ಸಾವಿಗಿಂತ ಒಂದು ದಿನ ಮೊದಲು ಜೋಗಿ ಪ್ರೇಮ್​​ಗೆ ಅಪ್ಪು ಕಾಲ್; ಅವರ ಆಸೆ ಏನಾಗಿತ್ತು ಗೊತ್ತಾ?


ಬೆಂಗಳೂರು: ಪುನೀತ್​ ರಾಜ್​ಕುಮಾತ್​ ಅವರು ನನ್ನ ನಿರ್ದೇಶನದ ಐತಿಹಾಸಿಕ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದರು ಎಂದು ನಿರ್ದೇಶಕ ಜೋಗಿ ಪ್ರೇಮ್​ ಹೇಳಿದ್ದಾರೆ.

ಈ ಕುರಿತು ನ್ಯೂಸ್​ಫಸ್ಟ್​​ನ ಜೊತೆ ಮಾತನಾಡಿದ ಪ್ರೇಮ್​ ಸೆಪ್ಟೆಂಬರ್​ 28 ರಂದು ಕಾಲ್​ ಮಾಡಿ ನಿಮ್ಮ ನಿರ್ದೇಶನದ ಐತಿಹಾಸಿಕ ಚಿತ್ರದಲ್ಲಿ ನಟಿಸೋದಾಗಿ ಹೇಳಿದ್ದರು. ಜೊತೆಗೆ ಅವರು ಈ ವಿಚಾರವನ್ನು ಪತ್ನಿ ಅಶ್ವಿನಿಗೂ ಕೂಡ ಹೇಳಿದ್ದರು ಎಂದಿದ್ದಾರೆ.

ಇನ್ನು ಪುನೀತ್​ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದು ಸಾಕಷ್ಟು ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಆದರೆ ಅವರು ಇದುವರೆಗೂ ಐತಿಹಾಸಿಕ ಚಿತ್ರದಲ್ಲಿ ನಟಿಸಿರಲಿಲ್ಲ. ಅದಕ್ಕಾಗಿ ಪ್ರೇಮ್​ ಈ ಕುರಿತು ಅವರ ಜೊತೆ ಮಾತನಾಡಿದಾಗ ಮಾಡಿ ನಾನು ಆ ಪಾತ್ರಕ್ಕೆ ಬಣ್ಣ ಹಚ್ಚುತ್ತೇನೆ ಎಂದು ಅವರು ಹೇಳಿದ್ದರು ಎಂದು ಪ್ರೇಮ್​​ ನೆನೆಸಿಕೊಂಡಿದ್ದಾರೆ.

ಮರೆಯಾದ ಯುವರತ್ನ : ಅಪ್ಪುಗೆ ನ್ಯೂಸ್​ಫಸ್ಟ್​ ಗೀತ ನಮನ

https://www.youtube.com/watch?v=4bxvqcmZw4o

News First Live Kannada


Leave a Reply

Your email address will not be published. Required fields are marked *