ರಾಯಚೂರು: ಸಾವಿನಲ್ಲೂ ಅಕ್ಕ-ತಮ್ಮ ಒಂದಾದ ಘಟನೆ ಮಾನ್ವಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ತಮ್ಮ ನಿಧನರಾಗಿದ್ದರು. ತಮ್ಮನ ಸಾವಿನ ಸುದ್ದಿ ಕೇಳಿದ್ದೇ ತಡ ದಿಢೀರ್ ಹೃದಯಾಘಾತವಾಗಿ ಅಕ್ಕ ಸಾವನ್ನಪ್ಪಿದರು.
ತಮ್ಮ ಸುಂಕಪ್ಪ (75), ಅಕ್ಕ ಮಾರಮ್ಮ (80) ಮೃತ ದುರ್ದೈವಿಗಳು. ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನಲ್ಲೂ ಅಕ್ಕ-ತಮ್ಮ ಒಂದಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.