ಬೆಂಗಳೂರು: ನಟ ಸಂಚಾರಿ ವಿಜಯ್ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಇಂದು ಮುಂಜಾನೆ 3.34ರ ಸುಮಾರಿಗೆ ಅವರ ಹೃದಯಬಡಿತ ನಿಂತಿದೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, 7 ಗಂಟೆಯೊಳಗೆ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ.

ಸಂಚಾರಿ ವಿಜಯ್ ಅವರ ಅಂಗಾಂಗಗಳನ್ನ ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಅವರ ಅಂಗಾಗಗಳಿಂದ 7 ಜನರಿಗೆ  ಜೀವನ ಸಿಕ್ಕಂತಾಗಿದೆ. ಒಂದು ಲಿವರ್, ಎರಡು ಕಣ್ಣು, ಎರಡು ಕಿಡ್ನಿ, ಎರಡು ಹಾರ್ಟ್​​ ವಾಲ್ಸ್ ತೆಗೊಂಡಿದ್ದೇವೆ. ಮರಣೋತ್ತರ ಪರೀಕ್ಷೆ ಮುಗಿದ ಕೂಡಲೇ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಕ್ಕೆ ಸಿದ್ಧತೆ ನಡೆಸಲಾಗ್ತಿದೆ. ಈಗಾಗಲೇ ಸಂಚಾರಿ ವಿಜಯ್ ದೇಹದ ಅಂಗಾಗಳು ಅವಶ್ಯಕ ಇರುವವರ ದೇಹಕ್ಕೆ ನೀಡಲಾಗ್ತಿದೆ. ಸಂಬಂಧಪಟ್ಟ ಆಸ್ಪತ್ರೆಯವ್ರು ತೆಗೆದುಕೊಂಡು ಹೋಗಿದ್ದು ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿದ್ದಾರೆ ಅಂತ ಜೀವ ಸಾರ್ಥಕತೆ ತಂಡದ ನೌಷದ್ ಪಾಶ ಹೇಳಿದ್ದಾರೆ.

The post ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್​.. 7 ಜನರಿಗೆ ಜೀವನ appeared first on News First Kannada.

Source: newsfirstlive.com

Source link