ಸಾವಿರಾರು ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಿದ ರವಿ ಚನ್ನಣ್ಣವರ | Preparing for Competitive Exams IPS Officer Ravi Channannavar Guides Many Aspirants


ಸಾವಿರಾರು ಆಕಾಂಕ್ಷಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಿದ ರವಿ ಚನ್ನಣ್ಣವರ

ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಪಿಎಸ್​ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಮಾತನಾಡಿದರು

ದಾವಣಗೆರೆ: ಸಾವಿರಾರು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣವರ ಭಾನುವಾರ ಉಚಿತ ಮಾರ್ಗದರ್ಶನ ನೀಡಿದರು. ನಗರದ ತ್ರಿಶೂಲ ಕಲಾಭವನದಲ್ಲಿ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಶಿಸ್ತು ಅಂದ್ರೆ ಅಂದುಕೊಂಡಿದ್ದನ್ನ ಹಟ ಹಿಡಿದು ಸಾಧಿಸುವುದು‌. ಇದು ನಿಮಗೆ ಇಷ್ಟವಿಲ್ಲದೆ ಇದ್ದರೂ ಸಾಧನೆಗೆ ಹಟ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನನಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಧಾರವಾಡದಲ್ಲಿ ನನಗೆ ಊಟ-ಬಟ್ಟೆ ಕೊಡಿಸಿ ಈ ಮಟ್ಟಕ್ಕೆ ಬೆಳೆಯಲು ಕಾರಣರಾದವರು ಇದೀಗ ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಡೆಸಬೇಕಾದ ಸಿದ್ಧತೆ ಹೀಗೆ ಇರಬೇಕು ಎಂದು ನಾವು ಅವರ ಇಂಗ್ಲಿಷ್ ಭೋಧನೆಯಿಂದ ತಿಳಿದುಕೊಂಡೆವು ಎಂದು ನೆನಪಿಸಿಕೊಂಡರು.

ಆಶಾ ಕಾರ್ಯಕರ್ತೆ ಸಾವು
ಕೊರೊನಾದಿಂದ ಚೇತರಿಸಿಕೊಂಡಿದ್ದ ಆಶಾ ಕಾರ್ಯಕರ್ತೆಯೊಬ್ಬರು ನಂತರದ ದಿನಗಳಲ್ಲಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೃತರನ್ನು ಕೊಟ್ರಮ್ಮ (48) ಎಂದು ಗುರುತಿಸಲಾಗಿದೆ. ಕೊರೊನಾದಿಂದ ಚೇರಿಸಿಕೊಂಡಿದ್ದ ಅವರು ಮತ್ತೆ ಅನಾರೋಗ್ಯ ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಸಂಕಷ್ಟದ ವೇಳೆ ಕೊಟ್ರಮ್ಮ ಜಾಗೃತಿ ಮೂಡಿಸಿದ್ದರು.

ಶ್ರೀಗಂಧ ಸಾಗಿಸುತ್ತಿದ್ದವರ ಬಂಧ
ದಾವಣಗೆರೆ ಜಿಲ್ಲೆ ಚನ್ನಗಿರಿ ಪೊಲೀಸರು ಶ್ರೀಗಂಧ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ₹ 3 ಲಕ್ಷ ಮೌಲ್ಯದ 61 ಕೆಜಿ ಗಂಧದ ತುಂಡುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಡ್ನಾಳ್​ ರಾಜಣ್ಣ ಬಡಾವಣೆಯ ನಿವಾಸಿಗಳಾದ ಅಸ್ಲಾಂ ಪಾಷಾ, ಜಬೀವುಲ್ಲಾ, ಮೊಹಮ್ಮದ್ ಷರೀಫ್ ಬಂಧಿತರು.

ಒಮಿಕ್ರಾನ್ ಆತಂಕದ ನಡುವೆ ಮದುವೆಗೆ ಮುಖ್ಯಮಂತ್ರಿ ಬೊಮ್ಮಾಯಿ
ಕರ್ನಾಟಕದಲ್ಲಿ ಕೊರೊನಾ ರೂಪಾಂತರಿ ‘ಒಮಿಕ್ರಾನ್’ ಸೋಂಕಿನ ಆತಂಕದ ನಡುವೆಯೂ ದಾವಣಗೆಯಲ್ಲಿ ನಾಳೆ ಮೂರು ಅತಿಗಣ್ಯ ಕುಟುಂಬಗಳಲ್ಲಿ ಮದುವೆ ನಡೆಯುತ್ತಿದೆ. ಈ ಮದುವೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 11.30ಕ್ಕೆ ಉದ್ಯಮಿ ಕಾಸಲ್ ನಾಗರಾಜ್​ ಅವರ ಸಹೋದರನ ಪುತ್ರ ವೈಭವ್ ವಿವಾಹದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12ಕ್ಕೆ ಜವಳಿ ಉದ್ಯಮಿ ಚನ್ನಬಸಪ್ಪ ಸನ್ಸ್ ಮಾಲೀಕ ಚಂದ್ರಶೇಖರ್​ ಪುತ್ರ ವಿವೇಕ್​ ವಿವಾಹದಲ್ಲಿ ಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಉಮಾ ದೇವರಿಗಿರಿಮಠ ಅವರ ಪುತ್ರಿ ಮೇಘನಾ ವಿವಾಹದಲ್ಲಿ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ದಾವಣಗೆರೆ: ಕೋಡಿ ಹರಿದ ಐತಿಹಾಸಿಕ ಸೂಳೆಕೆರೆ; ದಶಕಗಳ ಬಳಿಕ ಸಂಭ್ರಮ
ಇದನ್ನೂ ಓದಿ: Karnataka Rains: ಭಾರಿ ಮಳೆಗೆ ತತ್ತರಿಸಿದ ಜನತೆ; ದಾವಣಗೆರೆ, ಚಿತ್ರದುರ್ಗದಲ್ಲಿ ಅಪಾರ ಪ್ರಮಾಣದ ಹಾನಿ

TV9 Kannada


Leave a Reply

Your email address will not be published. Required fields are marked *