾಡುತ್ತಾರೆ. ಖಾಕಿ ಟೀಂ ಜೊತೆಗೆ ರೋಡ್ ನಲ್ಲಿ ಈಗ ಕೊವಿಡ್ ಟೆಸ್ಟಿಂಗ್ ಟೀಮ್ ಆಗಿದೆ. ಹೀಗಾಗಿ ಇನ್ನು ಮುಂದೆ ಲಾಕ್ ಡೌನ್ ಟೈಂನಲ್ಲಿ ರಸ್ತೆಯಲ್ಲಿ ಅಡ್ಡಾಡಿದ್ರೆ ಟೆಸ್ಟ್ ಮಾಡಲಾಗುತ್ತದೆ.

ಬೆಂಗಳೂರಿನ ಕೆಲವೆಡೆ ರೋಡ್ ಸಿಗ್ನಲ್‍ನಲ್ಲಿ ಪಿಪಿಇ ಕಿಟ್ ಹಾಕಿಕೊಂಡು ಬಿಬಿಎಂಪಿ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡುತ್ತಾರೆ. ರಸ್ತೆಯಲ್ಲಿ ಹೋಗುವ ವಾಹನ ಸವಾರರನ್ನು ಅಡ್ಡ ಹಾಕಿ ಕೊರೊನಾ ಟೆಸ್ಟ್ ಮಾಡಲಾಗುತ್ತದೆ.

ಮೂರು ತಿಂಗಳ ಹಳೆಯ ಕೊರೊನಾ ರಿಪೋರ್ಟ್ ಇದ್ದರೆ ಮತ್ತೆ ರೀ ಟೆಸ್ಟ್ ಮಾಡಿಸಿಕೊಳ್ಳಬೇಕು. ಮೂರು ತಿಂಗಳ ಒಳಗಿನ ಕೊರೋನಾ ಟೆಸ್ಟಿಂಗ್ ರಿಪೋರ್ಟ್ ಇದ್ದರೆ ಅವರಿಗೆ ಹೋಗೋದಕ್ಕೆ ಅವಕಾಶವಿದೆ. ಇಲ್ಲದೇ ಇದ್ದರೆ ವಾಹನ ಸೈಡ್ ಗೆ ಹಾಕಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸದ್ಯ ಚಾಮರಾಜಪೇಟೆ ರಸ್ತೆಯಲ್ಲಿ ಟೆಸ್ಟಿಂಗ್ ಟೀಮ್ ಭರ್ಜರಿ ಟೆಸ್ಟಿಂಗ್ ಕಾರ್ಯಾಚರಣೆ ನಡೆಸುತ್ತಿದೆ.

The post ಸಾರ್ವಜನಿಕವಾಗಿ ಕೋವಿಡ್ ಟೆಸ್ಟ್‌ಗೆ ಮುಂದಾದ ಪಾಲಿಕೆ appeared first on Public TV.

Source: publictv.in

Source link