ಸಾಲು ಸಾಲು ಅಡ್ಡಿ ಹಿನ್ನೆಲೆ ಮೇಕೆದಾಟು ಪಾದಯಾತ್ರೆ ‘ಕೈ’ ಬಿಡುತ್ತಾ ‘ಕೈ’ ಪಾಳಯ?


ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಮಾಡುವುದಾಗಿ ಘೋಷಿಸಿದ್ದ ಕಾಂಗ್ರೆಸ್​ಗೆ ವಿಘ್ನ ಎದುರಾಗಿದೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಡಿಸೆಂಬರ್ ಮೊದಲ ವಾರದಲ್ಲೇ ಮೇಕೆದಾಟು ಪಾದಯಾತ್ರೆ ನಡೆಸೋದಾಗಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾದಯಾತ್ರೆ ಘೋಷಣೆ ಬಳಿಕ ಕೈ ನಾಯಕರಿಗೆ ಸಾಲು ಸಾಲು ಅಡ್ಡಿಗಳು ಎದುರಾಗುತ್ತಿರುವ ಹಿನ್ನಲೆ ಪಾದಾಯಾತ್ರೆಯನ್ನು ಮುಂದೂಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿವೆ.

‘ಕೈ’ ಪಾದಯಾತ್ರೆಗೆ ಎದುರಾದ ಅಡ್ಡಿಗಳೇನು.?
ಡಿಸೆಂಬರ್ ಮೊದಲ ವಾರ‌ ಅಥವಾ ಎರಡನೇ ವಾರದಲ್ಲಿ ಪಾದಯಾತ್ರೆ ನಡೆಸಲು ಉದ್ದೇಶಿಸಿದ್ದ ಕಾಂಗ್ರೆಸ್​​ಗೆ ರಾಜ್ಯದಲ್ಲು ಘೋಷಣೆಯಾಗಿರುವ ವಿಧಾನ ಪರಿಷತ್​ ಚುನಾವಣೆ ಮೊದಲನೆ ಅಡ್ಡಿಯಾಗಿ ಪರಿಣಮಿಸಿದೆ ಎನ್ನಲಾಗಿದೆ. ಹೌದು 25 ವಿಧಾನ ಪರಿಷತ್​ ಸ್ಥಾನಗಳಿಗೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ಉಭಯ ನಾಯಕರನ್ನು ಚುನಾವಣೆಯ ಕಾರ್ಯತಂತ್ರಗಳಲ್ಲಿ ಬ್ಯೂಸಿಯಾಗುವಂತೆ ಮಾಡಿದೆ.

ಇದನ್ನೂ ಓದಿ:ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ; ಕಾಂಗ್ರೆಸ್​ ಒತ್ತಡ ಹೇರುವ ತಂತ್ರ ಅನುಸರಿಸ್ತಿದೆ -ಬೊಮ್ಮಾಯಿ ಕಿಡಿ

ವಿಧಾನಮಂಡಲದ ಚಳಿಗಾಲ ಅಧಿವೇಶನ ಕೂಡ ಇನ್ನೇನು ಆರಂಭವಾಗಲಿದ್ದು ಬೊಮ್ಮಾಯಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಕೈ ಪಡೆ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಇವೆರಡನ್ನೂ ಕಾಂಗ್ರೆಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು ಅನಿವಾರ್ಯವಾಗಿ ಮೇಕೆದಾಟು ಪಾದಯಾತ್ರೆ ಮುಂದೂಡಲೇಬೇಕಾದ ಪರಿಸ್ಥಿತಿ ಬಂದೊದಗಿದೆ. ಸದ್ಯ ಈ ಸವಾಲುಗಳಿಂದ ಕೈ ಪಾಳಯ ಪಾದಯಾತ್ರೆಯಿಂದ ಹಿಂದೆ ಸರಿಯುತ್ತಾ ಕಾದು ನೋಡಬೇಕಾಗಿದೆ.

ಇದನ್ನೂ ಓದಿ:ಮೇಕೆದಾಟು ಪಾದಯಾತ್ರೆಗೆ ಕೈ ಪಾಳಯ ರೆಡಿ; ದಳಪತಿಗಳಿಗೆ ಆತಂಕ

ಇದನ್ನೂ ಓದಿ:ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್‌ ಪಾದಯಾತ್ರೆ.. ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯಲು ‘ಕೈ’ ಪ್ಲಾನ್

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

News First Live Kannada


Leave a Reply

Your email address will not be published. Required fields are marked *