ಸಾವಿನ ಮೇಲೆ ರಾಜಕಾರಣ ಮಾಡುವ ವ್ಯವಸ್ಥೆ ಬಂದಿದೆ, ಬಿಜೆಪಿ ಆ ಕೆಲಸ ಮಾಡುತ್ತಿದೆ: ಮಧು ಬಂಗಾರಪ್ಪ ಕಿಡಿ – state bjp doing politics on dead body; said madhu bangarappa


ರಾಜ್ಯ ಬಿಜೆಪಿ ಸರ್ಕಾರ ಸಾವಿನ ಮೇಲೆ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಂಡ್ಯದಲ್ಲಿ ಹೇಳಿಕೆ ನೀಡಿದ್ದಾರೆ.

ಸಾವಿನ ಮೇಲೆ ರಾಜಕಾರಣ ಮಾಡುವ ವ್ಯವಸ್ಥೆ ಬಂದಿದೆ, ಬಿಜೆಪಿ ಆ ಕೆಲಸ ಮಾಡುತ್ತಿದೆ: ಮಧು ಬಂಗಾರಪ್ಪ ಕಿಡಿ

ಓಬಿಸಿ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ


ಮಂಡ್ಯ: ಹಿಂದುತ್ವ ಸಂಪೂರ್ಣ ಕುಸಿಯುತ್ತಿದೆ. ಸಾವಿನ ಮೇಲೆ ರಾಜಕಾರಣ ಮಾಡುವ ವ್ಯವಸ್ಥೆ ಬಂದಿದೆ. ರಾಜ್ಯ ಬಿಜೆಪಿ ಸರ್ಕಾರ ಸಾವಿನ ಮೇಲೂ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ (madhu bangarappa) ವಾಗ್ದಾಳಿ ಮಾಡಿದರು. ಪರೇಶ್ ಮೇಸ್ತ ಸಾವು ಆಕಸ್ಮಿಕ ಎಂದು ಸಿಬಿಐ ವರದಿ ನೀಡಿದೆ. ಮೇಸ್ತ ಸಾವನ್ನು ಬಿಜೆಪಿ ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿತು. 20% ಆಜಾನ್ ಆಫ್​ ಮಾಡಿಸಿ 80% ಹಿಂದೂಗಳಿಗೆ ದ್ರೋಹ ಮಾಡಿದರು. ಬಿಜೆಪಿ ನಾಯಕರಿಗೆ ಮುಸ್ಲಿಮರ ಮೇಲೆ ದ್ವೇಷ ಇತ್ತು. ಕರಾವಳಿ ಭಾಗದಲ್ಲಿ ಅಮಾಯಕ ಜನರು ಸಾಯುತ್ತಿದ್ದಾರೆ. ಕಾಂಗ್ರೆಸ್ಸಿಗರು ಧರ್ಮ, ಜಾತಿ ಮೇಲೆ ರಾಜಕಾರಣ ಮಾಡಿಲ್ಲ. ಬಿಜೆಪಿಯವರು ಧರ್ಮ, ಜಾತಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಕಿಡಿಕಾರಿದರು.

ಕಾಂಗ್ರೆಸ್​ನಿಂದ ಮಾತ್ರ ಸಂಘರ್ಷ ಬದಲಾವಣೆ ಮಾಡಲು ಸಾಧ್ಯ:

ಬಿಜೆಪಿಗೆ ಸಹಕಾರ ಮಾಡಿದ್ದು ವಿಶ್ವ ಹಿಂದೂ ಪರಿಷತ್. ಕಾರ ಟೈರ್ ಪಂಚರ್ ಮಾಡಿದ್ದು ಭಜರಂಗದಳದವರು. ಗೋ ಬ್ಯಾಕ್ ಹೇಳಿದ್ದು RSS ನವರು. ಧರ್ಮ ಧರ್ಮದ ನಡುವೆ ಸಂಘರ್ಷ ಆಯ್ತು. ಚುನಾವಣೆ ಸಂದರ್ಭದಲ್ಲಿ ಮಾತ್ರ ಅಷ್ಟೇ. ಆಮೇಲೆ ಇವರು ಮಾತನಾಡಲ್ಲ. ಹಿಂದೂಳಿದವನು ಸಹಜ ಸಾವು ಅಂದ್ರು. ಆ ಸಾವನ್ನ ತಮ್ಮ ಸ್ವಾರ್ಥಕ್ಕೆ ಉಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದ್ದರು. ಆಜಾನ್ ಆಫ್ ಮಾಡಿಸಿದ್ದು, ಗಣೇಶ ಹಬ್ಬನ ಜೋರಾಗಿ ಮಾಡಲಿಕೆ ಆಗಿಲ್ಲ ಅಂತ. ಏನು ತೊಂದರೆ ಇರಲಿಲ್ಲ, ಎಲ್ಲರು ಸಹ ಆರಾಮಾಗಿದ್ರು. ಪ್ರೀತಿ ವಿಶ್ವಾಸದಿಂದ ಜನರು ಇದ್ದರು. ಕರಾವಳಿ ಭಾಗದಲ್ಲಿ ಬಹಳ ಅಮಾಯಕರು ಸಾಯುತ್ತಿದ್ದಾರೆ. ಕಾಂಗ್ರೆಸ್​ನಿಂದ ಮಾತ್ರ ಸಂಘರ್ಷ ಬದಲಾವಣೆ ಮಾಡಲು ಸಾಧ್ಯ. ಶಿವಮೊಗ್ಗದಲ್ಲಿ ಹರ್ಷ ಕೊಲೆ ಏನಾಯ್ತು ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ದೊಡ್ಡ ದೊಡ್ಡವರು ರಾಜಕಾರಣ ಮಾಡಿದ್ದಾರೆ. ಯಾರು ಸಹ ಧರ್ಮ, ಜಾತಿ ಮೇಲೆ ರಾಜಕಾರಣ ಮಾಡಿಲ್ಲ. ಇವತ್ತು ಬಿಜೆಪಿಯವರು ಧರ್ಮ, ಜಾತಿ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.

ಕನಕದಾಸರ ಭಾವಚಿತ್ರಕ್ಕೆ ಮಧು ಬಂಗಾರಪ್ಪ ಪುಷ್ಪಾರ್ಚನೆ

ಇಂದು ಕನಕದಾಸರ ಜಯಂತಿ ಹಿನ್ನಲೆ, ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಕನಕದಾಸರ ಜಯಂತಿ ಆಚರಣೆ ಮಾಡಲಾಯಿತು. ಕನಕದಾಸರ ಭಾವಚಿತ್ರಕ್ಕೆ ಮಧು ಬಂಗಾರಪ್ಪ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು,  ಹಿಂದೂಳಿದ ವರ್ಗಗಳ ವಿಭಾಗ ಮಟ್ಟದಲ್ಲಿ ಸಭೆ ಮಾಡಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸಧೃಡತೆಯ ಬಗ್ಗೆ, ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿಡಿ ಗಂಗಾಧರ್, ಮಾಜಿ ಸಚಿವ ಆತ್ಮಾನಂದ, ಮುಖಂಡ ಡಾ.ಕೃಷ್ಣ, ರಾಮಲಿಂಗೂ ಸೇರಿ ಹಲವರು ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಜಾ ಸುದ್ದಿ

TV9 Kannada


Leave a Reply

Your email address will not be published.