ನಮ್ಮ ಸ್ಯಾಂಡಲ್​ವುಡ್​ನ ನಟಿಮಣಿಯರು ಅಕ್ಕ ಪಕ್ಕದ ಸಿನಿರಂಗ  ಹಾಗೂ ನಮ್ಮ ಚೆಂದದ ಚಂದನವನ ಎರಡೂ ಕಡೆ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ನಮ್ಮ ನಟಿಯರ ಅಕೌಂಟ್​​​ನಲ್ಲಿವೆ. ಈ ವರ್ಷ, ಮುಂದಿನ ವರ್ಷ ಬೆಳ್ಳಿತೆರೆಯಲ್ಲಿ ನಮ್ಮೂರ ನಯನ ಮನೋಹರಿಗಳದ್ದೇ ದರ್ಬಾರು, ಕಲರ್​​​​​​ಫುಲ್​​ ಕಾರುಬಾರು. ಹಾಗಾದ್ರೆ ನಮ್ಮ ನೆಲದ ನಟಿಯರಲ್ಲಿ ಈ ವರ್ಷ ಯಾರು ಸಖತ್​​ ಬ್ಯುಸಿ, ಯಾರು ಸಖತ್​​ ಚ್ಯೂಸಿ ಅನ್ನೋ ಗುಟ್ಟನ್ನ ಹೇಳ್ತಿವಿ ಕೇಳಿ.

ರಚಿತಾ ರಾಮ್​, ಅದಿತಿ ಪ್ರಭುದೇವ, ಹರಿಪ್ರಿಯಾ, ಸೋನಲ್​ ಮೋತೆರೋ , ನಿಶ್ವಿಕಾ ನಾಯ್ಡು, ಆಶಿಕಾ ರಂಗನಾಥ್​, ಸಂಜನಾ ಆನಂದ್​ ಮುಂತಾದ ನಟಿಮಣಿಯರು ನಯನ ಮನೋಹರವಾಗಿ ಈ ವರ್ಷ ತಪ್ಪಿದ್ರೆ ಮುಂದಿನ ವರ್ಷ ಪ್ರೇಕ್ಷಕರನ್ನ ರಂಜಿಸೋದು ಪಕ್ಕಾ ಆಗಿದೆ. ಹೇಗೆ ಪಕ್ಕಾ ಅನ್ನೋದಕ್ಕೆ ನಮ್ಮಲಿದೆ ಒಂದು ಲೆಕ್ಕ.

ಬುಲ್​ ಬುಲ್​ ಬೆಡಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಈ ವರ್ಷ ಸೇರಿ ಮುಂದಿನ ವರ್ಷಕ್ಕೆ ಆಗೋವಷ್ಟು ಬ್ಯುಸಿಯಾಗಿದ್ದಾರೆ. ಚಮಕ್​ ಚಾಕ್ಲೆಟ್​ ದಿಲ್ಕಿ ಲಡ್ಕಿಯಾಗಿ ಗ್ಲಾಮರಸ್​ ಪಾತ್ರಗಳನ್ನ ಮಾಡಿ ಸೈ ಎನ್ನಿಸಿಕೊಂಡು ಬಂದಿರೋ ಬಂಗಾರದ ಬೊಂಬೆ ರಚ್ಚು ಕೈಯಲ್ಲಿ ಒಂದು ತೆಲುಗು ಸಿನಿಮಾ ಸೇರಿ ಒಟ್ಟು 14 ಚಿತ್ರಗಳಿವೆ. ಈ 14ರಲ್ಲಿ ಏಕ್​ ಲವ್​ ಯಾ, ರಚ್ಚು ಐ ಲವ್​ ಯೂ, ವೀರಂ, ಮ್ಯಾಟ್ನಿ, ಲಿಲ್ಲಿ, ಡಾಲಿ, ಸೂರಿ ಬ್ಯಾಡ್​ ಮ್ಯಾನರ್ಸ್​, 100 ಹಾಗೂ ಶಬರಿ ಸರ್ಚಿಂಗ್​ ಫಾರ್​ ರಾವಣ ಸಿನಿಮಾಗಳು ಪ್ರಮುಖವಾದವು.

ರಚಿತಾ ರಾಮ್​ ಬಿಟ್ರೆ ಸ್ಯಾಂಡಲ್​​ವುಡ್​​ನಲ್ಲಿ ಸಖತ್​ ಬ್ಯುಸಿಯಿರೋ ಅಭಿನೇತ್ರಿ ಅದಿತಿ ಪ್ರಭುದೇವ.
ಶ್ಯಾನೇ ಟಾಪ್​ಗಿರೋ ಅಂದದ ಅದಿತಿ ಸಿನಿ ಅಕೌಂಟ್​​ನಲ್ಲಿ ಬರೋಬ್ಬರಿ 12 ಸಿನಿಮಾಗಳಿವೆಯಂತೆ. ದಿಲ್​ ಮಾರ್​, ತೋತಾಪುರಿ, ಗಜಾನನ ಗ್ಯಾಂಗ್​, ಆನಾ, ಒಂಭತ್ತನೇ ದಿಕ್ಕು, ಓಲ್ಡ್​ ಮಂಕ್​ ಸೇರಿದಂತೆ ಅನೇಕ ಚಿತ್ರಗಳು ಅದಿತಿ ಅಂಗಳದಲ್ಲಿವೆ.

ನೀರ್​ ದೋಸೆ ಬೆಡಗಿ ಬೆಲ್​ಬಾಟಂ ಬ್ಯೂಟಿ ಹರಿಪ್ರಿಯಾ ಕೈಯಲ್ಲು ಸಾಕಷ್ಟು ನಿರೀಕ್ಷಿತ ಚಿತ್ರಗಳಿವೆ. ಈ ವರ್ಷ ಒಟ್ಟು 8 ಸಿನಿಮಾಗಳಲ್ಲಿ ಹರಿಪ್ರಿಯಾ ಕಂಗೊಳಿಸಲಿದ್ದಾರೆ. ಪೆಟ್ರೋಮ್ಯಾಕ್ಸ್​, ಅಮೃತ ಮತಿ, ತಾಯಿ ಕಸ್ತೂರ್​ ಬಾ , ಬೆಲ್​​​ಬಾಟಂ 2 , ಲಗಾಮ್​ ಮುಂತಾದ ಸಿನಿಮಾಗಳಲ್ಲಿ ಹರಿಪ್ರಿಯಾ ಮಿಂಚಲಿದ್ದಾರೆ.

ಕ್ಯಾಮಿಸ್ಟ್ರಿ ಆಫ್​ ಕರಿಯಪ್ಪ ಸಿನಿಮಾದ ಮೂಲಕ ಕನ್ನಡ ಚಿತ್ರಜಗತ್ತಿಗೆ ಚಿರಪರಿಚಿತವಾದ ಮುದ್ದು ಮೋಹನಾಂಗಿ ಸಂಜನಾ ಆನಂದ್​ ಕೈಯಲ್ಲಿದ್ಯಂತೆ 5 ಸಿನಿಮಾಗಳು. ಮೊದಲ ಸಿನಿಮಾದಲ್ಲೇ ಇಂಪ್ರೇಸಿವ್​ ಪರ್ಫಾರ್ಮೆನ್ಸ್ ತೋರಿಸಿರುವ ಸಂಜನಾ ಸಲಗ, ಕ್ಷತ್ರಿಯಾ, ಅದ್ದೂರಿ ಲವರ್​, ವಿಂಡೋ ಸೀಟ್​ ಸಿನಿಮಾಗಳಲ್ಲಿ ಮಿನುಗಿದ್ದಾರೆ.

ದಿಯಾ ಸಿನಿಮಾದ ನಾಯಕಿ ಖುಷಿ, ರಾಬರ್ಟ್​ ಸಿನಿಮಾದಲ್ಲಿ ಎರಡನೇ ಹೀರೋಯಿನ್​ ಆಗಿ ಮಿಂಚಿರುವ ಸೋನಲ್​ ಮೊಂತೆರೋ, ಕಿಸ್​ ಕುವರಿ ಶ್ರೀಲೀಲಾ, ಜಂಟಲ್​​ಮನ್​ ಸುಂದ್ರಿ ನಿಶ್ವಿಕಾ ನಾಯ್ಡು, ಚುಟು ಚುಟು ಬೆಡಗಿ ಆಶಿಕಾ ರಂಗನಾಥ್​ ಹೀಗೆ ನಮ್ಮ ಕನ್ನಡದ ಚೆಲುವೆಯರು ಈಗ ಸ್ಯಾಂಡಲ್​ವುಡ್​​ನಲ್ಲಿ ಸಖತ್​ ಬ್ಯುಸಿಯೋ ಬ್ಯುಸಿ.

ಕನ್ನಡದ ನಟಿಯರಿಗೆ ಡಿಮ್ಯಾಂಡ್​​ ಹೆಚ್ಚಾಗಿರೋದು​​ ಖುಷಿಯ ವಿಚಾರ. ಹೀಗೇ ನಮ್ಮ ಕನ್ನಡದ ಹುಡುಗಿಯರು ಚಿತ್ರರಂಗದಲ್ಲಿ ಇನಷ್ಟು ಮಿಂಚಿ ಮಿನುಗುತ್ತಿರಲಿ, ಹೆಚ್ಚಿನ ಅವಕಾಶಗಳು ಕನ್ನಡತಿಯರಿಗೆ ಸಿಗ್ಲಿ ಅನ್ನೋದು ನಮ್ಮ ಆಶಯ.

The post ಸಾಲು ಸಾಲು ಸಿನಿಮಾಗಳಲ್ಲಿ ಕನ್ನಡದ ನಟಿಯರು ಫುಲ್ ಬ್ಯುಸಿ: ಯಾರ​ ಕೈಯಲ್ಲಿ ಎಷ್ಟೆಷ್ಟು ಚಿತ್ರಗಳಿವೆ ಗೊತ್ತಾ..? appeared first on News First Kannada.

Source: News First Kannada
Read More