ಸಾಲುಸಾಲು ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚಿಸಲು ದೆಹಲಿಗೆ ಹೋಗುತ್ತಾರಂತೆ ಮಮತಾ ಬ್ಯಾನರ್ಜಿ | I will meet Prime Minister Narendra Modi in Delhi Says Mamata Banerjee

ಸಾಲುಸಾಲು ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಜತೆ ಚರ್ಚಿಸಲು ದೆಹಲಿಗೆ ಹೋಗುತ್ತಾರಂತೆ ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ತಾವು ದೆಹಲಿಗೆ ತೆರಳುತ್ತಿದ್ದು, ಅಲ್ಲಿ ಪ್ರಧಾನಮಂತ್ರಿಯವರನ್ನು ಭೇಟಿಯಾಗುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಪ್ರಧಾನಿ ಮೋದಿ ಭೇಟಿಯ ವೇಳೆ ಬಿಎಸ್​ಎಫ್ (ಗಡಿ ಭದ್ರತಾ ಪಡೆ) ಕಾರ್ಯವ್ಯಾಪ್ತಿಯ ವಿಸ್ತರಣೆ ಮಾಡಿದ್ದರ ಬಗ್ಗೆಯೂ ವಿಷಯ ಪ್ರಸ್ತಾಪ ಮಾಡುತ್ತೇನೆ. ಹಾಗೇ, ತ್ರಿಪುರಾದ ಹಿಂಸಾಚಾರದ ಕುರಿತಾಗಿಯೂ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.  

ಅಸ್ಸಾಂ, ಪಂಜಾಬ್​ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ, ಬಿಎಸ್​ಎಫ್​ ಕಾರ್ಯವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಗಡಿಯಿಂದ 50 ಕಿಮೀವರೆಗೆ ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಆದರೆ ಇದು ಸ್ಥಳೀಯ ಪೊಲೀಸರಿಗೆ ಅವಮಾನ ಮಾಡಿದಂತೆ ಎಂದು ಆರೋಪಿಸಿ ಪಂಜಾಬ್​ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಈ ಆದೇಶದ ವಿರುದ್ಧವೇ ನಿರ್ಣಯ ಅಂಗೀಕಾರವಾಗಿದೆ.

ತ್ರಿಪುರಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು ಅಮಿತ್​ ಶಾ ವಿರುದ್ಧ ಕಿಡಿ ಕಾರಿದ್ದಾರೆ. ಈ ಹಿಂಸಾಚಾರದಲ್ಲಿ ಸಂತ್ರಸ್ತರಾದ ಟಿಎಂಸಿ ಸಂಸದರನ್ನು ಭೇಟಿ ಮಾಡುವ ಸೌಜನ್ಯವನ್ನು ಗೃಹ ಸಚಿವ ಅಮಿತ್​ ಶಾ ಇದುವರೆಗೆ ತೋರಿಸಿಲ್ಲ ಎಂದು ಹೇಳಿದ್ದಾರೆ.  ನಾನು ದೆಹಲಿಗೆ ಹೋದ ಸಂದರ್ಭದಲ್ಲಿ ನಮ್ಮ ರಾಜ್ಯದ ಸಮಸ್ಯೆಗಳನ್ನು ಮಾತನಾಡುವ ಜತೆ, ತ್ರಿಪುರಾ ಹಿಂಸಾಚಾರದ ಬಗ್ಗೆಯೂ ಮಾತನಾಡುತ್ತೇನೆ ಎಂದು ಹೇಳಿದ ಅವರು, ತ್ರಿಪುರದಲ್ಲಿ ಮುಖ್ಯಮಂತ್ರಿ ಬಿಪ್ಲಬ್​ ದೇಬ್​ ಸರ್ಕಾರ  ಸುಪ್ರೀಂಕೋರ್ಟ್​ ನಿರ್ದೇಶನವನ್ನೂ ಪಾಲಿಸುತ್ತಿಲ್ಲ. ಅವರು ಸಾಮಾನ್ಯ ಜನರಿಗೆ ಉತ್ತರಿಸಬೇಕು. ಇಂಥ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಾನು ಸರ್ವೋಚ್ಛ ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಘೋಷಣೆ ಆಯ್ತು ನಿಖಿಲ್​ ಕುಮಾರ್​ ಸಿನಿಮಾ ರಿಲೀಸ್​ ದಿನಾಂಕ; ಡಿಸೆಂಬರ್​ನಲ್ಲಿ ಬರಲಿದ್ದಾನೆ ‘ರೈಡರ್’

TV9 Kannada

Leave a comment

Your email address will not be published. Required fields are marked *