ದೇಶದಲ್ಲಿ ಇದೀಗ ಕೊರೊನಾ ಸೋಂಕು, ಸಾವಿನದ್ದೇ ಲೆಕ್ಕ ಹಾಕುವ ಪರಿಸ್ಥಿತಿ. ಲಕ್ಷ ಲಕ್ಷ ಮಂದಿಗೆ ಸೋಂಕು. ಸಾವಿರಗಟ್ಟಲೇ ಜನರ ಸಾವು. ದೇಶದಲ್ಲಿ ತೀರಾ ಬೇಸರವೆನಿಸುವಂತಹ ಘಟನೆಗಳು ನಡೆಯುತ್ತಿದೆ.

ಕಿರುತೆರೆ ನಟ, ಯೂಟ್ಯೂಬರ್ ರಾಹುಲ್ ವೋರಾ ಸಾವು ಇವತ್ತು ದೇಶಾದ್ಯಂತ ಚರ್ಚೆಗಿಡಾಗಿದೆ. ಸಾವಿಗೂ ಮುನ್ನ ಅವರು ಹರಿಬಿಟ್ಟ ವಿಡಿಯೋ ಕಣ್ಣೀರು ತರಿಸುತ್ತಿದೆ. ಪ್ರಾಣವಾಯು ಆಕ್ಸಿಜನ್ ಇಲ್ಲದೆ ಇವರು ಸಾವಿಗೆ ಮುನ್ನ ಆಡಿರುವ ಮಾತುಗಳು ಕರುಳು ಹಿಂಡುವಂತಿದೆ.

30ರ ನಂತರ ವ್ಯಕ್ತಿಯ ಜೀವನ ಬದಲಾಗುತ್ತೆ, ಲಕ್ ಚೇಂಜ್ ಆಗಿ ಜೀವನ ಟ್ರ್ಯಾಕ್​ಗೆ ಬರುತ್ತೆ ಅಂತಾರೆ. ಆದ್ರೆ ಈ ಕೊರೊನಾ 28ರಿಂದ 30ರ ಮೇಲಿನ ಯುವಕರ ಮೇಲೂ ಗುರಿ ಇಡ್ತಾ ಇದೆ. ರಾಹುಲ್ ವೋರಾ 35 ವರ್ಷದ ಕಲಾವಿದ. ತನ್ನೊಳಗಿನ ಕಲಾವಿದನನ್ನು ಪೋಷಿಸಿಕೊಳ್ಳುತ್ತಾ ತನಗೆ ತಾನೇ ಬದುಕು ಕಟ್ಟಿಕೊಂಡವರು ಈ ರಾಹುಲ್.

ಉತ್ತಾರಾಖಂಡ್​​​ನಿಂದ ಅಭಿನಯದ ಹಸಿವು ಇಟ್ಕೊಂಡು ಬಣ್ಣದ ಬದುಕಿನ ಕನಸು ಕಟ್ಕೊಂಡು ಥಿಯೇಟರ್, ಸ್ಟೇಜ್ ಆ್ಯಂಕರಿಂಗ್​​ಗಳನ್ನ ಮಾಡ್ಕೊಂಡು ಅಲ್ಲೊಂದು ಇಲ್ಲೊಂದು ಆ್ಯಡ್ ಶೂಟ್, ಶಾರ್ಟ್ ಮೂವಿ, ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡ್ಕೊಂಡು ಬದುಕು ಕಟ್ಟಿಕೊಂಡವರು ರಾಹುಲ್ ವೋರಾ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪುಟ್ಟ ಸಂಸಾರದೊಂದಿಗೆ ಜೀವನ ಮಾಡ್ತಿದ್ದ ರಾಹುಲ್​ಗೆ ಕೊರೊನಾ ಶತ್ರುವಾಗಿ ಜೀವ ಭಕ್ಷಕನಾಗಿ ಎದುರಾಯಿತು. ಕಳೆದ ವಾರ ಕೊರೊನಾ ಪಾಸಿಟಿವ್ ಆಗಿದ್ದ ರಾಹುಲ್ ವೋರಾ ಉಸಿರಾಟದ ಸಮಸ್ಯೆ ಹೆಚ್ಚಾಗಿ ದೆಹಲಿಯ ರಾಜೀವ್ ಗಾಂಧಿ ಆಸ್ಪೆತ್ರೆಗೆ ದಾಖಲಾದ್ರು. ಕಳೆದ ಭಾನುವಾರ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದರು. ಸಾಯೋಕೆ ಕೆಲವು ಗಂಟೆಗಲ ಮುನ್ನ ಸ್ವತಃ ರಾಹುಲ್ ವೋರಾ ಅವರೇ ಆಡಿದ ಮಾತುಗಳು ಹೃದಯಹಿಂಡುವಂತದ್ದು

ತಮ್ಮ ಯೂಟ್ಯೂಬ್​​ ಚಾನೆಲ್​ನಿಂದ ಒಳ್ಳೆ ಫ್ಯಾನ್ ಫಾಲೋವರ್ಸ್​​ ಪಡೆದು, ಭರವಸೆಯ ನಟನಾಗಿದ್ದವರು ರಾಹುಲ್. ಕಳೆದ ಭಾನುವಾರ ಸಾವನ್ನಪ್ಪಿದ ಯೂಟ್ಯೂಬರ್ ರಾಹುಲ್ ವೋರಾ ಮೇ 8ನೇ ತಾರೀಖು ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ರು. ಇಲ್ಲಿ ಸರಿಯಾಗಿ ಚಿಕಿತ್ಸೆ ನೀಡ್ತಿಲ್ಲ. ಇದ್ರಲಿರೋ ಆಮ್ಲಜನಕ ಖಾಲಿಯಾಗ್ತಾ ಇದೆ. ಇದ್ರಲ್ಲಿ ಸರಿಯಾಗಿ ಉಸಿರಾಡಲು ನನಗೆ ಆಗ್ತಿಲ್ಲ, ಇದ್ರಲ್ಲಿ ಆಕ್ಸಿಜನ್ ಬರ್ತಿದಿಯೋ ಬರ್ತಿಲ್ವೋ ಗೊತ್ತಿಲ್ಲ.. ಜೀವನದಲ್ಲಿ ನಾನು ಈ ಸಲ ಸೋತೆ, ಮತ್ತೆ ಹುಟ್ಟಿ ಬರುತ್ತೇನೆ.. ಹೀಗೆ ತನ್ನ ನೋವನ್ನ ತೋಡಿಕೊಂಡಿದ್ದರು ರಾಹುಲ್.

 

View this post on Instagram

 

A post shared by Jyoti Tiwari (@ijyotitiwari)

ಗಂಡನ ಸಾವಿನ ನಂತರ ವಿಡಿಯೋವೊಂದನ್ನ ಪತ್ನಿ ಜ್ಯೋತಿ ರಾಹುಲ್ ವೋರಾ ಅಪ್​ಲೋಡ್ ಮಾಡಿ, ಪ್ರಧಾನಿ ನರೇಂದ್ರ ಮೋದಿಗೆ ಟ್ಯಾಗ್ ಮಾಡಿದ್ದಾರೆ. ನನ್ನ ಪತಿ ಸಾವಿಗೆ ನ್ಯಾಯ ಸಿಗಲೇ ಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವನ್ನ ಶುರು ಮಾಡಿದ್ದಾರೆ. ಈ ರೀತಿ ರಾಹುಲ್ ವೋರಾಗೆ ಆದ ಸ್ಥಿತಿ ಈಗ ದೇಶದಲ್ಲಿ ಅನೇಕಜನರಿಗೆ ಆಗುತ್ತಿದೆ. ಆಮ್ಲಜನಕವಿಲ್ಲದೆ, ಸರಿಯಾದ ಟ್ರೀಟ್​​ಮೆಂಟ್ ಇಲ್ಲದೆ ಜನ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ರಾಹುಲ್ ವೋರಾ ಅವರ ಪತ್ನಿ ಜ್ಯೋತಿ ನ್ಯಾಯಕ್ಕಾಗಿ ಶುರು ಮಾಡಿರೋ ಅಭಿಯಾನವನ್ನ ಸೋಶಿಲ್ ಮೀಡಿಯಾದಲ್ಲಿ ಎತ್ತಿ ಹಿಡಿಯುತ್ತಿದ್ದಾರೆ. ಈ ಸಾವಿಗೆ ಕಾರಣಕರ್ತರಾದವರನ್ನ ಶಿಕ್ಷಿಸಬೇಕು, ಸರಿಯಾದ ಸಮಯಕ್ಕೆ ಚಿಕಿತ್ಸೆಯ ಜೊತೆಗೆ ಆ್ಯಕ್ಸಿಜನ್ ಸಿಕ್ಕಿದ್ರೆ ರಾಹುಲ್ ವೋರಾ ಬದುಕುತ್ತಿದ್ದರು ಎಂದು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕೆಟ್ಟ ಸಂದರ್ಭದಲ್ಲಿ ಯಾರಿಗೆ ಯಾರು ದೂರೋದು ಗೊತ್ತಾಗುತ್ತಿಲ್ಲ. ಜನ ಮನ ಸಂಕಷ್ಟದಲ್ಲಿ ಕಾಲ ದೂಡುತ್ತಿದೆ. ಆದ್ರೆ ಸರ್ಕಾರ ಮಾತ್ರ ಕೊವೀಡ್ ನಿವಾರಣೆಗೆ ಸರ್ಕಸ್ ಮಾಡ್ತಲೇ ಇದೆ. ಸರ್ಕಾರಕ್ಕೆ ಸೋಂಕು ಮತ್ತು ಸಾವು ಬರಿ ಲೆಕ್ಕ. ಆದ್ರೆ ವ್ಯಕ್ತಿಯನ್ನ ಕಳೆದು ಕೊಂಡ ಕುಟುಂಬಕ್ಕೆ ನುಂಗಲಾಗದ ದುಃಖ. ಇನ್ನಾದ್ರು ಪ್ರತಿ ಮನುಷ್ಯನ ಜೀವಕ್ಕೂ ಬೆಲೆ ಬರಬೇಕು. ಸತ್ಕಾಲದಲ್ಲಿ ಸತ್ಕಾಕಾರ್ಯದಂತೆ ಕೊವೀಡ್ ಚಿಕಿತ್ಸೆ ಮನೆ ಮನೆಗೆ ತಲುಪಬೇಕು, ಜನ ಸಾಮಾನ್ಯರು ಧೈರ್ಯದಿಂದ ಬದುಕ ಬೇಕು. ಇನ್ನಾದ್ರು ಈ ರೀತಿ ಆಕ್ಸಿಜನ್ ಕೊರೊತೆಯಿಂದ ಸಾವುಗಳ ನೋವುಗಳ ನಿಲ್ಲಬೇಕು. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನ ಸರ್ಕಾರ ಸಮರೋಪದಿಯಾಗಿ ಮಾಡಲೇಬೇಕು.

The post ಸಾವಿಗೂ ಮುನ್ನ ನಟನಿಂದ ಹೃದಯಹಿಂಡುವ ವಿಡಿಯೋ, ನ್ಯಾಯಕ್ಕಾಗಿ ಪತ್ನಿ ಹೋರಾಟ appeared first on News First Kannada.

Source: newsfirstlive.com

Source link